HomeLatest NewsSHOCKING : ನಾಯಿ ಕಚ್ಚಿದ ನಂತರ ತನಗೆ ‘ರೇಬಿಸ್’ ಬರಬಹುದೆಂದು ಹೆದರಿ ಯುವಕ ಆತ್ಮಹತ್ಯೆ.!

SHOCKING : ನಾಯಿ ಕಚ್ಚಿದ ನಂತರ ತನಗೆ ‘ರೇಬಿಸ್’ ಬರಬಹುದೆಂದು ಹೆದರಿ ಯುವಕ ಆತ್ಮಹತ್ಯೆ.!

ಮುಂಬೈ: ಮಹಾರಾಷ್ಟ್ರದ ಕಲ್ಯಾಣ್‌’ನಲ್ಲಿ 30 ವರ್ಷದ ಬ್ಯಾಂಕ್ ಉದ್ಯೋಗಿಯೊಬ್ಬರು ಬೀದಿನಾಯಿ ಕಚ್ಚಿದ ನಂತರ ತಮಗೆ ‘ರೇಬಿಸ್’ (Rabies) ರೋಗ ತಗುಲಬಹುದೆಂಬ ವಿಪರೀತ ಭಯದಿಂದ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮುಂಬೈ: ಮಹಾರಾಷ್ಟ್ರದ ಕಲ್ಯಾಣ್ನಲ್ಲಿ 30 ವರ್ಷದ ಬ್ಯಾಂಕ್ ಉದ್ಯೋಗಿಯೊಬ್ಬರು ಬೀದಿನಾಯಿ ಕಚ್ಚಿದ ನಂತರ ತಮಗೆ ‘ರೇಬಿಸ್’ (Rabies) ರೋಗ ತಗುಲಬಹುದೆಂಬ ವಿಪರೀತ ಭಯದಿಂದ ಭಾನುವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಮೃತರನ್ನು ‘ಅಯಾಸ್ ವಿಶ್ವನಾಥ್ ಅಮಿನ್’ ಎಂದು ಗುರುತಿಸಲಾಗಿದ್ದು, ಇವರು ಕಲ್ಯಾಣ್ ಪೂರ್ವದ ತಿಸ್ಗಾಂವ್ ನಾಕಾ ಪ್ರದೇಶದಲ್ಲಿ ತಮ್ಮ ಕುಟುಂಬದೊಂದಿಗೆ ವಾಸವಾಗಿದ್ದರು. ಇವರು ಕಳೆದ ಎಂಟು ವರ್ಷಗಳಿಂದ ಭಾರತ್ ಬ್ಯಾಂಕ್’ನ ಥಾಣೆ ಶಾಖೆಯಲ್ಲಿ ಕೆಲಸ ಮಾಡುತ್ತಿದ್ದರು.

ಕೆಲವು ದಿನಗಳ ಹಿಂದೆ ಅಯಾಸ್ ಅವರಿಗೆ ಬೀದಿನಾಯಿಯೊಂದು ಕಚ್ಚಿತ್ತು. ವರದಿಗಳ ಪ್ರಕಾರ ಅವರು ರೇಬಿಸ್ ವಿರೋಧಿ ಲಸಿಕೆ (Anti-rabies vaccination) ಪಡೆಯಲು ಪ್ರಾರಂಭಿಸಿದ್ದರು. ಆದರೆ ಇತ್ತೀಚೆಗೆ ಅವರು ತೀವ್ರ ಆತಂಕಕ್ಕೆ ಒಳಗಾಗಿದ್ದರು ಮತ್ತು ವೈರಸ್ ಸೋಂಕಿನ ಲಕ್ಷಣಗಳು ತಮಗೆ ಕಾಣಿಸಿಕೊಳ್ಳುತ್ತಿವೆ ಎಂದು ನಂಬಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಸ್ಥಳದಲ್ಲಿ ಪತ್ತೆಯಾದ ಆತ್ಮಹತ್ಯೆ ಪತ್ರದಲ್ಲಿ ಈ ರೋಗದ ಭಯವೇ ತಮ್ಮ ನಿರ್ಧಾರಕ್ಕೆ ಕಾರಣ ಎಂದು ಅವರು ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ.
ವರದಿಯ ಪ್ರಕಾರ, ನಾಯಿ ಕಚ್ಚಿದ ನಂತರ ಅಮಿನ್ ಕೇವಲ ಒಂದು ರೇಬಿಸ್ ವಿರೋಧಿ ಇಂಜೆಕ್ಷನ್ ಪಡೆದಿದ್ದರು ಎಂದು ಕುಟುಂಬ ಸದಸ್ಯರು ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ನಂತರ ಅವರ ನಡವಳಿಕೆಯಲ್ಲಿ ಅಸಹಜ ಬದಲಾವಣೆಗಳು ಕಂಡುಬಂದವು ಮತ್ತು ತಮ್ಮ ಆರೋಗ್ಯದ ಬಗ್ಗೆ ಆತಂಕ ಹೆಚ್ಚಾಯಿತು ಎಂದು ಹೇಳಿದ್ದಾರೆ.ಸದ್ಯ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದು, ಮುಂದಿನ ತನಿಖೆ ನಡೆಸುತ್ತಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

(ನಿಮಗೆ ಅಥವಾ ನಿಮಗೆ ತಿಳಿದಿರುವ ಯಾರಿಗಾದರೂ ಮಾನಸಿಕ ಬೆಂಬಲದ ಅಗತ್ಯವಿದ್ದರೆ, ದಯವಿಟ್ಟು ಹತ್ತಿರದ ಮಾನಸಿಕ ಆರೋಗ್ಯ ತಜ್ಞರನ್ನು ಸಂಪರ್ಕಿಸಿ.)

ಗಮನಿಸಿ: ನಾಯಿ ಕಚ್ಚಿದಾಗ ವೈದ್ಯರ ಸಲಹೆಯಂತೆ ಲಸಿಕೆಯ ಎಲ್ಲಾ ಡೋಸ್ಗಳನ್ನು ಪೂರ್ಣಗೊಳಿಸುವುದು ಬಹಳ ಮುಖ್ಯ. ರೇಬಿಸ್ ಬಗ್ಗೆ ಅನಗತ್ಯ ಭಯಪಡುವ ಬದಲು ಸರಿಯಾದ ವೈದ್ಯಕೀಯ ಮಾಹಿತಿ ಪಡೆಯುವುದು ಉತ್ತಮ.

ಕರ್ನಾಟಕ ಮತ್ತು ರಾಷ್ಟ್ರೀಯ ಸಹಾಯವಾಣಿಗಳು

ಸಹಾಯವಾಣಿ ಹೆಸರುದೂರವಾಣಿ ಸಂಖ್ಯೆಸಮಯ
ನಮ್ಮ ಕೈ ಹಿಡಿ (ಕರ್ನಾಟಕ ಸರ್ಕಾರ)10424/7 (ಉಚಿತ ಸೇವೆ)
ನಿಮ್ಹಾನ್ಸ್ (NIMHANS) ಸಹಾಯವಾಣಿ080-4611000724/7
ಕಿರಣ್ (KIRAN – ಕೇಂದ್ರ ಸರ್ಕಾರ)1800-599-001924/7
ಸಹಾಯಿ (Sahai)080-25497777ಬೆಳಿಗ್ಗೆ 10 ರಿಂದ ಸಂಜೆ 5

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular