HomeLatest NewsBIG NEWS : ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ; ರಾಜ್ಯದ 16...

BIG NEWS : ನಟಿ ರನ್ಯಾ ರಾವ್ ಗೋಲ್ಡ್ ಸ್ಮಗ್ಲಿಂಗ್ ಕೇಸ್ ; ರಾಜ್ಯದ 16 ಕಡೆ ‘ED’ಅಧಿಕಾರಿಗಳ ದಾಳಿ |E.D Raid

ಬೆಂಗಳೂರು : ನಟಿ ರನ್ಯಾ ರಾವ್ ಚಿನ್ನ ಸ್ಮಗ್ಲಿಂಗ್ ಕೇಸ್ ಗೆ ಸಂಬಂಧಿಸಿದಂತೆ ರಾಜ್ಯದ 16 ಕಡೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರನ್ಯಾರಾವ್ ಆರ್ಥಿಕ ವ್ಯವಹಾರಗಳ ಕುರಿತು ತನಿಖೆ ಕೈಗೊಂಡಿರುವ ಇಡಿ ಅಧಿಕಾರಿಗಳು ಆಕೆಗೆ ಸಂಬಂಧಿಸಿದ ವ್ಯಕ್ತಿ ಹಾಗೂ ವಿವಿಧ 16 ಸ್ಥಳಗಳ ಮೇಲೆ ಧಿಡೀರ್ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಅಧಿಕಾರಿಗಳು ಮಹತ್ವದ ದಾಖಲೆಗಳನ್ನು ಕೂಡ ವಶಕ್ಕೆ ಪಡೆದಿದ್ದಾರೆ.

ಹವಾಲಾ ದಂಧೆ ನಡೆಸುವವರು ಚಿನ್ನ ಖರೀದಿಗಾಗಿ ಅಕ್ರಮ ವಿದೇಶಿ ವಿನಿಮಯ ಸಾಗಣೆಗೆ ಅನುಕೂಲ ಮಾಡಿಕೊಟ್ಟಿರುವುದು ತಿಳಿದುಬಂದಿದೆ ರನ್ಯಾರಾವ್ರಿಂದ ಚಿನ್ನ ಖರೀದಿಸಿ ಆಭರಣ ವ್ಯಾಪಾರಿಗಳಿಗೆ ಮಾರಾಟ ಮಾಡಿರುವುದು ಬಯಲಾಗಿದೆ . ರನ್ಯಾರಾವ್ ಖಾತೆಗಳಿಗೆ ನಕಲಿ ಹಣಕಾಸು ವಹಿವಾಟು ಮೂಲಕ ಹಣ ಸಂದಾಯವಾಗಿದೆ. ಹಲವು ಕಂಪನಿಗಳ ಮೂಲಕ ಹಣ ವರ್ಗಾವಣೆಯಾಗಿದೆ ಎಂಬುದು ತನಿಖೆ ವೇಳೆ ಗೊತ್ತಾಗಿದೆ. ವಿನಿಮಯ ವ್ಯವಹಾರ ನಡೆಸುತ್ತಿರುವ ವ್ಯಕ್ತಿಗಳು ಮತ್ತು ಸಂಸ್ಥೆಗಳು ಪತ್ತೆಯಾಗಿವೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular