HomeLatest NewsBIG NEWS : ಮದಗ ಮಾಸೂರು ಕೆರೆ ಕಾಮಗಾರಿಗೆ 52.20 ಕೋಟಿ ರೂ.ಆಡಳಿತಾತ್ಮಕ ಅನುಮೋದನೆ :...

BIG NEWS : ಮದಗ ಮಾಸೂರು ಕೆರೆ ಕಾಮಗಾರಿಗೆ 52.20 ಕೋಟಿ ರೂ.ಆಡಳಿತಾತ್ಮಕ ಅನುಮೋದನೆ : ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ

ಹಾವೇರಿ : ಹಾವೇರಿ ಜಿಲ್ಲೆ, ರಟ್ಟಿಹಳ್ಳಿ ತಾಲೂಕು ಮದಗ-ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂಡೆ ಮುಖ್ಯ ನಾಲೆಗಳ ಆಧುನೀಕರಣಗೊಳಿಸುವ ರೂ.52.20 ಕೋಟಿ (ರೂಪಾಯಿ ಐವತ್ತೆರಡು ಕೋಟಿ ಇಪ್ಪತ್ತು ಲಕ್ಷಗಳು ಮಾತ್ರ) ಅಂದಾಜು ಮೊತ್ತದ ಕಾಮಗಾರಿಗೆ (2023-24ನೇ ಸಾಲಿನ ಏಕರೂಪ ದರಪಟ್ಟಿಯನ್ವಯ) ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

ಈ ಆದೇಶವನ್ನು ಕರ್ನಾಟಕ ಸರ್ಕಾರದ (ವ್ಯವಹಾರ ನಿರ್ವಹಣೆ) ನಿಯಮಗಳು, 1977ರ 17ನೇ ನಿಯಮದ 2ನೇ ಉಪನಿಯಮದ ಪರಂತುಕದ ವ್ಯಾಪ್ತಿಯೊಳಗೆ ಬರುತ್ತದೆ ಮತ್ತು ದಿನಾಂಕ:24.07.2025ರ ಸಚಿವ ಸಂಪುಟ ಸಭೆಯ ಪ್ರಕರಣ ಸಂಖ್ಯೆ:ಸಿ.569/2025 ರಂದು ನೀಡಿರುವ ನಿರ್ಣಯದನ್ವಯ ಹೊರಡಿಸಲಾಗಿದೆ.

ಮೇಲೆ ಓದಲಾದ ಪತ್ರದಲ್ಲಿ, ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ನಿಯಮಿತ, ಬೆಂಗಳೂರು ಇವರು ಹಾವೇರಿ ಜಿಲ್ಲೆ, ರಟ್ಟಿಹಳ್ಳಿ ತಾಲೂಕು ಮದಗ- ಮಾಸೂರು ಕೆರೆಯ ಎಡದಂಡೆ ಮತ್ತು ಬಲದಂಡೆ ಮುಖ್ಯ ನಾಲೆಗಳನ್ನು ಆಧುನೀಕರಣಗೊಳಿಸುವ ರೂ.52.20 ಕೋಟಿ (2023-24ನೇ ಸಾಲಿನ ಏಕ ರೂಪ ದರಪಟ್ಟಿಯನ್ವಯ) ಅಂದಾಜು ಮೊತ್ತದ ಕಾಮಗಾರಿಗೆ ಆಡಳಿತಾತ್ಮಕ ಅನುಮೋದನೆ ನೀಡುವಂತೆ ಕೋರಿ ಪ್ರಸ್ತಾವನೆ ಸಲ್ಲಿಸಿರುತ್ತಾರೆ.
ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಮಾಸೂರು ಗ್ರಾಮದ ಬಳಿ ಕುಮುದ್ಧತಿ ನದಿಗೆ ಅಡ್ಡಲಾಗಿ ಮದಗ ಮಾಸೂರು ಕೆರೆಯಿದ್ದು, 14ನೇ ಶತಮಾನದಲ್ಲಿ ವಿಜಯನಗರ ಅರಸರ ಕಾಲದಲ್ಲಿ ಅಣೆಕಟ್ಟೆಯನ್ನು ನಿರ್ಮಿಸಲಾಗಿದೆ. ಸದರಿ ಕೆರೆಯ ಸಂಗ್ರಹಣಾ ಸಾಮರ್ಥ್ಯ 0.056 TMC ಇದ್ದು, 0.718 ಟಿಎಂಸಿ ನೀರಿನ ಬಳಕೆಯೊಂದಿಗೆ 715 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲಾಗಿರುತ್ತದೆ. ಸದರಿ ಕೆರೆಯ ಎಡದಂಡೆ ಕಾಲುವೆ 11.00ಕಿ.ಮೀ ಉದ್ದ ಮತ್ತು ಬಲದಂಡ ಕಾಲುವೆಯು 13.075 ಕಿ.ಮೀ ಉದ್ದವಿದ್ದು, ಕ್ರಮವಾಗಿ 243 ಹೆಕ್ಟೇರ್ ಹಾಗೂ 472 ಹೆಕ್ಟೇರ್ ಪ್ರದೇಶಕ್ಕೆ ನೀರಾವರಿ ಒದಗಿಸಲು ಯೋಜಿಸಲಾಗಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮದಗ-ಮಾಸೂರು ಕೆರೆಯ ಎಡದಂಡೆ ಮತ್ತು ಬಲದಂಡೆ ಕಾಲುವೆಗಳು 1862ರಲ್ಲಿ ನಿರ್ಮಾಣಗೊಂಡಿದ್ದು ಪ್ರಸ್ತುತ ಕಾಲುವೆಗಳ ಭಾಗಶಃ ಲೈನಿಂಗ್ ಹೊಂದಿದ್ದು, ಕಾಲಾಂತರದಲ್ಲಿ ಆಕಾರಗಳನ್ನು ಕಳೆದುಕೊಂಡಿವೆ. ನಾಲೆಯ ಕೆಲವು ಭಾಗಗಳ ತಳಭಾಗದಲ್ಲಿ ಕೊರಕಲು ಉಂಟಾಗಿದ್ದು, ಕೆಲವು ಕಡೆ ಗಿಡ-ಗಂಟೆಗಳು ಬೆಳೆದು ಹೂಳು ತುಂಬಿರುತ್ತದೆ. ಕಾಲುವೆಯಲ್ಲಿ ಬರುವ ಕೆಲವು structures/ ಕಾಲುವೆಯ ಗೇಟುಗಳು ಶಿಥಿಲಗೊಂಡಿದ್ದು, ಕಾಲುವೆಯಿಂದ ನೀರು ಸೋರಿಕೆಯಾಗುತ್ತಿರುತ್ತದೆ. ಇದರಿಂದ, ಯೋಜನೆಯ ಕೊನೆಯ ಭಾಗದ ಫಲಾನುಭವಿಗಳಿಗೆ ನೀರು ಒದಗಿಸಲು ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ರೈತರು, ಸಾರ್ವಜನಿಕರು ಹಾಗೂ ಜನಪ್ರತಿನಿಧಿಗಳು ಕಾಲುವೆ ಆಧುನೀಕರಣಗೊಳಿಸುವಂತೆ ಒತ್ತಾಯಿಸಿರುತ್ತಾರೆ. ಆದ್ದರಿಂದ, ಮದಗ-ಮಾಸೂರು ಕೆರೆಯ ಮುಖ್ಯ ನಾಲೆಗಳ ಆಧುನೀಕರಣ ಕಾಮಗಾರಿಯೊಂದಿಗೆ ಸಾರ್ವಜನಿಕರ ಬೇಡಿಕೆಯಂತೆ ಕೆಲವು ಹೆಚ್ಚುವರಿ ಸಿ.ಡಿ ಕಾಮಗಾರಿಗಳನ್ನು ಕೈಗೊಳ್ಳಲು ಸದರಿ ಯೋಜನೆಯನ್ನು ರೂಪಿಸಲಾಗಿದೆ ಎಂದು ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ನೀರಾವರಿ ನಿಗಮ ರವರು ಪತ್ರದಲ್ಲಿ ವರದಿ ಮಾಡಿರುತ್ತಾರೆ.
, ಮದಗ-ಮಾಸೂರು ಕೆರೆಯ ಎಡದಂಡೆ ಮತ್ತು ಬಲದಂಡೆ ಕಾಲುವೆಗಳ ಆಧುನೀಕರಣ repair and reconstruction of aqueduct, repair/reconstruction of 149 structures including Outlets Inlets, Escape, Road Bridge, Aqueducts, Cart track crossings, Sopanam Cattle ramp, MDR & Canal crossings ಸದರಿ ಯೋಜನೆಗೆ ಪ್ರಸಕ್ತ ಸಾಲಿನಲ್ಲಿ 1/3 ಅನುದಾನದ ಪ್ರಾವಿಧಾನತೆಯನ್ನು ಮಾಡಿಕೊಂಡು 2025-26 ಸಾಲಿನ ಕ್ರಿಯಾ ಯೋಜನೆಯಲ್ಲಿ ಅಳವಡಿಸಿಕೊಳ್ಳಲಾಗುವುದೆಂದು ವ್ಯವಸ್ಥಾಪಕ ನಿರ್ದೇಶಕರು ವರದಿ ಮಾಡಿರುತ್ತಾರೆ.
ಸದರಿ ಯೋಜನೆಯ ವಿವರವಾದ ಯೋಜನಾ ವರದಿಗೆ ದಿನಾಂಕ:22.08.2024 ರಂದು ಜರುಗಿದ ನಿಗಮದ ಅಂದಾಜು ಪರಿಶೀಲನಾ ಸಮಿತಿಯ 111ನೇ ಸಭೆಯಲ್ಲಿ ಸಹಮತಿ ನೀಡಿರುತ್ತದೆ. ಮುಂದುವರೆದು, ದಿನಾಂಕ:25.01.2025ರಂದು ಜರುಗಿದ ನಿಗಮದ ನಿರ್ದೇಶಕರ ಮಂಡಳಿಯ 105ನೇ ಸಭೆಯು ಸದರಿ ಪ್ರಸ್ತಾವನೆಯನ್ನು ಆಡಳಿತಾತ್ಮಕ ಅನುಮೋದನೆಗಾಗಿ ಸರ್ಕಾರಕ್ಕೆ ಸಲ್ಲಿಸಲು ಶಿಫಾರಸು ಮಾಡಿರುವುದಾಗಿ ವ್ಯವಸ್ಥಾಪಕ ನಿರ್ದೇಶಕರು ವರದಿ ಮಾಡಿರುತ್ತಾರೆ.

ಪ್ರಸ್ತಾವನೆಯನ್ನು ಪರಿಶೀಲಿಸಲಾಗಿದ್ದು, ಈ ಕೆಳಕಂಡಂತೆ ಆದೇಶಿಸಲಾಗಿದೆ. ಹಾವೇರಿ ಜಿಲ್ಲೆ, ರಟ್ಟಿಹಳ್ಳಿ ತಾಲೂಕು ಮದಗ-ಮಾಸೂರು ಕೆರೆಯ ಎಡದಂಡೆ ಹಾಗೂ ಬಲದಂಡೆ ಮುಖ್ಯ ನಾಲೆಗಳ ಆಧುನೀಕರಣಗೊಳಿಸುವ ರೂ.52.20 ಕೋಟಿ (ರೂಪಾಯಿ ಐವತ್ತೆರಡು ಕೋಟಿ ಇಪ್ಪತ್ತು ಲಕ್ಷಗಳು ಮಾತ್ರ) ಅಂದಾಜು ಮೊತ್ತದ ಕಾಮಗಾರಿಗೆ (2023-24ನೇ ಸಾಲಿನ ಏಕರೂಪ ದರಪಟ್ಟಿಯನ್ವಯ) ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular