ರಾಯಚೂರು: ರಾಯಚೂರು ಜಿಲ್ಲೆ ಸಿಂಧನೂರು ತಾಲೂಕಿನ ಮುಕ್ಕುಂದಾ ಗ್ರಾಮದ ಬಳಿ ತುಂಗಭದ್ರಾ ನದಿಯಲ್ಲಿ ರೀಲ್ಸ್ ಮಾಡಲು ಹೋಗಿ ಯುವಕನ್ನೊಬ್ಬ ನದಿ ಪಾಲಾಗಿದ್ದಾನೆ.
ಗಂಗಾನಗರ ನಿವಾಸಿ ಅಮನ್ ಖಾನ್(22) ಮೃತಪಟ್ಟ ಯುವಕ. ಭಾನುವಾರ ಗೆಳೆಯರೊಂದಿಗೆ ನದಿ ಬಳಿಗೆ ತೆರಳಿದ್ದ ಅಮನ್ ಖಾನ್ ರೀಲ್ಸ್ ಮಾಡುತ್ತಿದ್ದ ವೇಳೆ ಘಟನೆ ನಡೆದಿದೆ. ಅಮನ್ ಖಾನ್ ನದಿಯಲ್ಲಿ ಈಜಾಡುತ್ತಾ ರೀಲ್ಸ್ ಮಾಡುವಾಗ ನೀರಿನಲ್ಲಿ ಮುಳುಗಿದ್ದು, ಕೂಡಲೇ ಜತೆಗಿದ್ದ ಸ್ನೇಹಿತರು ಅವರನ್ನು ರಕ್ಷಿಸಲು ಮುಂದಾದರೂ ಬದುಕಿಸಲು ಸಾಧ್ಯವಾಗಿಲ್ಲ. ಸಿಂಧನೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

