HomeLatest Newsಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಪರಿಚಿತಳಾದ ಯುವತಿ ನಂಬಿದ ಉದ್ಯಮಿಗೆ ಬಿಗ್ ಶಾಕ್: ಮದುವೆಯಾಗುವುದಾಗಿ ನಂಬಿಸಿ 12...

ಮ್ಯಾಟ್ರಿಮೋನಿಯಲ್ ಸೈಟ್ ನಲ್ಲಿ ಪರಿಚಿತಳಾದ ಯುವತಿ ನಂಬಿದ ಉದ್ಯಮಿಗೆ ಬಿಗ್ ಶಾಕ್: ಮದುವೆಯಾಗುವುದಾಗಿ ನಂಬಿಸಿ 12 ಲಕ್ಷ ಪಡೆದು ವಂಚನೆ

ಬೆಂಗಳೂರು: ಮ್ಯಾಟ್ರಿಮೋನಿಯಲ್ ತಾಣದ ಮೂಲಕ ಯುವತಿಯೊಬ್ಬಳು ಸ್ನೇಹದ ಬಲೆಗೆ ಬೆಳಿಸಿಕೊಂಡು ಮದುವೆಯಾಗುವುದಾಗಿ ನಂಬಿಸಿ ಉದ್ಯಮಿಯಿಂದ 12.61 ಲಕ್ಷ ರೂ. ಪಡೆದು ವಂಚಿಸಿದ ಘಟನೆ ನಡೆದಿದೆ.

ಜೆ.ಪಿ. ನಗರದ ರಾಘವೇಂದ್ರ ಲೇಔಟ್ ನಿವಾಸಿ ಜಿ. ರಘು ವಂಚನೆಗೆ ಒಳಗಾಗಿದ್ದು, ದಕ್ಷಿಣ ವಿಭಾಗದ ಸಿಇಎನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಜನವರಿಯಲ್ಲಿ ಮ್ಯಾಟ್ರಿಮೋನಿಯಲ್ ವೆಬ್ಸೈಟ್ ನಲ್ಲಿ ರಘು ಅವರಿಗೆ ಪ್ರಿಯಾಂಕಾ ಎಂಬಾಕೆ ಪರಿಚಯವಾಗಿದ್ದಾಳೆ. ಮಾತುಕತೆ ನಡೆದು ಮದುವೆ ಹಂತಕ್ಕೆ ಹೋಗಿದೆ.

ಕೆಲವು ದಿನಗಳ ನಂತರ ಪ್ರಿಯಾಂಕಾ ಸಂಕಷ್ಟಕ್ಕೆ ಸಿಲುಕಿದ್ದು, ತಕ್ಷಣಕ್ಕೆ ಮದುವೆಯಾಗಲು ಸಾಧ್ಯವಿಲ್ಲ ಎಂದು ಅಳಲು ತೋಡಿಕೊಂಡಿದ್ದಾಳೆ. ಆನ್ಲೈನ್ ಗೆಳತಿಯ ನೋವಿಗೆ ಮಿಡಿದು ರಘು ಸುಮ್ಮನಾಗಿದ್ದಾರೆ. ನಂತರದಲ್ಲಿ ತಾನು ಷೇರು ಮಾರುಕಟ್ಟೆಯಲ್ಲಿ ಹಣ ಹೂಡಿಕೆ ಮಾಡಿ ಒಳ್ಳೆಯ ಲಾಭಗಳಿಸಿದ್ದೇನೆ. ಆದರೆ ನನ್ನ ಬಳಿ ತಕ್ಷಣಕ್ಕೆ ಹಣ ಇಲ್ಲ. ನೀವು ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ಪಡೆದು ಆನಂತರ ಮದುವೆ ಮಾಡಿಕೊಳ್ಳೋಣ ಎಂದು ಹೇಳಿದ್ದಾಳೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಇದಕ್ಕೆ ರಘು ನನಗೆ ಷೇರು ಮಾರುಕಟ್ಟೆಯ ಬಗ್ಗೆ ಜ್ಞಾನ ಇಲ್ಲ ಎಂದು ತಿಳಿಸಿದ್ದಾರೆ. ನಾನು ಹೇಳಿಕೊಡುತ್ತೇನೆ ಎಂದು ಆಕೆ ನಂಬಿಸಿದ್ದಾಳೆ. ಆರೋಪಿ ಸೂಚಿಸಿದ್ದ ಬ್ಯಾಂಕ್ ಖಾತೆಗಳಿಗೆ ರಘು ಹಣ ವರ್ಗಾಯಿಸಿದ್ದಾರೆ. ಆದರೆ ನಯಾ ಪೈಸೆ ಲಾಭ ಬಂದಿಲ್ಲ. ನಂತರ ಆಕೆ ಸಂಪರ್ಕ ಕಳೆದುಕೊಂಡಿದ್ದಾಳೆ. ವಂಚನೆಗೊಳಗಾದ ರಘು ದೂರು ನೀಡಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular