HomeLatest Newsಗಾಳಿಪಟ 2 ಸುಂದರಿಯ ಹೊಸ ಅವತಾರ: ಸೀರೆಯಲ್ಲಿ ಕಂಗೊಳಿಸುತ್ತಿರುವ ನಟಿ ಸಂಯುಕ್ತಾ ಅವರ ಲೇಟೆಸ್ಟ್ ಕ್ಲಿಕ್ಸ್

ಗಾಳಿಪಟ 2 ಸುಂದರಿಯ ಹೊಸ ಅವತಾರ: ಸೀರೆಯಲ್ಲಿ ಕಂಗೊಳಿಸುತ್ತಿರುವ ನಟಿ ಸಂಯುಕ್ತಾ ಅವರ ಲೇಟೆಸ್ಟ್ ಕ್ಲಿಕ್ಸ್

ತಮಿಳು, ತೆಲುಗು ಮತ್ತು ಮಲಯಾಳಂ ಚಿತ್ರರಂಗದ ಜನಪ್ರಿಯ ನಟಿ ಸಂಯುಕ್ತಾ (Samyuktha) ಅವರು ಇತ್ತೀಚೆಗೆ ಸೀರೆಯಲ್ಲಿ ಮಿಂಚುತ್ತಿರುವ ತಮ್ಮ ಸುಂದರ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಕಂಗೊಳಿಸುತ್ತಿರುವ ಅವರ ಈ ಫೋಟೋಗಳು ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಅಭಿಮಾನಿಗಳ ಮನಗೆದ್ದಿವೆ.

ಸಂಯುಕ್ತಾ ಅವರ ಸಿನಿ ಪಯಣ:

2016ರಲ್ಲಿ ಬಿಡುಗಡೆಯಾದ ‘ಪಾಪ್‌ಕಾರ್ನ್’ ಎಂಬ ಮಲಯಾಳಂ ಚಿತ್ರದ ಮೂಲಕ ಸಂಯುಕ್ತಾ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2018ರಲ್ಲಿ ಬಂದ ‘ಲಿಲ್ಲಿ’ ಎಂಬ ರಿವೇಂಜ್ ಥ್ರಿಲ್ಲರ್ ಸಿನಿಮಾ ಅವರಿಗೆ ದೊಡ್ಡ ಮಟ್ಟದ ಖ್ಯಾತಿ ತಂದುಕೊಟ್ಟಿತು. ನಂತರ ಟೊವಿನೋ ಥಾಮಸ್ ಜೊತೆ ‘ಉಯರೆ’ ಚಿತ್ರದಲ್ಲಿ ನಟಿಸಿ ಗಮನ ಸೆಳೆದರು.

ಕನ್ನಡದಲ್ಲಿ ಸೂಪರ್ ಹಿಟ್ ಚಿತ್ರ ‘ಗಾಳಿಪಟ 2‘ ಮೂಲಕ ಪಾದಾರ್ಪಣೆ ಮಾಡಿದ ಸಂಯುಕ್ತಾ, ತಮಿಳಿನಲ್ಲಿ ಧನುಷ್ ನಟನೆಯ ‘ವಾತಿ’ (Vaathi) ಚಿತ್ರದ ಮೂಲಕ ಕಾಲಿವುಡ್‌ ಪ್ರೇಕ್ಷಕರ ಮನ ಗೆದ್ದರು.

https://www.instagram.com/p/DTnDR4BlaLV/?utm_source=ig_web_copy_link

For Latest News Updates, Join Our Whatsapp Community🚩
Abinandan
Abinandan
ನಿವೇದಿತಾ ಬಿ.ಎ.. ಬಿ.ಎಡ್ ಪದವೀಧರರು. ಡಿಜಿಟಲ್ ಪತ್ರಿಕೋದ್ಯಮದಲ್ಲಿ ಕಳೆದ 4 ವರ್ಷಗಳಿಂದ ಸಕ್ರಿಯರಾಗಿದ್ದಾರೆ. Revenufacts ವೆಬ್‌ಸೈಟ್‌ನಲ್ಲಿ 3 ವರ್ಷ ಹಾಗೂ ಕರುನಾಡು ಸುದ್ದಿ ಮಾಧ್ಯಮದಲ್ಲಿ 1 ವರ್ಷ ಕಾರ್ಯನಿರ್ವಹಿಸಿದ ಅನುಭವ ಹೊಂದಿದ್ದಾರೆ. ಆರೋಗ್ಯ, ವಾಣಿಜ್ಯ, ಲೈಫ್‌ಸ್ಟೈಲ್ ವಿಭಾಗದಲ್ಲಿ ವಿಶೇಷ ಪರಿಣತಿ ಹೊಂದಿದ್ದಾರೆ. Nivedita is a skilled digital content creator with a strong academic background in B.A. and B.Ed. 4 years of experience in digital journalism.
RELATED ARTICLES

Most Popular