HomeKarnatakaBREAKING : ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಮನನೊಂದು ಚಿಕ್ಕಮಗಳೂರಲ್ಲಿ ಯುವಕ ಆತ್ಮಹತ್ಯೆ.!

BREAKING : ಮದುವೆಗೆ ಹೆಣ್ಣು ಸಿಗುತ್ತಿಲ್ಲ ಎಂದು ಮನನೊಂದು ಚಿಕ್ಕಮಗಳೂರಲ್ಲಿ ಯುವಕ ಆತ್ಮಹತ್ಯೆ.!

ಕಡೂರು(ಚಿಕ್ಕಮಗಳೂರು): ಕಳೆದ ಕೆಲವು ವರ್ಷಗಳಿಂದ ಮದುವೆಗೆ ಸೂಕ್ತ ಹೆಣ್ಣು ಸಿಗುತ್ತಿಲ್ಲ ಎಂಬ ಹತಾಶೆಯಿಂದ ಮನನೊಂದ 26 ವರ್ಷದ ಕುರಿಗಾಹಿ ಯುವಕನೊಬ್ಬ ಕುಡಿದ ಮತ್ತಿನಲ್ಲಿ ಮರಕ್ಕೆ ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ಕಡೂರು ತಾಲೂಕಿನಲ್ಲಿ ನಡೆದಿದೆ..

ಘಟನೆ ವಿವರ

ಮೃತ ಯುವಕನನ್ನು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಬೋರಗಾನಹಳ್ಳಿ ಗ್ರಾಮದ ಕುಮಾರ್ (26) ಎಂದು ಗುರುತಿಸಲಾಗಿದೆ. ಕುಮಾರ್ ಮೂಲತಃ ಕುರಿಗಾಹಿ ವೃತ್ತಿ ಮಾಡುತ್ತಿದ್ದನು. ಕಳೆದ ಕೆಲವು ವರ್ಷಗಳಿಂದ ಈತನ ಕುಟುಂಬಸ್ಥರು ಮದುವೆಗೆ ಹೆಣ್ಣು ಹುಡುಕುತ್ತಿದ್ದರೂ, ಸೂಕ್ತ ಸಂಬಂಧ ಕೂಡಿಬಂದಿರಲಿಲ್ಲ. ಇದರಿಂದಾಗಿ ತೀವ್ರ ಹತಾಶೆಗೆ ಒಳಗಾಗಿದ್ದ ಕುಮಾರ್, ಹೆಣ್ಣು ಸಿಗದಿದ್ದಕ್ಕೆ ಮನನೊಂದಿದ್ದನು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮೃತನು ಶಿರಾ ತಾಲೂಕಿನ ಬ್ರಹ್ಮಸಂದ್ರ ಗ್ರಾಮದವನು ಎಂದು ಗುರುತಿಸಲಾಗಿದೆ. ಕುರಿ ಮೇಯಿಸಲು ಹೋಗಿದ್ದ ಈತ   ಕುಡಿದ ಮತ್ತಿನಲ್ಲಿ ಹತಾಶೆಯಿಂದ ಮರಕ್ಕೆ ನೇಣು ಹಾಕಿಕೊಂಡಿದ್ದಾನೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದು, ಯಗಟಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಯುವಕನ ಸಾವಿನಿಂದಾಗಿ ಬೋರಗಾನಹಳ್ಳಿ ಗ್ರಾಮದಲ್ಲಿ ಶೋಕ ಛಾಯೆ ಆವರಿಸಿದೆ.

ಸಲಹೆ: ಆತ್ಮಹತ್ಯೆ ಯಾವುದೇ ಸಮಸ್ಯೆಗೆ ಪರಿಹಾರವಲ್ಲ. ನಿಮಗೆ ಅಥವಾ ನಿಮ್ಮ ಆಪ್ತರಿಗೆ ಯಾವುದೇ ರೀತಿಯ ಮಾನಸಿಕ ಹತಾಶೆ ಅಥವಾ ತೊಂದರೆಯಿದ್ದರೆ, ದಯವಿಟ್ಟು ಸಹಾಯಕ್ಕಾಗಿ ಕರೆ ಮಾಡಿ. ಆತ್ಮಹತ್ಯೆ ತಡೆಗೆ ಸಹಾಯವಾಣಿ ಸಂಖ್ಯೆಗಳು ಲಭ್ಯವಿವೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular