HomeKarnatakaಅಕ್ಕ ಪಡೆ ರಚನೆ: ಪೊಲೀಸ್ ಆಯುಕ್ತರ ಖಡಕ್ ಸುತ್ತೋಲೆ

ಅಕ್ಕ ಪಡೆ ರಚನೆ: ಪೊಲೀಸ್ ಆಯುಕ್ತರ ಖಡಕ್ ಸುತ್ತೋಲೆ

ಅಕ್ಕ ಪಡೆ ರಚನೆ ಕುರಿತು ರಾಜ್ಯ ಪೊಲೀಸ್‌ ಮಹಾ ನಿರ್ದೇಶಕ (ಡಿಜಿ-ಐಜಿಪಿ) ಡಾ.ಎಂ.ಎ.ಸಲೀಂ ಸುತ್ತೋಲೆಯನ್ನು ಹೊರಡಿಸಿದ್ದಾರೆ. ಈ ಸುತ್ತೋಲೆಯು ಅಕ್ಕ ಪಡೆ ರಚನೆ ಮತ್ತು ಕಾರ್ಯ ವಿಧಾನಗಳ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ.

ಸರ್ಕಾರದ ಅಧೀನ ಕಾರ್ಯದರ್ಶಿ-1 ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ದಿನಾಂಕ 11.11.2025 ರಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಹಾಗೂ ವಿಕಲಚೇತನ ಮತ್ತು ಹಿರಿಯ ನಾಗರಿಕರ ಸಬಲೀಕರಣ ಅವರ ಪತ್ರವನ್ನು ಉಲ್ಲೇಖಿಸಿದ್ದಾರೆ.

ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಸರ್ಕಾರವು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮತ್ತು ಗೃಹ ಇಲಾಖೆಯು ಸಹಯೋಗದೊಂದಿಗೆ ‘ಅಕ್ಕ ಪಡೆ’ ಎಂಬ ಒಂದು ನೂತನ ಯೋಜನೆಯನ್ನು ಜಾರಿಗೆ ತರಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಸ್ತುತ ಆಧುನಿಕ ಮತ್ತು ಮಾಹಿತಿ ತಂತ್ರಜ್ಞಾನ ಯುಗದಲ್ಲಿ ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯ (ಅತ್ಯಾಚಾರ, ಲೈಂಗಿಕ ಕಿರುಕುಳ, ಮಾನವ ಕಳ್ಳ ಸಾಗಣೆ, ವರದಕ್ಷಿಣೆ ಕಿರುಕುಳ, ಬಾಲ್ಯ ವಿವಾಹ & ಪೋಕ್ಸೋ) ಅಂತಹ ಪ್ರಕರಣಗಳಿಂದ ಮಹಿಳೆಯರು ಮತ್ತು ಮಕ್ಕಳು ಮಾನಸಿಕ, ದೈಹಿಕವಾಗಿ ಮತ್ತು ಸಾಮಾಜಿಕವಾಗಿ ಹಿಂಸೆಗೊಳಪಟ್ಟಿರುತ್ತಾರೆ.

ಆದುದರಿಂದ ಕರ್ನಾಟಕ ರಾಜ್ಯ ಸರ್ಕಾರವು ಮಹಿಳೆಯರು ಮತ್ತು ಮಕ್ಕಳ ವಿರುದ್ಧ ಪ್ರಖರವಾಗಿ ನಡೆಯುವ ಅಪರಾಧಗಳ ಬಗ್ಗೆ ಕಾನೂನು ಅರಿವು & ಜಾಗೃತಿ ಮೂಡಿಸಲು ಶಿಕ್ಷಣ ನೀಡುವುದು, ಜೊತೆಗೆ ಸಂಕಷ್ಟದಲ್ಲಿ ಇರುವ ಮಹಿಳಾ ಮತ್ತು ಮಕ್ಕಳಿಗೆ ತಕ್ಷಣ ರಕ್ಷಣೆ/ ನೆರವು ನೀಡುವ ಉದ್ದೇಶದಿಂದ ಅಕ್ಕ ಪಡೆ ಎಂಬ ತಂಡವನ್ನು ದಿನಾಂಕ 28/11/2025 ರಿಂದ ರಾಜ್ಯದ 31 ಜಿಲ್ಲೆ & 5 ಪೊಲೀಸ್ ಕಮೀಷನರೇಟ್‌ಗಳಲ್ಲಿ ಜಾರಿಗೆ ತರಲಾಗಿದೆ.

ಅಕ್ಕ ಪಡೆಯ ರಚನೆ

  • ಅಕ್ಕ ಪಡೆಯ ತಂಡಕ್ಕೆ ಪ್ರತಿ ಜಿಲ್ಲೆ/ ಕಮೀಷನರೇಟ್‌ಗಳಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್‌ ಆಯುಕ್ತರು 4 ಸಂಖ್ಯೆಯ ಮಹಿಳಾ ಹೋಂಗಾರ್ಡ್‌ಗಳನ್ನು ನೇಮಕ ಮಾಡುವ ಪ್ರಕ್ರಿಯೆಯನ್ನು ಅತ್ಯಂತ ಗಂಭೀರವಾಗಿ ಪರಿಗಣಿಸತಕ್ಕದ್ದು, ಅಲ್ಲದೇ ವೈಯಕ್ತಿಕವಾಗಿ ಗಮನ ಹರಿಸಿ ಸದೃಢ ದೇಹದಾರ್ಡ್ಯತೆ ಮತ್ತು ಆರೋಗ್ಯ ಹೊಂದಿರುವ 35 ವರ್ಷದೊಳಗಿನವರನ್ನು ನೇಮಿಸುವುದು.
  • ಆಯ್ಕೆ ಮಾಡಿದ ಮಹಿಳಾ ಹೋಂಗಾರ್ಡ್‌ ಅವರಿಗೆ ಮಹಿಳೆಯರು ಮತ್ತು ಮಕ್ಕಳ ಮೇಲಿನ ದೌರ್ಜನಗಳ ಕುರಿತು ಸಂಪೂರ್ಣ ತರಬೇತಿಯನ್ನು ನೀಡಿ ಅವರಿಗೆ ಈ ಬಗ್ಗೆ ಕೈಪಿಡಿಯನ್ನು ನೀಡಿ ಕರ್ತವ್ಯವನ್ನು ನಿರ್ವಹಿಸಲು ತಿಳಿಸುವುದು. ಒಂದು ವಾರದ ತರಬೇತಿ ನೀಡಲು ಸಂಬಂಧಪಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಪೊಲೀಸ್ ಆಯುಕ್ತರು ಕ್ರಮ ಕೈಗೊಳ್ಳುವುದು.
  • ಅಕ್ಕ ಪಡೆ ತಂಡದಲ್ಲಿ ಕರ್ತವ್ಯ ನಿರ್ವಹಿಸುವ 4 ಮಹಿಳಾ ಹೋಂ ಗಾರ್ಡ್ ಅವರಿಗೆ ಸರ್ಕಾರವು ನಿಗದಿಪಡಿಸಿದ ವೇತನದ ವೆಚ್ಚವನ್ನು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೌರವ ಧನ ಮಂಜೂರಿಸುವುದು ಅಲ್ಲದೇ ಅಕ್ಕ ಪಡೆ ತಂಡಗಳು ಜಿಲ್ಲಾ ಹಾಗೂ ಕಮೀಷನರೇಟ್ ವ್ಯಾಪ್ತಿಯಲ್ಲಿ ಗಸ್ತು ಸಂಚರಿಸಲು ಅಗತ್ಯವಾದ ವಾಹನಗಳನ್ನು (ಮಹೇಂದ್ರ ಬೊಲೆರೊ) ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಘಟಕಗಳಿಗೆ ಹಂಚಿಕೆ ಮಾಡಲಾಗುವುದು.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಂಚಿಕೆಮಾಡಲಾದ ವಾಹನಗಳ ಚಾಲನೆ, ನಿರ್ವಹಣೆ, ಮತ್ತು ಇಂಧನದ ವೆಚ್ಚವನ್ನು ಆಯಾ ಪೊಲೀಸ್ ಇಲಾಖೆಯ ಘಟಕಾಧಿಕಾರಿಗಳು ಸಾರಿಗೆ ವೆಚ್ಚದಡಿ ಭರಿಸಲು ಕ್ರಮವಹಿಸಬೇಕಾಗಿರುತ್ತದೆ.
  • ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಹಂಚಿಕೆ ಮಾಡಲಾಗಿರುವ ವಾಹನವನ್ನು ಅಕ್ಕ ಪಡೆಯ ಕರ್ತವ್ಯಕ್ಕೆ ಮಾತ್ರ ಉಪಯೋಗಿಸುವುದು ಮತ್ತು ಸದರಿ ವಾಹನಕ್ಕೆ ಪ್ರತ್ಯೇಕ ಲಾಗ್ ಬುಕ್ ನಿರ್ವಹಣೆಯನ್ನು ಮಾಡಲು ಸೂಚಿಸಿದೆ. ಪಡೆಯಲ್ಲಿ ಕಾರ್ಯನಿರ್ವಹಿಸುವ ಮಹಿಳಾ ಹೋಂ ಗಾರ್ಡ್ ಗಳಿಗೆ ಕಮಾಂಡೋ ಸಮವಸ್ತ್ರವನ್ನು ಆಯಾ ಜಿಲ್ಲಾ ಪೊಲೀಸ್ ಮತ್ತು ಕಮೀಷನರೇಟ್ ಕಛೇರಿಯಿಂದ ಒದಗಿಸುವುದು.

ಅಕ್ಕ ಪಡೆಯ ಕಾರ್ಯನಿರ್ವಹಣೆಯನ್ನು ಜಿಲ್ಲಾ ಮತ್ತು ಕಮೀಷನರೇಟ್ ಮಟ್ಟದಲ್ಲಿ ಪರಿಶೀಲಿಸಲು ಹಾಗೂ ವಿವಿಧ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಲು ಸಮಿತಿಯನ್ನು ರಚಿಸಬೇಕು ಎಂದು ಸುತ್ತೋಲೆ ಹೇಳಿದೆ.

  • ಅಧ್ಯಕ್ಷರು: ಜಿಲ್ಲಾ ಪೊಲೀಸ್‌ ಅಧೀಕ್ಷಕರು/ ಪೊಲೀಸ್ ಕಮೀಷನರ್
  • ಉಪಾಧ್ಯಾಕ್ಷರು: ಜಿಲ್ಲಾ ಉಪ ನಿರ್ದೇಶಕರು, ಮಹಿಳಾ, ಮಕ್ಕಳ ಅಭಿವೃದ್ಧಿ
  • ಸದಸ್ಯರು: ಉಪ ನಿರ್ದೇಶಕರು ಜಿಲ್ಲಾ ಶಿಕ್ಷಣ ಇಲಾಖೆ.
  • ಸದಸ್ಯರು: ಉಪ ನಿರ್ದೇಶಕರು ಜಿಲ್ಲಾ ಸಮಾಜ ಕಲ್ಯಾಣ ಇಲಾಖೆ
  • ಸದಸ್ಯರು: ಉಪಾಧೀಕ್ಷಕರು (ಮಹಿಳೆ) ಪೊಲೀಸ್‌ ಇಲಾಖೆ

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular