HomeIndiaBIG NEWS: ಜೂನ್ 21ರಿಂದ ಜುಲೈ 15ರವರೆಗೆ 3 ಮಾರ್ಗಗಳಲ್ಲಿ 'ಏರ್ ಇಂಡಿಯಾ' ಸೇವೆ ಸ್ಥಗಿತ

BIG NEWS: ಜೂನ್ 21ರಿಂದ ಜುಲೈ 15ರವರೆಗೆ 3 ಮಾರ್ಗಗಳಲ್ಲಿ ‘ಏರ್ ಇಂಡಿಯಾ’ ಸೇವೆ ಸ್ಥಗಿತ

ನವದೆಹಲಿ: ಗುಜರಾತ್ ನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತದ ಬೆನ್ನಲ್ಲೇ ಸಾಲು ಸಾಲು ಏರ್ ಇಂಡಿಯಾ ವಿಮಾನಗಳಲ್ಲಿ ತಾಂತ್ರಿಕ ದೋಷ ಕಂಡುಬರುತ್ತಿದೆ. ಈ ಬೆಳವಣಿಗೆ ಬೆನ್ನಲ್ಲೇ ಜುಲೈ 15ರವರೆಗೆ ಕೆಲ ಅಂತರಾಷ್ಟ್ರೀಯ ವಿಮಾನ ಸಂಚಾರ ಸ್ಥಗಿತಗೊಳಿಸುವುದಾಗಿ ಘೋಷಿಸಿದೆ.

ಟಾಟಾ ಗ್ರೂಪ್ ಒಡೆತನ ಏರ್ ಇಂಡಿಯಾ ಜೂನ್ 21ರಿಂದ ಜುಲೈ 15ರವರೆಗೆ 3 ಅಂತರಾಷ್ಟ್ರೀಯ ಮಾರ್ಗಗಳಲ್ಲಿ ತಮ್ಮ ವಿಮಾನ ಹಾರಾಟ ಸೇವೆ ಸ್ಥಗಿತಗೊಳ್ಳಲಿದೆ ಎಂದು ಸ್ಪಷ್ಟಪಡಿಸಿದೆ. ಇದಲ್ಲದೇ ಇತರೆ 16 ಮಾರ್ಗಗಳಲ್ಲಿಯೂ ಸೇವೆ ಕಡಿತಗೊಳಿಸಲಾಗುತ್ತಿದೆ ಎಂದು ತಿಳಿಸಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ದೆಹಲಿ-ನೈರೋಬಿ, ಅಮೃತಸರ-ಲಂಡನ್, ಗೋವಾ-ಲಂಡನ್ ನಡುವಿನ ವಿಮಾನ ಹಾರಾಟ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ. ಇದೇ ವೇಳೆ ಉತ್ತರ ಅಮೆರಿಕಾ, ಯುರೋಪ್, ಆಸ್ಟ್ರೆಲಿಯಾ ಹಾಗೂ ಇತರ ಮಾರ್ಗಗಳಲ್ಲಿ 16 ಅಂತರಾಷ್ಟ್ರೀಯ ವಿಮಾನಗಳ ಸಂಖ್ಯೆಯನ್ನು ಕಡಿತಗೊಳಿಸಲಗಿದೆ.

ಎರಡು ಪ್ರಮುಖ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಏರ್ ಇಂಡಿಯಾ ತಿಳಿಸಿದೆ. ಮೊದಲನೆಯದಾಗಿ ವಿಮಾನಗಳ ಕಟ್ಟುನಿಟ್ತಿನ ಭದ್ರತಾ ತಪಾಸಣೆಗೆ ಸಮಯ ನೀಡುವುದು, ಎರಡನೇಯದಾಗಿ ಮಧ್ಯಪ್ರಾಚ್ಯದಲ್ಲಿ ವಾಯುಪ್ರದೇಶ ಮುಚ್ಚುವಿಕೆಯಿಂದಾಗಿ ಹಾರಾಟದ ಅವಧಿ ಹೆಚ್ಚಾಗಿದೆ. ಮತ್ತೊಮ್ಮೆ ತೊಂದರೆಗೊಳಗಾದ ಪ್ರಯಾಣಿಕರಿಗೆ ಕ್ಷಮೆ ಕೋರಿರುವ ಏರ್ ಇಂಡಿಯಾ, ಪರ್ಯಾಯ ವಿಮಾನಗಳು, ಉಚಿತ ಮರು ವೇಳಾಪಟ್ಟಿ ಮತ್ತು ಪೂರ್ಣ ಪ್ರಮಾಣದ ಮರುಪಾವತಿಯಂತಹ ಆಯ್ಕೆಗಳನ್ನು ಒದಗಿಸಲಾಗುವುದು ಎಂದು ತಿಳಿಸಿದೆ.

For Latest News Updates, Join Our Whatsapp Community🚩
RELATED ARTICLES

Most Popular