ಬೆಂಗಳೂರು: ನಟ ರಾಕಿಂಗ್ ಸ್ಟಾರ್ ಯಶ್ ಅಭಿನಯದ ‘ಟಾಕ್ಸಿಕ್’ ಚಿತ್ರದ ಟೀಸರ್ ಅಶ್ಲೀಲ ದೃಶ್ಯ ಒಳಗೊಂಡಿದ್ದು, ಟೀಸರ್ ಗೆ ಕಡಿವಾಣ ಹಾಕಿ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿ ಆಮ್ ಆದ್ಮಿ ಪಕ್ಷದ ರಾಜ್ಯ ಯುವ ಘಟಕದ ರಾಜ್ಯಾಧ್ಯಕ್ಷ ಲೋಹಿತ್ ಹನುಮಾಪುರ ಸೆನ್ಸಾರ್ ಮಂಡಳಿಗೆ ದೂರು ನೀಡಿದ್ದಾರೆ.
ಬೆಂಗಳೂರಿನ ಕೋರಮಂಗಲದಲ್ಲಿರುವ ಸೆನ್ಸಾರ್ ಮಂಡಳಿ ಪ್ರಾದೇಶಿಕ ಕಚೇರಿಗೆ ಇ- ಮೇಲ್ ಮೂಲಕ ಅವರ ದೂರು ನೀಡಿದ್ದಾರೆ.
‘ಟಾಕ್ಸಿಕ್’ ಚಿತ್ರದ ಟೀಸರ್ ನಲ್ಲಿ ಅಶ್ಲೀಲ ದೃಶ್ಯ ಬಳಸಲಾಗಿದೆ. ಇಂತಹ ದೃಶ್ಯಗಳಿಗೆ ಎ ಸರ್ಟಿಫಿಕೇಟ್ ಕೊಡುವ ಮೂಲಕ ನಿಯಂತ್ರಿಸಬೇಕು. ಬಿಡುಗಡೆಯಾಗಿರುವ ‘ಟಾಕ್ಸಿಕ್’ ಟೀಸರ್ ಗೆ ಎ ಸರ್ಟಿಫಿಕೇಟ್ ನೀಡಿ ಎಲ್ಲಾ ವಯಸ್ಸಿನವರು ವೀಕ್ಷಿಸುವುದನ್ನು ನಿರ್ಬಂಧಿಸಬೇಕು. ಏಳು ದಿನದೊಳಗೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.

