HomeEntertainmentಕಿರುತೆರೆ ಖ್ಯಾತ ನಟ ನಿತಿನ್ ಚೌಹಾಣ್ ಆತ್ಮಹತ್ಯೆ

ಕಿರುತೆರೆ ಖ್ಯಾತ ನಟ ನಿತಿನ್ ಚೌಹಾಣ್ ಆತ್ಮಹತ್ಯೆ

ಮುಂಬೈ: ಕಿರುತೆರೆ ಖ್ಯಾತ ನಟ, ಕ್ರೈಂ ಪ್ಯಾಟ್ರೋಲ್ ಖ್ಯಾತಿಯ ನಿತಿನ್ ಚೌಹಾಣ್ ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮುಂಬೈನಲ್ಲಿ ನಡೆದಿದೆ.

35 ವರ್ಷದ ನಿತಿನ್ ಚೌಹಾಣ್ ಮೃತದೇಹ ಮುಂಬೈನ ಅಪಾರ್ಟ್ ಮೆಂಟ್ ಒಂದರಲ್ಲಿ ನೇಣು ಬಿಗಿದಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಆತ್ಮಹತ್ಯೆಗೆ ಶರಣಾಗಿರುವ ಶಂಕೆ ವ್ಯಕ್ತವಾಗಿದೆ.

ಉತ್ತರ ಪ್ರದೇಶದ ಅಲಿಘಡ ಮೂಲದ ನಿತಿನ್ ಚೌಹಾಣ್, ಹಿಂದಿಯ ದಾದಾಗಿರಿ-2 ರಿಯಾಲಿಟಿ ಶೋ ವಿಜೇತರಾಗಿದ್ದರು. ಹಲವು ರಿಯಾಲಿಟಿ ಶೋಗಳಲ್ಲಿ ಭಾಗವಹಿಸಿದ್ದ ನಿತಿನ್ ಧಾರಾವಾಹಿಗಳಲ್ಲಿ ಹಾಗೂ ಕ್ರೈಂ ಪ್ಯಾಟ್ರೋಲ್ ಸಿರೀಸ್ ನಲ್ಲಿ ಅಭಿನಯಿಸಿದ್ದರು. ನಿತಿನ್ ಚೌಹಾಣ್ ಆತ್ಮಹತ್ಯೆಗೆ ನಿಖರ ಕಾರಣ ತಿಳುದು ಬಂದಿಲ್ಲ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular