HomeLatest NewsGOOD NEWS : ಹಿರಿಯ ನಾಗರಿಕರ 'ದಂತಪಕ್ತಿ' ಯೋಜನೆ ವಯೋಮಿತಿ ಇಳಿಕೆ : ರಾಜ್ಯ ಸರ್ಕಾರದಿಂದ...

GOOD NEWS : ಹಿರಿಯ ನಾಗರಿಕರ ‘ದಂತಪಕ್ತಿ’ ಯೋಜನೆ ವಯೋಮಿತಿ ಇಳಿಕೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ.!

ಬೆಂಗಳೂರು : ಹಿರಿಯ ನಾಗರಿಕರ ದಂತಪಂಕ್ತಿ ಯೋಜನೆಗೆ ವಯೋಮಿತಿ ಇಳಿಕೆ ಮಾಡಿ ರಾಜ್ಯ ಸರ್ಕಾರ ಮಹತ್ವದ ಆದೇಶ ಹೊರಡಿಸಿದೆ. ದಂತಭಾಗ್ಯ ಯೋಜನೆಯಲ್ಲಿ ಸಂಪೂರ್ಣ ದಂತಪಕ್ತಿ ದರ 2000 ದಿಂದ 3000 ರೂ.ಗೆ ಹೆಚ್ಚಳ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.

ಏನಿದೆ ಆದೇಶದಲ್ಲಿ..?
ರಾಜ್ಯದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಹಿರಿಯ ನಾಗರೀಕರಿಗೆ ಉಚಿತವಾಗಿ ದಂತ ಪಂಕ್ತಿ ನೀಡುವ ಉದ್ದೇಶದಿಂದ ದಂತ ಭಾಗ್ಯ ಯೋಜನೆಯನ್ನು ಜಾರಿಗೊಳಿಸಲು ಅನುಷ್ಠಾನ ಮಾರ್ಗಸೂಚಿಗಳನ್ನು ಹೊರಡಿಸಲಾಗಿರುತ್ತದೆ.

ಮೇಲೆ ಓದಲಾದ ಕ್ರಮ ಸಂಖ್ಯೆ (2) ರ ಅದೇಶದಲ್ಲಿ ದಂತ ಭಾಗ್ಯ ಯೋಜನೆ ಸೌಲಭ್ಯ ಪಡೆಯಲು ಹಿರಿಯ ನಾಗರಿಕರ ವಯೋಮಿತಿಯನ್ನು 60 ವರ್ಷದಿಂದ 45 ವರ್ಷಕ್ಕೆ ಇಳಿಸಲಾಗಿದೆ ಹಾಗೂ ಆಸ್ಪತ್ರೆ/ಕಾಲೇಜಿಗೆ ಗುಣಮಟ್ಟದ ದಂತ ಪಂಕ್ತಿಯನ್ನು ನೀಡಲು ಪ್ರತಿ ರೋಗಿಗೆ ರೂ.500.00 ರಿಂದ ರೂ.750.00 ಹೆಚ್ಚಿಸಲಾಗಿದೆ.
ಮೇಲೆ ಓದಲಾದ ಕ್ರಮ ಸಂಖ್ಯೆ (3) ರ ಆದೇಶದಲ್ಲಿ ಪ್ರತಿ ಸಂಪೂರ್ಣ ದಂತೆ ಪಂಕ್ತಿಗೆ ರೂ.750.00 ರಿಂದ ರೂ.2000.00 ಗಳಿಗೆ ಹಾಗೂ ಭಾಗಶಃ ದಂತ ಪಂಕ್ತಿಗೆ ರೂ.300.00 ರಿಂದ 1000.00 ಗಳಿಗೆ ಹೆಚ್ಚಿಸುವುದರೊಂದಿಗೆ ಇನ್ನಿತರ ಮಾರ್ಪಡುಗಳೊಂದಿಗೆ ಆದೇಶ ಹೊರಡಿಸಲಾಗಿರುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪ್ರಸ್ತುತ ಮೇಲೆ ಓದಲಾದ (4) ರ ಎಂಡಿ ಎನ್ಹೆಚ್ಎಂ ಇವರ ಏಕಕಡತದಲ್ಲಿ ದಂತ ಭಾಗ್ಯ ಯೋಜನೆಯಲ್ಲಿ ದಂತ ಪಂಕ್ತಿಗಳನ್ನು ತಯಾರಿಸುವ ಸಾಮಾಗ್ರಿಗಳು, ಕನ್ಸೂಮಬಲ್ಸ್ ಮತ್ತು ಇತರೆ ತಯಾರಿಕ ವೆಚ್ಚಗಳು ಹೆಚ್ಚಾಗುತ್ತಿರುವುದರಿಂದ ದರಗಳನ್ನು ಪರಿಷ್ಕರಿಸಬೇಕಾಗುತ್ತದೆ. ಆದುದರಿಂದ ದಂತಭಾಗ್ಯ ಯೋಜನೆಯಡಿ ಸಂಪೂರ್ಣ ದಂತಪಂಕ್ತಿಗೆ ನೀಡಲಾಗುತ್ತಿರುವ ರೂ. 2000/- ಗಳನ್ನು ರೂ. 3000/- ಗಳಿಗೆ ಹೆಚ್ಚಿಸಲು ರೂ. 50.00 ಲಕ್ಷಗಳ ಹೆಚ್ಚುವರಿ ದಂತಭಾಗ್ಯದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಕೋರಲಾಗಿದೆ.
ಮೇಲೆ ಓದಲಾದ (5)ರ ಆರ್ಥಿಕ ಇಲಾಖೆ ಹಿಂಬರಹದಲ್ಲಿ ದಂತ ಭಾಗ್ಯ ಯೋಜನೆಯ ದಂತಪಂಕ್ತಿಗಳ ಯೂನಿಟ್ ದರಗಳ ಹೆಚ್ಚಳದಿಂದ ಉಂಟಾಗುವ ಹೆಚ್ಚುವರಿ ಮೊತ್ತವನ್ನು ಪುಸಕ್ತ ಸಾಲಿನ ಆಯವ್ಯಯದಲ್ಲಿ ಇಲಾಖೆಗೆ ಒದಗಿಸಲಾದ ಅನುದಾನಕ್ಕೆ ಸೀಮಿತಗೊಳಿಸಿ ವೆಚ್ಚ ಭರಿಸುವ ಷರತ್ತಿಗೊಳಪಟ್ಟು ಸಹಮತಿ ನೀಡಲಾಗಿದೆ.

ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ, ದಂತಭಾಗ್ಯ ಯೋಜನೆಯಲ್ಲಿ ಸಂಪೂರ್ಣ ದಂತಪಂಕ್ತಿಗ ದರವನ್ನು ರೂ. 2000/- ದಿಂದ ರೂ. 3000/-ಗಳಿಗೆ ಹೆಚ್ಚಿಸಲಾಗಿದೆ. ಈ ಹೆಚ್ಚಳದಿಂದ ಉಂಟಾಗುವ ಹೆಚ್ಚುವರಿ ಮೊತ್ತವನ್ನು ಪ್ರಸಕ್ತ ಸಾಲಿನಲ್ಲಿ ಇಲಾಖೆಗೆ ಒದಗಿಸಲಾದ ಆಯವ್ಯಯದಲ್ಲಿ ಭರಿಸತಕ್ಕದ್ದು. ಈ ಆದೇಶವನ್ನು ಆರ್ಥಿಕ ಇಲಾಖೆಯ ಟಿಪ್ಪಣಿ ಸಂಖ್ಯೆ: ಆಇ 555 ವೆಚ್ಚ-5/2025 ದಿನಾಂಕ:17.07.2025ರಲ್ಲಿ ನೀಡಿರುವ ಸಹಮತಿಯನ್ನಯ ಹೊರಡಿಸಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular