ಬೆಂಗಳೂರು: ಕರ್ನಾಟಕ ರಾಜಕಾರಣದಲ್ಲಿ ಸಿಎಂ ಸಿದ್ದರಾಮಯ್ಯನವರ ರಾಜೀನಾಮೆ ಬೆನ್ನಲ್ಲೇ ಹೊಸ ಇತಿಹಾಸ ಸೃಷ್ಟಿಯಾಗುತ್ತಿದೆ. ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ (DK Shivakumar) ಅವರು ಅಧಿಕಾರ ವಹಿಸಿಕೊಳ್ಳುವುದು ನೂರಕ್ಕೆ ನೂರರಷ್ಟು ಫಿಕ್ಸ್ ಆಗಿದೆ. ಆದರೆ, ಈ ಬಿಗ್ ಕ್ಲೈಮ್ಯಾಕ್ಸ್ ನಡುವೆ ಡಿಕೆಶಿ ಅವರ ಹಠಾತ್ ಮೌನದ ಹಿಂದಿನ ಅಸಲಿ ರಹಸ್ಯವೇನು ಗೊತ್ತಾ? ಅದರ ಹಿಂದೆ ತುಮಕೂರಿನ ನೊಣವಿನಕೆರೆ ಅಜ್ಜಯ್ಯನ ಶಕ್ತಿಶಾಲಿ ಆಜ್ಞೆ ಇದೆ
“ಮಾತು ಆಡಿದರೆ ಮುತ್ತು ಒಡೆದು ಹೋಗಲಿದೆ” ಎನ್ನುವ ನೊಣವಿನಕೆರೆ ಅಜ್ಜಯ್ಯನ ಸೂಚನೆಯ ಬೆನ್ನಲ್ಲೇ ಡಿಕೆಶಿ ಸದ್ಯ ಕಂಪ್ಲೀಟ್ ಸೈಲೆಂಟ್ ಮೋಡ್‌ಗೆ ಜಾರಿದ್ದಾರೆ. ಮಠದ ರಹಸ್ಯ ಮತ್ತು ಇಂದಿನ ಮಹತ್ವದ ಅಪ್ಡೇಟ್ಸ್ ಇಲ್ಲಿದೆ:
ಪದಗ್ರಹಣ ಆಗುವವರೆಗೆ ಯಾರ ಬಳಿಯೂ ಮಾತನಾಡಬೇಡಿ” ಶ್ರೀಗಳ ಎಚ್ಚರಿಕೆ
ಕೆಲಸ ಕೆಡಲಿದೆ ಎಂಬ ಸಂದೇಶ: ತುಮಕೂರು ಜಿಲ್ಲೆ ತಿಪಟೂರಿನ ನೊಣವಿನಕೆರೆ ಶ್ರೀ ಕಾಡುಸಿದ್ದೇಶ್ವರ ಮಠದ ಡಾ. ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿಗಳು (Nonavinakere Ajjayya), ಡಿಕೆ ಶಿವಕುಮಾರ್ ಅವರಿಗೆ ಅತ್ಯಂತ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಮುಖ್ಯಮಂತ್ರಿಯಾಗಿ ಅಧಿಕೃತವಾಗಿ ಪ್ರಮಾಣ ವಚನ ಸ್ವೀಕರಿಸುವವರೆಗೂ ಅವಶ್ಯಕತೆಗಿಂತ ಜಾಸ್ತಿ ಯಾರ ಬಳಿಯೂ ಮಾತನಾಡಬೇಡಿ. ಮಾತಾಡಿದರೆ ಮುತ್ತು ಒಡೆದು ಹೋಗಲಿದೆ, ಅರ್ಥಾತ್ ಕೆಲಸ ಕೆಡಲಿದೆ ಎಂದು ಎಚ್ಚರಿಸಿದ್ದಾರೆ.
ಬ್ರೇಕ್‌ಫಾಸ್ಟ್ ಸಭೆಯ ಬಳಿಕ ಡಿಕೆಶಿ ಮೌನ: ಸ್ವಾಮೀಜಿಗಳ ಈ ಎಚ್ಚರಿಕೆಯ ಹಿನ್ನೆಲೆಯಲ್ಲೇ, ಇಂದು ಬೆಳಗ್ಗೆ ಸಿಎಂ ನಿವಾಸದಲ್ಲಿ ನಡೆದ ಬ್ರೇಕ್‌ಫಾಸ್ಟ್ ಮೀಟಿಂಗ್ ಮುಗಿಸಿ ಹೊರಬಂದ ಡಿಸಿಎಂ ಡಿಕೆ ಶಿವಕುಮಾರ್ ಮಾಧ್ಯಮಗಳಿಗೆ ಯಾವುದೇ ಪ್ರತಿಕ್ರಿಯೆ ನೀಡದೇ ನೇರವಾಗಿ ತೆರಳಿದ್ದಾರೆ.
ಬೆಂಬಲಿಗರಿಗೂ ಹೈ-ಅಲರ್ಟ್ ತಾಕೀತು: ಕೇವಲ ಡಿಕೆಶಿ ಅಷ್ಟೇ ಅಲ್ಲ, ಅವರ ಸೋದರ ಡಿ.ಕೆ. ಸುರೇಶ್ ಹಾಗೂ ಅವರ ಕಂಪ್ಲೀಟ್ ಬೆಂಬಲಿಗ ಗ್ಯಾಂಗ್‌ಗೂ ಯಾವುದೇ ಕಾರಣಕ್ಕೂ ಮಾಧ್ಯಮಗಳ ಮುಂದೆ ಹೇಳಿಕೆ ನೀಡದಂತೆ ಕಟ್ಟುನಿಟ್ಟಿನ ಸೂಚನೆ ರವಾನಿಸಲಾಗಿದೆ.
ಬೆಂಗಳೂರಿನತ್ತ ಧಾವಿಸಿದ ಅಜ್ಜಯ್ಯ: ಇಂದು ಮಧ್ಯಾಹ್ನ ಡಿಕೆಶಿ ಭೇಟಿ
ಆಶೀರ್ವದಿಸಲು ಖುದ್ದಾಗಿ ಹೊರಟ ಶ್ರೀಗಳು: ತಮ್ಮ ಪರಮ ಭಕ್ತನಾಗಿರುವ ಡಿ.ಕೆ. ಶಿವಕುಮಾರ್ ಸಿಎಂ ಗದ್ದುಗೆ ಏರುವುದಕ್ಕೂ ಮುನ್ನ ಆಶೀರ್ವಚನ ನೀಡಲು ಖುದ್ದು ನೊಣವಿನಕೆರೆ ಶ್ರೀಗಳೇ ಬೆಂಗಳೂರಿನತ್ತ ಪ್ರಯಾಣ ಬೆಳೆಸಿದ್ದಾರೆ. ಇಂದು (ಮೇ 28) ಮಧ್ಯಾಹ್ನ 3 ಗಂಟೆಗೆ ಬೆಂಗಳೂರಿನ ಮಠದಲ್ಲೇ ಡಿಕೆಶಿ ಅವರು ಸ್ವಾಮೀಜಿಯವರನ್ನು ಭೇಟಿಯಾಗಿ ವಿಶೇಷ ಆಶೀರ್ವಾದ ಪಡೆಯಲಿದ್ದಾರೆ.
ಅಜ್ಜಯ್ಯನ ಅಪ್ಪಣೆ ಇಲ್ಲದೆ ನಾನು ಯಾವ ಕೆಲಸವೂ ಮಾಡಲ್ಲ
ದಿನಕ್ಕೆ 2 ಬಾರಿ ಮಠಕ್ಕೆ ಭೇಟಿ: ಈ ಹಿಂದೆ ಕಾಂಗ್ರೆಸ್ ಹೈಕಮಾಂಡ್ ಸಿದ್ದರಾಮಯ್ಯ ಹಾಗೂ ಡಿಕೆಶಿಯವರನ್ನು ದೆಹಲಿಗೆ ಕರೆಸಿದ್ದ ಸಂದರ್ಭದಲ್ಲಿ, ದೆಹಲಿ ವಿಮಾನ ಹತ್ತುವ ಮುನ್ನ ಡಿಕೆಶಿ ಒಂದೇ ದಿನ ಎರಡು ಬಾರಿ ನೊಣವಿನಕೆರೆ ಕಾಡಸಿದ್ದೇಶ್ವರ ಮಠಕ್ಕೆ ಭೇಟಿ ನೀಡಿ ಅಜ್ಜಯ್ಯನ ಗದ್ದುಗೆಯ ದರ್ಶನ ಪಡೆದಿದ್ದರು.
ಖಂಡಿತ ಸಿಎಂ ಆಗ್ತಾರೆ ಎಂದಿದ್ದ ಶ್ರೀಗಳು: “ಡಿಕೆ ಶಿವಕುಮಾರ್ ಅವರು ಮಠದ ಪರಮ ಭಕ್ತರು, ಉತ್ತಮ ಸಂಘಟನಾಕಾರರು. ಅವರು ನೂರಕ್ಕೆ ನೂರು ಮುಖ್ಯಮಂತ್ರಿ ಆಗುವುದು ಖಂಡಿತ” ಎಂದು ಶ್ರೀಗಳು ಕಳೆದ ವಾರವೇ ಭವಿಷ್ಯ ನುಡಿದಿದ್ದರು.
ಡಿಕೆಶಿ ಪರಮ ಭಕ್ತಿ: “ನಾನು ಚುನಾವಣೆಯ ನಾಮಪತ್ರ ಸಲ್ಲಿಸುವಾಗ, ಬಿ-ಫಾರಂ ವಿತರಿಸುವಾಗ ಸೇರಿದಂತೆ ಪ್ರತಿಯೊಂದು ಮಹತ್ವದ ಕೆಲಸ ಆರಂಭಿಸುವ ಮುನ್ನ ಅಜ್ಜಯ್ಯನ ಆಶೀರ್ವಾದ ಪಡೆದೇ ಮುಂದಕ್ಕೆ ಹೋಗುತ್ತೇನೆ, ಅವರ ಅಪ್ಪಣೆ ಇಲ್ಲದೆ ನಾನು ಏನನ್ನೂ ಮಾಡಲ್ಲ” ಎಂದು ಡಿಕೆಶಿ ಈ ಹಿಂದೆ ಹಲವು ಬಾರಿ ಬಹಿರಂಗವಾಗಿ ಹೇಳಿಕೊಂಡಿದ್ದಾರೆ.

