ಅನುಮತಿ ಇಲ್ಲದೆ ಅಭಿಮಾನಿಯೊಬ್ಬ ತನ್ನನ್ನು ಮುಟ್ಟಲು ಪ್ರಯತ್ನಿಸಿದಾಗ ಬಾಲಿವುಡ್ ನಟ ಸಲ್ಮಾನ್ ಖಾನ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಘಟನೆಯ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.
ಹೌದು, ಅನಂತ್ ಅಂಬಾನಿ ಅವರ ಜನ್ಮದಿನದ ಸಂಭ್ರಮದ ನಡುವೆಯೇ ಬಾಲಿವುಡ್ ಸ್ಟಾರ್ ಸಲ್ಮಾನ್ ಖಾನ್ ಅಭಿಮಾನಿಯೊಬ್ಬನ ವರ್ತನೆಗೆ ಗರಂ ಆದ ಘಟನೆ ನಡೆದಿದೆ. ಅನುಮತಿ ಇಲ್ಲದೆ ಅಭಿಮಾನಿಯೊಬ್ಬ ನಟನ ಹೆಗಲ ಮೇಲೆ ಕೈ ಹಾಕಿದಾಗ ಸಲ್ಮಾನ್ ಖಾನ್ ಬಹಿರಂಗವಾಗಿಯೇ ಅಸಮಾಧಾನ ವ್ಯಕ್ತಪಡಿಸಿದ್ದು, ತಕ್ಷಣವೇ ಭದ್ರತಾ ಸಿಬ್ಬಂದಿ ಮಧ್ಯಪ್ರವೇಶಿಸಿ ಅಭಿಮಾನಿಯನ್ನು ದೂರ ಸರಿಸಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸೆಲೆಬ್ರಿಟಿಗಳ ಖಾಸಗಿ ಗೌಪ್ಯತೆಯನ್ನು ಗೌರವಿಸಬೇಕು ಎಂದು ನೆಟ್ಟಿಗರು ಸಲ್ಮಾನ್ ಪರವಾಗಿ ಬ್ಯಾಟ್ ಬೀಸಿದ್ದಾರೆ.
ಜಮ್‌ನಗರದಲ್ಲಿ ನಡೆದ ಅನಂತ್ ಅಂಬಾನಿ ಅವರ ಜನ್ಮದಿನಾಚರಣೆಯಲ್ಲಿ ಸಲ್ಮಾನ್ ಖಾನ್ ಪಾಲ್ಗೊಂಡಿದ್ದರು.ಕಾರ್ಯಕ್ರಮದ ವೇಳೆ ಅಭಿಮಾನಿಯೊಬ್ಬ ಸಲ್ಮಾನ್ ಖಾನ್ ಅವರ ಹೆಗಲ ಮೇಲೆ ಕೈ ಇಟ್ಟಿದ್ದು, ಇದು ನಟನನ್ನು ಕೆರಳಿಸಿತು. ಸಲ್ಮಾನ್ ಅಸಮಾಧಾನಗೊಳ್ಳುತ್ತಿದ್ದಂತೆ ಅವರ ಭದ್ರತಾ ಸಿಬ್ಬಂದಿ ತಕ್ಷಣ ಕಾರ್ಯಪ್ರವೃತ್ತರಾಗಿ ಅಭಿಮಾನಿಯನ್ನು ದೂರ ಸರಿಸಿದ್ದಾರೆ.ಸೆಲೆಬ್ರಿಟಿಗಳ ಖಾಸಗಿ ಗೌಪ್ಯತೆಯನ್ನು ಗೌರವಿಸಬೇಕು ಮತ್ತು ಅತೀ ಪ್ರೇಮದಿಂದ ಸಾರ್ವಜನಿಕ ವ್ಯಕ್ತಿಗಳೊಂದಿಗೆ ಅನುಚಿತವಾಗಿ ವರ್ತಿಸಬಾರದು ಎಂದು ನೆಟ್ಟಿಗರು ಸಲ್ಮಾನ್ ಖಾನ್ ಅವರ ಪ್ರತಿಕ್ರಿಯೆಯನ್ನು ಬೆಂಬಲಿಸಿದ್ದಾರೆ.
ಘಟನೆಯ ವಿವರ
ಸಲ್ಮಾನ್ ಖಾನ್ ಅವರು ಜಮ್‌ನಗರದಲ್ಲಿ ಅನಂತ್ ಅಂಬಾನಿ ಹುಟ್ಟುಹಬ್ಬದಲ್ಲಿ ಪಾಲ್ಗೊಂಡಿದ್ದಾಗ, ಅಭಿಮಾನಿಗಳು ಅವರನ್ನು ನೋಡಲು ಮುಗಿಬಿದ್ದಿದ್ದರು. ವೈರಲ್ ಆದ ವಿಡಿಯೋದಲ್ಲಿ ಸಲ್ಮಾನ್ ಚಿಕ್ಕ ಹುಡುಗನೊಬ್ಬನ ಜೊತೆ ನಿಂತಿರುವುದನ್ನು ಕಾಣಬಹುದು. ಈ ವೇಳೆ ವ್ಯಕ್ತಿಯೊಬ್ಬ ಹಠಾತ್ತನೆ ನಟನ ಹೆಗಲ ಮೇಲೆ ಕೈ ಹಾಕಿದಾಗ, ಸಲ್ಮಾನ್ ಕೋಪಗೊಂಡರು.
ಇದೇ ವೇಳೆ ಸಲ್ಮಾನ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಅನಂತ್ ಅಂಬಾನಿ ಅವರ ಬಗ್ಗೆ ಭಾವನಾತ್ಮಕ ಪೋಸ್ಟ್ ಒಂದನ್ನು ಹಂಚಿಕೊಂಡಿದ್ದಾರೆ. “ನಿಮ್ಮ ಜ್ಞಾಪಕಶಕ್ತಿ ಕಡಿಮೆಯಿದ್ದರೆ ಇದನ್ನು ಬರೆದಿಟ್ಟುಕೊಳ್ಳಿ… ಈ ವ್ಯಕ್ತಿ (ಅನಂತ್) ದೇಶವನ್ನೂ ಎತ್ತಿ ಹಿಡಿಯುತ್ತಾನೆ… ನನ್ನ ಕಿರಿಯ ಸಹೋದರ ಅನಂತ್‌ಗೆ ಸುದೀರ್ಘ ಆಯಸ್ಸು ಸಿಗಲಿ… ಇವನು ಹೃದಯ ಮತ್ತು ಮೆದುಳಿನಿಂದ ಅಪ್ಪಟ ಅಂಬಾನಿ” ಎಂದು ಹೊಗಳಿದ್ದಾರೆ.ಸಾರ್ವಜನಿಕ ವ್ಯಕ್ತಿಗಳಾಗಿದ್ದರೂ ಸೆಲೆಬ್ರಿಟಿಗಳಿಗೆ ಅವರದ್ದೇ ಆದ ಗೌಪ್ಯತೆ ಇರುತ್ತದೆ ಎಂಬುದನ್ನು ಈ ಘಟನೆ ಮತ್ತೊಮ್ಮೆ ನೆನಪಿಸಿದೆ.

