HomeBusinessಮೈಸೂರಿನಲ್ಲಿ ಮೊದಲ ಅಕ್ಕ ಕೆಫೆ ಚಾಲನೆ:ಫೈವ್ ಸ್ಟಾರ್ ಲುಕ್ ಮನೆ ಮಂದಿಯ ರುಚಿ ದರ ಮಾತ್ರ...

ಮೈಸೂರಿನಲ್ಲಿ ಮೊದಲ ಅಕ್ಕ ಕೆಫೆ ಚಾಲನೆ:ಫೈವ್ ಸ್ಟಾರ್ ಲುಕ್ ಮನೆ ಮಂದಿಯ ರುಚಿ ದರ ಮಾತ್ರ ಅತೀ ಕಡಿಮೆ

ಮುಖ್ಯಮಂತ್ರಿ ತವರು ಮೈಸೂರು ಜಿಲ್ಲೆಯಲ್ಲಿ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾದ ಅಕ್ಕ ಕೆಫೆ ಜಿಲ್ಲಾ ಪಂಚಾಯತ್ ಕಚೇರಿ ಹಿಂಭಾಗದಲ್ಲಿ ಅಧಿಕೃತವಾಗಿ ಕಾರ್ಯಾರಂಭ ಮಾಡಿದೆ. ವಿಶೇಷವೆಂದರೆ ಈ ಕೆಫೆಯನ್ನು ಐವರು ಗ್ರಾಮೀಣ ಮಹಿಳೆಯರು ಸಂಪೂರ್ಣವಾಗಿ ಮುನ್ನಡೆಸುತ್ತಿದ್ದು ಇದು ಮಹಿಳಾ ಸ್ವಾವಲಂಬನೆಯ ಹೊಸ ಮೈಲಿಗಲ್ಲಾಗಿದೆ.

ರಾಜ್ಯ ಬಜೆಟ್‌ನಲ್ಲಿ ಘೋಷಣೆಯಾಗಿದ್ದ ಮಹಿಳಾ ಸಬಲೀಕರಣದ ಕನಸು ಈಗ ನನಸಾಗಿದೆ ರಾಜ್ಯಾದ್ಯಂತ 50ಕ್ಕೂ ಹೆಚ್ಚು ಅಕ್ಕ ಕೆಫೆಗಳನ್ನು ತೆರೆಯುವ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಭಾಗವಾಗಿ, ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಜಿಲ್ಲೆಯ ಮೊದಲ ಕೆಫೆ ಅದ್ಧೂರಿಯಾಗಿ ಚಾಲನೆಗೊಂಡಿದೆ.ನಗರದ ಮಿನಿ ವಿಧಾನಸೌಧದ ಕಟ್ಟಡದ ಹಿಂಭಾಗ ಮತ್ತೊಂದು ಅಕ್ಕ ಕೆಫೆ ಕಟ್ಟಡ ಸಿದ್ಧವಾಗಿದ್ದು, ಶೀಘ್ರದಲ್ಲೇ ಉದ್ಘಾಟಿಸಲಾಗುತ್ತದೆ.

ವಿಶೇಷತೆಗಳೇನು?

ಗ್ರಾಮೀಣ ಮಹಿಳೆಯರ ಸಾರಥ್ಯ: ನಾಗವಾಳ ಗ್ರಾಮದ ಶ್ರೀಗಂಗಾ ಸ್ತ್ರೀ ಶಕ್ತಿ ಸಂಘದ ಐವರು ಮಹಿಳೆಯರು ಈ ಕೆಫೆಯ ಮಾಲೀಕರು ಮತ್ತು ನಿರ್ವಾಹಕರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸರ್ಕಾರಿ ಬೆಂಬಲ: ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಮಿಷನ್ (NRLM) ಅಡಿ 15 ಲಕ್ಷ ರೂ. ವೆಚ್ಚದಲ್ಲಿ ಅತ್ಯಾಧುನಿಕ ಕಟ್ಟಡ ನಿರ್ಮಿಸಿಕೊಡಲಾಗಿದೆ.

ಸ್ವಂತ ಬಂಡವಾಳ: ಮಹಿಳೆಯರು ಸಂಜೀವಿನಿ ಒಕ್ಕೂಟದಿಂದ 2 ಲಕ್ಷ ರೂ. ಸಾಲ ಪಡೆದು ಉದ್ಯಮ ಆರಂಭಿಸಿದ್ದಾರೆ.

ಈ ಕೆಫೆಯ ವಿಶೇಷತೆ ಏನೆಂದರೆ, ಇದು ನೋಡುವುದಕ್ಕೆ ಐಷಾರಾಮಿ ರೆಸ್ಟೋರೆಂಟ್‌ನಂತೆ ಕಂಡರೂ, ಇಲ್ಲಿನ ದರ ಮಾತ್ರ ಹೋಟೆಲ್‌ಗಳಿಗಿಂತ ಕಡಿಮೆ. ಇದರ ಹಿಂದಿನ ಸಿದ್ಧತೆ ಹೀಗಿದೆ:

ಈ ಪ್ರೀಮಿಯಂ ಕೆಫೆ ನಿರ್ಮಾಣಕ್ಕೆ ಸರ್ಕಾರವೇ 15 ಲಕ್ಷ ರೂಪಾಯಿ ಅನುದಾನ ನೀಡಿದೆ. ಹೈಟೆಕ್ ಇಂಟೀರಿಯರ್, ಸುಸಜ್ಜಿತ ನೆಲಹಾಸು ಗೋಡೆ ಮತ್ತು ಛಾವಣಿಯ ವಿನ್ಯಾಸ ಸ್ಟೋರೇಜ್ ಕ್ಯಾಬಿನೆಟ್‌ಗಳು ಮಾತ್ರವಲ್ಲದೆ ಸುರಕ್ಷತೆಗಾಗಿ ಸಿಸಿ ಕ್ಯಾಮೆರಾ ಮತ್ತು ಡಿಜಿಟಲ್ ರಸೀದಿ ಯಂತ್ರಗಳನ್ನೂ ಸರ್ಕಾರಿ ವೆಚ್ಚದಲ್ಲೇ ಒದಗಿಸಲಾಗಿದೆ.

ಮಹಿಳೆಯರ ಪಾಲುದಾರಿಕೆ: ಕಟ್ಟಡ ಸರ್ಕಾರದ್ದಾದರೂ ಒಳಗಿನ ‘ಜೀವ ಮಹಿಳೆಯರದ್ದು ಅಡುಗೆಗೆ ಬೇಕಾದ ಪಾತ್ರೆಗಳು ಓವನ್ ಫ್ರಿಜ್ ಮಿಕ್ಸಿ-ಗ್ರೈಂಡರ್ ಹಾಗೂ ಗ್ಯಾಸ್ ಸಿಲಿಂಡರ್‌ಗಳನ್ನು ಸ್ವಸಹಾಯ ಸಂಘದ ಸದಸ್ಯರೇ ತಮ್ಮ ಉಳಿತಾಯದ ಹಣದಿಂದ ಖರೀದಿಸಿ ಉದ್ಯಮಕ್ಕೆ ಜೀವ ತುಂಬಿದ್ದಾರೆ.

ನೀವು ಕೆಲಸಕ್ಕೆ ಹೋಗುವ ಮುನ್ನ ಅಥವಾ ಆಫೀಸ್ ಮುಗಿಸಿ ಬರುವಾಗಲೂ ಇಲ್ಲಿ ಶುಚಿಯಾದ ಆಹಾರ ಲಭ್ಯ. ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಮಾರುಕಟ್ಟೆ ದರಕ್ಕಿಂತ ಕಡಿಮೆ ಬೆಲೆಗೆ ಊಟ-ತಿಂಡಿ ನೀಡುವುದು ಈ ಕೆಫೆಯ ಉದ್ದೇಶ.

ಅಕ್ಕ ಕೆಫೆ ದರ ಪಟ್ಟಿ ಹೀಗಿದೆ

ಉಪ್ಪಿಟ್ಟು 1 ಪ್ಲೇಟ್​ – 30 ರೂ.

ಮುದ್ದೆ ಸಾರು – 30 ರೂ.

ಕೇಸರಿಬಾತ್ – 30 ರೂ.

ಬಾತ್ – 40 ರೂ.

ಚಿತ್ರಾನ್ನ – 40 ರೂ.

ಉಪ್ಪಿಟ್ಟು + ಕೇಸರಿಬಾತ್ – 40 ರೂ.

ಕಾಫಿ + ಟೀ – 10 ರೂ.

ಬಜ್ಜಿ 4ಕ್ಕೆ – 20 ರೂ

    For Latest News Updates, Join Our Whatsapp Community🚩
    Abinandan
    Abinandan
    ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
    RELATED ARTICLES

    LEAVE A REPLY

    Please enter your comment!
    Please enter your name here

    Most Popular