HomeLatest NewsBIG NEWS : ಕನ್ನಡದ ಇತಿಹಾಸದ ಬಗ್ಗೆ ಬಹಳ ಸೊಗಸಾಗಿ ಮಾತನಾಡಿದ್ದ ನಟ ವಿಷ್ಣುವರ್ಧನ್ :...

BIG NEWS : ಕನ್ನಡದ ಇತಿಹಾಸದ ಬಗ್ಗೆ ಬಹಳ ಸೊಗಸಾಗಿ ಮಾತನಾಡಿದ್ದ ನಟ ವಿಷ್ಣುವರ್ಧನ್ : ವೀಡಿಯೋ ವೈರಲ್ |WATCH VIDEO

ಬೆಂಗಳೂರು : ಕನ್ನಡದ ಬಗ್ಗೆ ನಟ ಸೋನು ನಿಗಮ್ ಇತ್ತೀಚೆಗೆ ವಿವಾದಾತ್ಮಕ ಹೇಳಿ ನೀಡಿ ಕನ್ನಡಿಗರ ಕೆಂಗಣಿಗೆ ಗುರಿಯಾಗಿದ್ದರು. ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಸೋನು ನಿಗಮ್ ಕನ್ನಡಿಗರ ಎದುರು ಮಂಡಿಯೂರಿ ಕ್ಷಮೆಯಾಚಿಸಿದ್ದರು. ಈ ಬೆನ್ನಲ್ಲೇ ಕನ್ನಡದ ಇತಿಹಾಸದ ಬಗ್ಗೆ ನಟ ಕಮಲ್ ಹಾಸನ್ ಕೂಡ ವಿವಾದಾತ್ಮಕ ಹೇಳಿಕೆ ನೀಡಿ ಸುದ್ದಿಯಾಗಿದ್ದಾರೆ. ಕನ್ನಡ ಹುಟ್ಟಿದ್ದೇ ತಮಿಳಿನಿಂದ ಎಂದು ಹೇಳಿ ದೊಡ್ಡ ವಿವಾದವನ್ನೇ ಸೃಷ್ಟಿಸಿದ್ದಾರೆ.

ಈ ಹಿಂದೆ ಕನ್ನಡದ ಪರ ನಟ ವಿಷ್ಣುವರ್ಧನ್ ಅನೇಕ ಬಾರಿ ಧ್ವನಿ ಎತ್ತಿದ್ದರು. ಅವರ ವಿಡಿಯೋಗಳು ಆಗಾಗ ವೈರಲ್ ಆಗುತ್ತಿರುತ್ತದೆ.

ಸಿನಿಮಾವೊಂದರಲ್ಲಿ ಕನ್ನಡದ ಇತಿಹಾಸದ ನಟ ವಿಷ್ಣುವರ್ಧನ್ ಬಹಳ ಸೊಗಸಾಗಿ ಮಾತನಾಡಿದ್ದರು. ಈ ವೀಡಿಯೋ ಸದ್ಯ ಎಲ್ಲರ ಗಮನ ಸೆಳೆದಿದೆ. ಕೆಲಸ ಹುಡುಕಿಕೊಂಡು ಸಂದರ್ಶನಕ್ಕೆ ಬರುವ ವಿಷ್ಣುವರ್ಧನ್ ಗೆ ಕೆಲವು ಪ್ರಶ್ನೆಗಳನ್ನು ಕೇಳಲಾಗುತ್ತದೆ. ಆಗ ವಿಷ್ಣುವರ್ಧನ್ ಕನ್ನಡ ಹಾಗೂ ಕನ್ನಡದ ಇತಿಹಾಸದ ಬಗ್ಗೆ ಬಹಳ ಸೊಗಸಾಗಿ ಮಾತನಾಡುತ್ತಾರೆ.1970 ರಲ್ಲಿ ರಿಲೀಸ್ ಆದ ‘ಎಲ್ಲರಂತಲ್ಲ ನನ್ನ ಗಂಡ’ ಸಿನಿಮಾದ ತುಣುಕು ಇದಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular