HomeEntertainmentರಿಲೀಸ್ ಆಯ್ತು 'ಹಗ್ಗ' ಚಿತ್ರದ ಟ್ರೈಲರ್

ರಿಲೀಸ್ ಆಯ್ತು ‘ಹಗ್ಗ’ ಚಿತ್ರದ ಟ್ರೈಲರ್

ಅವಿನಾಶ್ ಎನ್ ನಿರ್ದೇಶನದಲ್ಲಿ ಮೂಡಿಬರುತ್ತಿರುವ ‘ಹಗ್ಗ’ ಚಿತ್ರ ಇನ್ನೇನು ತೆರೆ ಮೇಲೆ ಬರಲು ಸಜ್ಜಾಗಿದ್ದು, ಇದರ ಟ್ರೈಲರ್ ನಿನ್ನೆ ಯುಟ್ಯೂಬ್ ನಲ್ಲಿ ಬಿಡುಗಡೆಯಾಗಿದೆ.‌ ಈ ಟ್ರೈಲರ್ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವುದಲ್ಲದೆ ನೋಡುಗರಲ್ಲಿ ಸಾಕಷ್ಟು ಕುತೂಹಲ ಮೂಡಿಸಿದೆ.

ಹಾರರ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರವನ್ನು ವಸಂತ ಸಿನಿ ಕ್ರಿಯೇಶನ್ಸ್ ಬ್ಯಾನರ್ ನಲ್ಲಿ ರಾಜ್ ಭಾರದ್ವಾಜ್ ನಿರ್ಮಾಣ ಮಾಡಿದ್ದು, ಅನುಪ್ರಭಾಕರ್ ಸೇರಿದಂತೆ ವೇಣು, ಹರ್ಷಿಕಾ ಪೂಣಚ್ಚ, ತಬಲಾನಾನಿ, ಅವಿನಾಶ್, ಭವಾನಿ ಪ್ರಕಾಶ್, ಸುಧಾಬೆಳವಾಡಿ, ಪ್ರಿಯಾ ಹೆಗ್ಡೆ, ಮೈಚೋ ಮಂಜು, ಸಂಜು ಬಸಯ್ಯ, ಸದಾನಂದ ಕಾಳಿ. ಬಣ್ಣ ಹಚ್ಚಿದ್ದಾರೆ. ಎನ್ ಎಂ ವಿಶ್ವ ಸಂಕಲನ, ಸಿನೆಟೆಕ್ ಸೂರಿ  ಛಾಯಾಗ್ರಾಹಣ, ಹಾಗೂ ವಿಕ್ರಮ್ ಮೋರ್, ಡಾ ಡಿಫರೆಂಟ್ ಡ್ಯಾನಿ ಮತ್ತು ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನವಿದೆ.

For Latest News Updates, Join Our Whatsapp Community🚩
RELATED ARTICLES

Most Popular