HomeEntertainmentಪತ್ನಿ 'ತಾಹಿರಾ ಕಶ್ಯಪ್' ಎದೆಹಾಲು ಕದ್ದು ಕುಡಿದಿದ್ದರಂತೆ ನಟ ಆಯುಷ್ಮಾನ್ ಖುರಾನಾ

ಪತ್ನಿ ‘ತಾಹಿರಾ ಕಶ್ಯಪ್’ ಎದೆಹಾಲು ಕದ್ದು ಕುಡಿದಿದ್ದರಂತೆ ನಟ ಆಯುಷ್ಮಾನ್ ಖುರಾನಾ

ಆಯುಷ್ಮಾನ್ ಖುರಾನಾ ‘ಡ್ರೀಮ್ ಗರ್ಲ್’, ‘ಬಾಲಾ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಸೋಶಿಯಲ್ ಮೀಡಿಯಾದಲ್ಲಿ ಇದೀಗ ನಟ ಆಯುಷ್ಮಾನ್ ಖುರಾನಾ ಅವರ ಮೋಜಿನ ಘಟನೆ ರಿವೀಲ್ ಆಗಿದೆ.

ಆಯುಷ್ಮಾನ್ ಖುರಾನಾ ಒಂದೊಮ್ಮೆ ಅವರ ಪತ್ನಿ ತಾಹಿರಾ ಕಶ್ಯಪ್ ತಮ್ಮ ಅಂಬೆಗಾಲಿಡುವ ಮಗುವಿಗೆ ಸಂಗ್ರಹಿಸಿದ ಎದೆಹಾಲನ್ನು ಕದ್ದು ಕುಡಿದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ. ತಾಹಿರಾ ತನ್ನದಿ 7 ಸಿನ್ಸ್ ಆಫ್ ಬೀಯಿಂಗ್ ಎ ಮದರ್ ಪುಸ್ತಕದಲ್ಲಿ ಉಲ್ಲೇಖಿಸಿದ್ದ ಕೆಲವು ಸಂಗತಿಗಳು ವೈರಲ್ ಆಗಿದೆ.

2008 ರಲ್ಲಿ, ಆಯುಷ್ಮಾನ್ ತಮ್ಮ ಬಾಲ್ಯದ ಸ್ನೇಹಿತೆ ಮತ್ತು ಪ್ರೇಮಿ ತಾಹಿರಾ ಕಶ್ಯಪ್ ಅವರನ್ನು ವಿವಾಹವಾದರು. ದಂಪತಿಗೆ ಇಬ್ಬರು ಮಕ್ಕಳಿದ್ದಾರೆ – ಒಬ್ಬ ಮಗ ಮತ್ತು ಒಬ್ಬ ಮಗಳು ಇದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

2021 ರಲ್ಲಿ, ಪ್ರಸಿದ್ಧ ಲೇಖಕಿ ತಾಹಿರಾ ಕಶ್ಯಪ್ ತಮ್ಮ ಪುಸ್ತಕ ದಿ 7 ಸಿನ್ಸ್ ಆಫ್ ಬೀಯಿಂಗ್ ಎ ಮದರ್ ಅನ್ನು ಬಿಡುಗಡೆ ಮಾಡಿದರು. ತನ್ನ ಪತಿ ಆಯುಷ್ಮಾನ್ ಖುರಾನಾ ತನ್ನ ಎದೆಹಾಲನ್ನು ಕದ್ದು ತನ್ನ ಪ್ರೋಟೀನ್ ಶೇಕ್ಗಳಿಗೆ ಬಳಸಿದ್ದಾನೆ ಎಂದು ಬಹಿರಂಗಪಡಿಸಿದ ಆಯ್ದ ಭಾಗವು ಎಲ್ಲರ ಗಮನ ಸೆಳೆಯಿತು.

ಆಯುಷ್ಮಾನ್ ಪತ್ನಿ ತಾಹಿರಾ ಎರಡನೇ ಹನಿಮೂನ್ಗೆ ಬ್ಯಾಂಕಾಕ್ ಹೋಗಲು ನಿರ್ಧರಿಸಿದ್ದರು.
ಈ ಸಮಯದಲ್ಲಿ ತನ್ನ ಏಳು ತಿಂಗಳ ಮಗು ವಿರಾಜ್ವೀರ್ನನ್ನು ತನ್ನ ಹೆತ್ತವರ ಜೊತೆ ಬಿಟ್ಟುಹೋಗುವುದೆಂದು ನಿರ್ಧರಿಸಿದ್ದರು.ತಾಹಿರಾ ಮತ್ತು ಆಯುಷ್ಮಾನ್ ಬ್ಯಾಂಕಾಕ್ಗೆ ಹೋಗುವ ಮೊದಲು ಮಗುವಿಗಾಗಿ ಕೆಲವು ಬಾಟಲಿಯಲ್ಲಿ ಎದೆ ಹಾಲು ಸಂಗ್ರಹಿಸಿಟ್ಟು ವಿಮಾನ ನಿಲ್ದಾಣಕ್ಕೆ ಬಂದರು.ಏರ್ಪೋರ್ಟ್ ಗೆ ಹೋಗುವ ಮುನ್ನ ತಾಹಿರಾಗೆ ಮನೆಯಿಂದ ಕರೆ ಬರುತ್ತದೆ. ಮಗುವಿಗಾಗಿ ನೀನು ತುಂಬಿಸಿಟ್ಟಿದ್ದ ಎದೆ ಹಾಲು ಖಾಲಿ ಆಗಿದೆ ಎಂದು ಹೇಳುತ್ತಾರೆ. ಈ ವಿಚಾರ ಕೇಳಿದ ತಾಹಿರಾಗೆ ಶಾಕ್ ಆಗುತ್ತದೆ.

ಎದೆಹಾಲು ಕಾಣೆಯಾದ ಕುತೂಹಲಕಾರಿ ಘಟನೆ ಬಗ್ಗೆ ತಾಹಿರಾ   ಪತಿಯನ್ನು ಕೇಳಿದಾಗ ಅಸಲಿ ವಿಚಾರ ಬೆಳಕಿಗೆ ಬಂದಿದೆ. ಪತಿ ಎದೆ ಹಾಲನ್ನು ಪ್ರೊಟೀನ್ ಶೇಕ್ ಜೊತೆ ಮಿಕ್ಸ್ ಮಾಡಿಕೊಂಡು ಕುಡಿಯುತ್ತಿರುವುದು ಗೊತ್ತಾಗಿದೆ. ಇದಕ್ಕೆ ಆಯುಷ್ಮಾನ್ ಖುರಾನಾ ಪ್ರತಿಕ್ರಿಯೆ ನೀಡಿದ್ದು, ಎದೆಹಾಲು ಬಹಳ ಪೌಷ್ಟಿಕವಾಗಿದೆ , ನಾನು ಜಿಮ್ಗೆ ಹೋಗುವ, ಮುನ್ನ ಪ್ರೊಟೀನ್ ಯುಕ್ತ ಹಾಲು ಸೇವಿಸುತ್ತೇನೆ ಎಂದರು.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular