HomeLatest NewsBIG NEWS : 'ಏರ್ ಇಂಡಿಯಾ' ವಿಮಾನ ದುರಂತ : ಟೀ ಸ್ಟಾಲ್ ಬಳಿ ನಿಂತಿದ್ದ...

BIG NEWS : ‘ಏರ್ ಇಂಡಿಯಾ’ ವಿಮಾನ ದುರಂತ : ಟೀ ಸ್ಟಾಲ್ ಬಳಿ ನಿಂತಿದ್ದ 14 ವರ್ಷದ ಬಾಲಕ ದುರ್ಮರಣ.!

ಅಹಮದಾಬಾದ್: ಗುಜರಾತ್ ನ ಅಹಮದಾಬಾದ್ ನಲ್ಲಿ ಏರ್ ಇಂಡಿಯಾ ವಿಮಾನ ದುರಂತ ಪ್ರಕರಣದಲ್ಲಿ 246 ಜನರು ಸಾವನ್ನಪ್ಪಿದ್ದಾರೆ. ವಿಮಾನ ಅಪಘಾತದಿಂದ ಸಂಭವಿಸಿದ ಬೆಂಕಿ ಅವಘಡದಲ್ಲಿ ಟೀ ಸ್ಟಾಲ್ ಬಳಿ ನಿಂತಿದ್ದ ಬಾಲಕ ಕೂಡ ಮೃತಪಟ್ಟಿದ್ದಾನೆ.

ಏರ್ ಇಂಡಿಯಾ ವಿಮಾನ ಪತನಗೊಂಡು ಬಿ.ಜೆ.ಹಾಸ್ಟೆಲ್ ಗೆ ಅಪ್ಪಳಿಸಿತ್ತು. ಈ ವೇಳೆ ಇಡೀ ಹಾಸ್ಟೆಲ್ ಕಟ್ಟಡ ಸುಟ್ಟು ಕರಕಲಾಗಿದೆ. ಹಾಸ್ಟೇಲ್ ನಲ್ಲಿದ್ದ ಹಲವು ವಿದ್ಯಾರ್ಥಿಗಳು, ಸಿಬ್ಬಂದಿಗಳು ಸಾವನ್ನಪ್ಪಿದ್ದಾರೆ. ಹಾಸ್ಟೆಲ್ ಪಕ್ಕದಲ್ಲಿದ್ದ ಕಟ್ಟಡಗಳು ಬೆಂಕಿಗಾಹುತಿಯಾಗಿವೆ. ಹಾಸ್ಟೆಲ್ ಮುಂಭಾಗ ತಮ್ಮದೇ ಟೀ ಅಂಗಡಿ ಮುಂದೆ ನಿಂತಿದ್ದ ಬಾಲಕ ಕೂಡ ಬೆಂಕಿ ಕೆನ್ನಾಲಿಗೆಗೆ ಸಾವನ್ನಪ್ಪಿದ್ದಾನೆ.

14 ವರ್ಷದ ಆಕಾಶ್ ಮೃತ ಬಾಲಕ. ಆಕಾಶ್ ಕುಟುಂಬ ಬಿ.ಜೆ ಹಾಸ್ಟೆಲ್ ಮುಂಭಾಗ ಟೀ ಅಂಗಡಿ ಇಟ್ಟುಕೊಂಡಿತ್ತು. ಅಂಗಡಿಯಲ್ಲಿದ್ದ ತಾಯಿಗೆ ತಿಂಡಿ ಕೊಡಲೆಂದು ಬಾಲಕ ಅಂಗಡಿ ಬಳಿ ಬಂದಿದ್ದ. ಈ ವೇಳೆ ಟೀ ಅಂಗಡಿ ಮುಂದೆ ನಿಂತಿದ್ದ. ಇದೇ ವೇಳೆ ವಿಮಾನ ಪತನಗೊಂಡು ಭೀಕರ ಸ್ಫೋಟಕ್ಕೆ ಬೆಂಕಿ ಹೊತ್ತಿಕೊಂಡಿದೆ. ಬೆಂಕಿಯ ತೀವ್ರತೆಗೆ ಬಾಲಕ ಸಾವನ್ನಪ್ಪಿದ್ದಾನೆ. ಬಾಲಕನ ಸಹೋದರ ಗಂಭೀರವಾಗಿ ಗಾಯಗೊಂಡಿದ್ದಾನೆ. ಗಾಯಾಳುವನ್ನು ಆತನ ತಾಯಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular