HomeKarnatakaಗರ್ಭಪಾತ ದಂಧೆಗೆ ಮಹಿಳೆ ಬಲಿ ಪ್ರಕರಣ: ಮೃತ ಮಹಿಳೆಯ ತಂದೆ-ತಾಯಿ ಬಂಧನ

ಗರ್ಭಪಾತ ದಂಧೆಗೆ ಮಹಿಳೆ ಬಲಿ ಪ್ರಕರಣ: ಮೃತ ಮಹಿಳೆಯ ತಂದೆ-ತಾಯಿ ಬಂಧನ

ಬಾಗಲಕೋಟೆ: ಗರ್ಭಪಾತ ಮಾಡಿಸಿಕೊಂಡಿದ್ದ ಮಹಿಳೆ ತೀವ್ರ ರಕ್ತಸ್ರಾವದಿಂದ ಮೃತಪಟ್ಟ ಘಟನೆ ಕೆಲ ದಿನಗಳ ಹಿಂದೆ ಬಾಗಲಕೋಟೆ ಜಿಲ್ಲೆಯ ರಬಕವಿ-ಬನಹಟ್ಟಿ ತಾಲೂಕಿನ ಮಹಾಲಿಂಗಪುರದಲ್ಲಿ ನಡೆದಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೃತ ಮಹಿಳೆಯ ತಂದೆ-ತಾಯಿಯನ್ನು ಪೊಲೀಸರು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಕೊಲ್ಲಾಪುರ ಮೂಲದ ಸೊನಾಲಿ ಎಂಬ ಮಹಿಳೆ ಮಹಾರಾಷ್ಟ್ರದ ಸ್ಕ್ಯಾನಿಂಗ್ ಸೆಂಟರ್ ವೊಂದರಲ್ಲಿ ಸ್ಕ್ಯಾನಿಂಗ್ ಮಾಡಿಸಿ ಮೂರನೇಯದೂ ಹೆಣ್ಣುಮಗು ಎಂದು ತಿಳಿಯುತ್ತಿದ್ದಂತೆ ಮಹಾಲಿಂಗಪುರಕ್ಕೆ ಆಗಮಿಸಿ ಗರ್ಭಪಾತ ಮಾಡಿಸಿದ್ದರು. ಗರ್ಭಪಾತದ ಬಳಿಕ ತೀವ್ರ ರಕ್ತಸ್ರಾವದಿಮ್ದ ಪ್ರಜ್ಞೆ ತಪ್ಪಿದ್ದ ಮಹಿಳೆ ಆಸ್ಪತ್ರೆಗೆ ತೆರಳುವ ಮಾರ್ಗ ಮಧ್ಯೆಯೇ ಕೊನೆಯುಸಿರೆಳೆದಿದ್ದರು.

ಇದೀಗ ಪ್ರಕರಣಕ್ಕೆ ಸಂಬಂಧಿಸಿದಂತೆ ಮೃತ ಮಹಿಳೆಯ ತಂದೆ-ತಾಯಿಯನ್ನು ಬಂಧಿಸಲಾಗಿದೆ. ಮಗಳ ಗರ್ಭಪಾತಕ್ಕೆ ಪ್ರೇರಣೆ ಆರೋಪ ಹಿನ್ನೆಲೆಯಲ್ಲಿ ತಂದೆ ಸಂಜಯ್ ಗೌಳಿ,  ತಾಯಿ ಸಂಗೀತಾ ಗೌಳಿಯನ್ನು ಬಂಧಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇನ್ನು ಗರ್ಭಪಾತ ಮಾಡಿದ್ದ ಮಹಾಲಿಂಗಪುರ ಆಸ್ಪತ್ರೆಯ ಮಾಜಿ ಆಯಾ ಕವಿತಾ ಸೇರಿದಂತೆ ಮುವರನ್ನು ಪೊಲೀಸರು ಈ ಹಿಂದೆಯೇ ಬಂಧಿಸಿದ್ದರು.

For Latest News Updates, Join Our Whatsapp Community🚩
RELATED ARTICLES

Most Popular