HomeKarnatakaBIG NEWS: ಸಿ.ಟಿ ರವಿ ಪ್ರಕರಣದಲ್ಲಿ ರಾಜ್ಯ ಬಿಜೆಪಿ ನಾಯಕತ್ವ ವಿಫಲವಾಗಿದೆ: ಟಾರ್ಚರ್ ಕೊಟ್ಟರೂ ಗಂಭೀರವಾಗಿ...

BIG NEWS: ಸಿ.ಟಿ ರವಿ ಪ್ರಕರಣದಲ್ಲಿ ರಾಜ್ಯ ಬಿಜೆಪಿ ನಾಯಕತ್ವ ವಿಫಲವಾಗಿದೆ: ಟಾರ್ಚರ್ ಕೊಟ್ಟರೂ ಗಂಭೀರವಾಗಿ ಪರಿಗಣಿಸಿಲ್ಲ: ವಿಜಯೇಂದ್ರ ವಿರುದ್ಧ ಶಾಸಕ ಅಭಯ್ ಪಾಟೀಲ್ ಅಸಮಾಧಾನ

ಬೆಳಗಾವಿ: ರಾಜ್ಯ ಬಿಜೆಪಿಯಲ್ಲಿ ಬಣ ಬಡಿದಾಟ ಆರಂಭವಾಗಿರುವ ನಡುವೆ ಬೆಳಗಾವಿ ಶಾಸಕ ಅಭಯ್ ಪಾಟೀಲ್, ರಾಜ್ಯ ಬಿಜೆಪಿ ನಾಯಕತ್ವ, ವಿಜಯೇಂದ್ರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಬೆಳಗಾವಿಯಲ್ಲಿ ಮಾತನಾಡಿದ ಅಭಯ್ ಪಾಟೀಲ್, ಸಿ.ಟಿ.ರವಿ ಪ್ರಕರಣದಲ್ಲಿ ರಾಜ್ಯ ಬಿಜೆಪಿ ವಿಫಲವಾಗಿದೆ. ಸಿ.ಟಿ ರವಿಗೆ ಟಾರ್ಚರ್ ಕೊಟ್ಟರೂ ಇದನ್ನು ಗಂಭೀರವಾಗಿ ಪರಿಗನಿಸಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

ಹಿರಿಯ ಶಾಸಕರನ್ನು ಗಣನೆಗೆ ತೆಗೆದುಕೊಂಡಿಲ್ಲ. ಈ ಪ್ರಕರಣದಿಂದ ಪಕ್ಷದ ಕಾರ್ಯಕರ್ತರು ಅಸಮಾಧಾನಗೊಂಡಿದ್ದಾರೆ. ಶಾಸಕರಿಗೆ ಈ ರೀತಿ ಪರಿಸ್ಥಿತಿಯಾದರೆ ಇನ್ನು ಕಾರ್ಯಕರ್ತರ ಸ್ಥಿತಿ ಏನು? ಇನ್ನಾದರೂ ಪಕ್ಷದ ನಾಯಕರು ಎಚ್ಚೆತ್ತು ಹೋರಾಟ ಮಾಡಬೇಕು ಎಂದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪಕ್ಷದ ಹೈಕಮಾಂಡ್ ನಿರ್ಧಾರಕ್ಕೆ ನಾನು ಬದ್ಧ. ಹೈಕಮಾಂಡ್ ನಾಯಕರು ಯಾವ ತೀರ್ಮಾನ ಕೈಗೊಳ್ಳುತ್ತಾರೆ ನೋಡಬೇಕು ಎಂದು ಹೇಳಿದರು.

 

For Latest News Updates, Join Our Whatsapp Community🚩
RELATED ARTICLES

Most Popular