HomeKarnatakaಕೋರ್ಟ್ ಗೆ ಅಲೆದಾಡಿ ಸಾಕಾದವರಿಗೆ ಸಿಹಿ ಸುದ್ದಿ: ಫೆಬ್ರವರಿ ವೇಳೆಗೆ ಎಸಿ ಕೋರ್ಟಲ್ಲಿರುವ ಎಲ್ಲಾ ಕೇಸ್...

ಕೋರ್ಟ್ ಗೆ ಅಲೆದಾಡಿ ಸಾಕಾದವರಿಗೆ ಸಿಹಿ ಸುದ್ದಿ: ಫೆಬ್ರವರಿ ವೇಳೆಗೆ ಎಸಿ ಕೋರ್ಟಲ್ಲಿರುವ ಎಲ್ಲಾ ಕೇಸ್ ಇತ್ಯರ್ಥ

ಬೆಂಗಳೂರು: ರಾಜ್ಯದ ಉಪ ವಿಭಾಗಾಧಿಕಾರಿಗಳ ಎಸಿ ಕಂದಾಯ ನ್ಯಾಯಾಲಯಗಳಲ್ಲಿ ಬಾಕಿ ಇರುವ ಎಲ್ಲಾ ಕೇಸ್ ಗಳನ್ನು ಫೆಬ್ರವರಿ ವೇಳೆಗೆ ಇತ್ಯರ್ಥಪಡಿಸಲು ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಸೂಚನೆ ನೀಡಿದ್ದಾರೆ.

ವಿಕಾಸಸೌಧದಲ್ಲಿ ಶನಿವಾರ ರಾಜ್ಯದ ವಿವಿಧ ಉಪ ವಿಭಾಗಾಧಿಕಾರಿಗಳೊಂದಿಗೆ ವರ್ಚುಯಲ್ ಸಭೆ ನಡೆಸಿದ ಸಚಿವರು, ಎಸಿ ನ್ಯಾಯಾಲಯಗಳಲ್ಲಿ ಬಾಕಿ ಇದ್ದ 59,339 ಪ್ರಕರಣಗಳಲ್ಲಿ ಶೇಕಡ 70ರಷ್ಟು ವಿಲೇವಾರಿಯಾಗಿದ್ದು, ಉಳಿದ ಎಲ್ಲಾ ಪ್ರಕರಣಗಳನ್ನು ಇತ್ಯರ್ಥಪಡಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಎಸಿ ಕಂದಾಯ ಕೋರ್ಟುಗಳಲ್ಲಿ ಈ ಹಿಂದಿನ ಸರ್ಕಾರ 59,339 ಪ್ರಕರಣ ಉಳಿಸಿ ಹೋಗಿತ್ತು. ಇವುಗಳ ಇತ್ಯರ್ಥಕ್ಕಾಗಿ ನಮ್ಮ ಸರ್ಕಾರ 18 ವಿಶೇಷ ಉಪ ವಿಭಾಗಾಧಿಕಾರಿಗಳ ನೇಮಕ ಮಾಡಿದ್ದು, ಇದೀಗ ಶೇಕಡ 70ರಷ್ಟು ಹಳೆಯ ಪ್ರಕರಣಗಳು ಕಳೆದ ಒಂದು ವರ್ಷದಲ್ಲಿ ಇತ್ಯರ್ಥಪಡಿಸಲಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular