HomeLatest NewsBIG NEWS: ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ದಿಢೀರ್ ರದ್ದು

BIG NEWS: ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ದಿಢೀರ್ ರದ್ದು

ಮಂಗಳೂರು: ಕಡಲನಗರಿ ಮಂಗಳೂರಿನಿಂದ ದುಬೈಗೆ ಹೊರಡಬೇಕಿದ್ದ ಏರ್ ಇಂಡಿಯಾ ವಿಮಾನ ದಿಢೀರ್ ರದ್ದುಗೊಂಡಿರುವ ಘಟನೆ ನಡೆದಿದೆ.

ಮಂಗಳೂರಿನಿಂದ ದುಬೈಗೆ ತೆರಳಬೇಕಿದ್ದ ಏರ್ ಇಂಡಿಯಾ ವಿಮಾನ ತಾಂತ್ರಿಕ ದೋಷದಿಂದಾಗಿ ರದ್ದಾಗಿದ್ದು, ಪ್ರಯಾಣಿಕರು ಪರದಾಟ ನಡೆಸಿದ್ದಾರೆ. ಇಂದು ಬೆಳಿಗ್ಗೆ 8:50ಕ್ಕೆ ವಿಮಾನ ಹಾರಾಟವಾರಂಭವಾಗಬೇಕಿತ್ತು. ಆದರೆ ತಾಂತ್ರಿಕ ದೋಷದಿಂದಾಗಿ ಹಾರಾಟ ಸ್ಥಗಿತಗೊಂಡಿದೆ.

ಆರಂಭದಲ್ಲಿ ವಿಮಾನಯಾನ ಸಿಬ್ಬಂದಿ ಒಂದು ಗಂಟೆ ತಡವಾಗಿ ವಿಮಾನ ಹೊರಡಲಿದೆ ಎಂದು ಮಾಹಿತಿ ನೀಡಿದ್ದರು. ಬಳಿಕ ಮಧ್ಯಾಹ್ನ 3:30ಕ್ಕೆ ಫ್ಲೈಟ್ ಟೇಕ್ ಆಫ್ ಆಗಲಿದೆ ಎಂದು ಹೇಳಿದ್ದರು. ಆದರೆ ಆ ಸಮಯ ಮುಗಿದರೂ ವಿಮಾನ ಟೇಕ್ ಆಫ್ ಆಗುವ ಲಕ್ಷಣ ಕಂಡುಬಂದಿಲ್ಲ. ಈ ವೇಳೆ ವಿಚಾರಿಸಿದಾಗ 4 ಗಂಟೆಗೆ ವಿಮಾನ ಹಾರಾಟ ನಡೆಸಲಿದೆ ಎಂದಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಸಂಜೆಯಾದರೂ ವಿಮಾನ ದೈಬೈಗೆ ಹಾರಾಟ ನಡೆಸಿಲ್ಲ. ಬಳಿಕ ಸಂಜೆ 6 ಗಂಟೆಗೆ ಸಮಯ ನಿಗದಿ ಮಾಡಲಾಗಿದೆ ಎಂದು ಹೇಳಿ ವಿಮಾನ ಹಾರಾಟ ರದ್ದು ಪಡಿಸಲಾಗಿದೆ ಎಂದು ತಿಳಿದುಬಂದಿದೆ. ಇದರಿಂದಾಗಿ ಪ್ರಯಾಣಿಕರು ಹೈರಾಣಾಗಿದ್ದಾರೆ.

For Latest News Updates, Join Our Whatsapp Community🚩
RELATED ARTICLES

Most Popular