ಬೆಂಗಳೂರು: ಮಹಾವೀರ ಜಯಂತಿ ಪ್ರಯುಕ್ತ ಮಾರ್ಚ್ 30ರಂದು ಸಾರ್ವತ್ರಿಕ ರಜೆ ಇದ್ದರೂ ವಾಣಿಜ್ಯ ತೆರಿಗೆ ಇಲಾಖೆಯ ಎಲ್ಲಾ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ವಾಣಿಜ್ಯ ತೆರಿಗೆಗಳ ಆಯುಕ್ತರು ತಿಳಿಸಿದ್ದಾರೆ.
2025- 26ನೇ ಆರ್ಥಿಕ ವರ್ಷದ ಮುಕ್ತಾಯದ ಹಿನ್ನೆಲೆಯಲ್ಲಿ ತೆರಿಗೆದಾರರ ಅನುಕೂಲಕ್ಕಾಗಿ ಮಾರ್ಚ್ 30ರಂದು ಮಹಾವೀರ ಜಯಂತಿ ಪ್ರಯುಕ್ತ ಸಾರ್ವತ್ರಿಕ ರಜೆ ಇದ್ದರೂ ವಾಣಿಜ್ಯ ತೆರಿಗೆ ಇಲಾಖೆಯ ಎಲ್ಲಾ ಕಚೇರಿಗಳು ಕಾರ್ಯನಿರ್ವಹಿಸಲಿವೆ ಎಂದು ವಾಣಿಜ್ಯ ತೆರಿಗೆಗಳ ಆಯುಕ್ತ ವಿಪುಲ್ ಬನ್ಸಾಲ್ ತಿಳಿಸಿದ್ದಾರೆ.
ಮಾ. 28, 29ರಂದು ಸಬ್ ರಿಜಿಸ್ಟ್ರಾರ್ ಕಚೇರಿ ಓಪನ್
ಮಾರ್ಚ್ 28. 29ರಂದು ರಜಾ ದಿನಗಳಂದು ಸಬ್ ರಿಜಿಸ್ಟ್ರಾರ್ ಕಚೇರಿಗಳು ಕಾರ್ಯನಿರ್ವಹಿಸಲಿವೆ. ಶನಿವಾರ ಮತ್ತು ಭಾನುವಾರ ರಜಾ ದಿನಗಳಂದು ಕಾರ್ಯನಿರ್ವಹಿಸುವಂತೆ ಎಲ್ಲಾ ಉಪನೋಂದಣಾಧಿಕಾರಿಗಳ ಕಚೇರಿಗೆ ಕಂದಾಯ ಇಲಾಖೆ ಆದೇಶಿಸಿದೆ. ಮಾರ್ಚ್ 28ರಂದು ನಾಲ್ಕನೇ ಶನಿವಾರ ಮತ್ತು ಮಾರ್ಚ್ 29ರಂದು ಭಾನುವಾರ ಸರ್ಕಾರಿ ರಜೆ ಇದೆ. ಈ ರಜಾ ದಿನಗಳನ್ನು ಕರ್ತವ್ಯ ನಿರ್ವಹಿಸುವ ದಿನ ಎಂದು ಪರಿಗಣಿಸಿ ಎರಡೂ ದಿನವೂ ಕಾರ್ಯನಿರ್ವಹಿಸುವಂತೆ ಕಂದಾಯ ಇಲಾಖೆ ನೋಂದಣಿ ಮತ್ತು ಮುದ್ರಾಂಕ ವಿಭಾಗ ಸರ್ಕಾರದ ಅಧೀನ ಕಾರ್ಯದರ್ಶಿ ಅವರು ಅಧಿಸೂಚನೆ ಹೊರಡಿಸಿದ್ದಾರೆ.

