HomeLatest Newsಹಸಿ ಬೆಳ್ಳುಳ್ಳಿ, ಈರುಳ್ಳಿ ಸೇವಿಸಿದ ನಂತರ ಬಾಯಿಂದ ವಾಸನೆ ಬರುತ್ತಾ....? ನಿವಾರಿಸಲು ಇದನ್ನು ಸೇವಿಸಿ

ಹಸಿ ಬೆಳ್ಳುಳ್ಳಿ, ಈರುಳ್ಳಿ ಸೇವಿಸಿದ ನಂತರ ಬಾಯಿಂದ ವಾಸನೆ ಬರುತ್ತಾ….? ನಿವಾರಿಸಲು ಇದನ್ನು ಸೇವಿಸಿ

ಅನೇಕರು ಈರುಳ್ಳಿ, ಬೆಳ್ಳುಳ್ಳಿಯನ್ನು ಹಸಿಯಾಗಿ ತಿನ್ನಲು ಬಯಸುತ್ತಾರೆ. ಆದರೆ ಇವುಗಳನ್ನು ಸೇವಿಸಿದರೆ ಬಾಯಿಂದ ಅದರ ವಾಸನೆಯೇ ಬರುತ್ತಿರುತ್ತದೆ. ಇದು ಕೆಲವರಿಗೆ ಕಿರಿಕಿರಿಯನ್ನುಂಟು ಮಾಡುತ್ತದೆ. ಬಾಯಿಂದ ಈ ವಾಸನೆಯನ್ನು ತೆಗೆದು ಹಾಕಲು ಈ ಮನೆಮದ್ದನ್ನು ಬಳಸಿ.

*ನಿಂಬೆ ಹಣ್ಣಿನಿಂದ ಈ ವಾಸನೆಯನ್ನು ನಿವಾರಿಸಬಹುದು. ಹಾಗಾಗಿ ನಿಂಬೆ ಹಣ್ಣಿನ ಪಾನಕ ತಯಾರಿಸಿ ಸ್ವಲ್ಪ ಸ್ವಲ್ಪವಾಗಿ ಸೇವಿಸಿದರೆ ಈ ವಾಸನೆ ನಿವಾರಣೆಯಾಗುತ್ತದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

* ಬಾಯಿಂದ ಈರುಳ್ಳಿ, ಬೆಳ್ಳುಳ್ಳಿಯ ವಾಸನೆಯನ್ನು ತೆಗೆದು ಹಾಕಲು ಸೊಂಪು ಮತ್ತು ಏಲಕ್ಕಿಯನ್ನು ಜಗಿಯಿರಿ. ಇದರಿಂದ ದುರ್ವಾಸನೆ ದೂರವಾಗುತ್ತದೆ. ಇದು ಆರೋಗ್ಯಕ್ಕೂ ಕೂಡ ಉತ್ತಮ.

* ಈ ವಾಸನೆಯನ್ನು ನಿವಾರಿಸಲು ಸೇಬು ಹಣ್ಣು ಸೇವಿಸಿ. ಇದರಲ್ಲಿರುವ ಕಿಣ್ವ ಈರುಳ್ಳಿ, ಬೆಳ್ಳುಳ್ಳಿಯಲ್ಲಿರುವ ಸಲ್ವರ್ ಸಂಯುಕ್ತವನ್ನು ಒಡೆಯುತ್ತದೆ. ಇದರಿಂದ ವಾಸನೆ ನಿವಾರಣೆಯಾಗುತ್ತದೆ.

* ಬಾಯಿಂದ ಈರುಳ್ಳಿ, ಬೆಳ್ಳುಳ್ಳಿಯ ವಾಸನೆಯನ್ನು ತೆಗೆದು ಹಾಕಲು ಹಾಲು ಸಹಕಾರಿ. ಹಾಗಾಗಿ ಈರುಳ್ಳಿ, ಬೆಳ್ಳುಳ್ಳಿಯನ್ನು ಸೇವಿಸಿದ ಬಳಿಕ ಹಾಲು ಕುಡಿಯಿರಿ.

For Latest News Updates, Join Our Whatsapp Community🚩
RELATED ARTICLES

Most Popular