HomeEntertainmentಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಮೇಘನಾ ಗಾಂವ್ಕರ್

ಹುಟ್ಟುಹಬ್ಬದ ಸಂಭ್ರಮದಲ್ಲಿ ನಟಿ ಮೇಘನಾ ಗಾಂವ್ಕರ್

ಚಾರ್ಮಿನಾರ್ ಖ್ಯಾತಿಯ ನಟಿ ಮೇಘನಾ ಗಾಂವ್ಕರ್ ಇಂದು 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ.

2010 ರಲ್ಲಿ ತೆರೆಕಂಡ ‘ನಮ್ ಏರಿಯಾಲ್ ಒಂದ್ ದಿನ’ ಚಿತ್ರದ ಮೂಲಕ ತಮ್ಮ ಸಿನಿ ಜರ್ನಿ ಆರಂಭಿಸಿದ ಇವರು 2011 ರಲ್ಲಿ ‘ವಿನಾಯಕ ಗೆಳೆಯರ ಬಳಗ’ ಮತ್ತು ‘ತುಗ್ಲಕ್’ ಸಿನಿಮಾದಲ್ಲಿ ತೆರೆ ಹಂಚಿಕೊಂಡಿರು. ಬಳಿಕ ಈ ನಟಿಗೆ ಸ್ಯಾಂಡಲ್ವುಡ್ ನಲ್ಲಿ ಸಾಲು ಸಾಲು ಆಫರ್ ಗಳು ಬಂದವು.

2013 ರಲ್ಲಿ ಲವ್ಲಿ ಸ್ಟಾರ್ ಪ್ರೇಮ್ ಜೊತೆ ‘ಚಾರ್ಮಿನಾರ್’ ನಲ್ಲಿ ಅಭಿನಯಿಸುವ ಮೂಲಕ ಭರ್ಜರಿ ಯಶಸ್ಸು ಕಂಡರು. ಈ ಚಿತ್ರದ ಮೂಲಕ ಫಿಲಂ ಫೇರ್ ಅವಾರ್ಡ್ ಪ್ರಶಸ್ತಿಯನ್ನು ಪಡೆದುಕೊಂಡರು. ನಟಿ ಮೇಘನಾ ಗಾಂವ್ಕರ್ ಇತ್ತೀಚಿಗೆ ‘ಕರ್ವ 3’ ಸೇರಿದಂತೆ ‘ದಿ ಜಡ್ಜ್ಮೆಂಟ್’ ಮತ್ತು ‘ಚೂ ಮಂತರ್’ ಶೂಟಿಂಗ್ ನಲ್ಲಿ ಬಿಜಿಯಾಗಿದ್ದಾರೆ. ಇಂದು ಸಾಮಾಜಿಕ ಜಾಲತಾಣದಲ್ಲಿ ಹಲವಾರು ಸಿನಿಮಾ ಕಲಾವಿದರು ಮೇಘನಾ ಗಾಂವ್ಕರ್ ಅವರಿಗೆ ಹುಟ್ಟು ಹಬ್ಬದ ಶುಭಾಶಯಗಳು ತಿಳಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular