HomeKarnatakaFree Bus Service : ಬಸ್ ನಿಲ್ಲಿಸಿಲ್ಲ ಎಂದು ಬಸ್ ಗೆ ಕಲ್ಲು ತೂರಿದ ಮಹಿಳೆ

Free Bus Service : ಬಸ್ ನಿಲ್ಲಿಸಿಲ್ಲ ಎಂದು ಬಸ್ ಗೆ ಕಲ್ಲು ತೂರಿದ ಮಹಿಳೆ

ಕೊಪ್ಪಳ : ಬಸ್ ನಿಲ್ಲಿಸಿಲ್ಲವೆಂದು ರೊಚ್ಚಿಗೆದ್ದ ಮಹಿಳೆಯೊಬ್ಬರು ಬಸ್ ಗೆ ಕಲ್ಲು ತೂರಿದ ಘಟನೆ ಕೊಪ್ಪಳ ತಾಲೂಕಿನ ಹೊಸಲಿಂಗಾಪುರ ಬಳಿ ನಡೆದಿದೆ.

ಕಲ್ಯಾಣ ಕರ್ನಾಟಕ ಸಾರಿಗೆ ವಿಭಾಗದ ಎಕ್ಸ್ ಪ್ರೆಸ್ ಬಸ್ ಕೊಪ್ಪಳದಿಂದ-ಹೊಸಪೇಟೆಗೆ ಹೊರಟಿತ್ತು. ಇಲಕಲ್ಲ ಬಳಿಯ ಪಾಪನಳ್ಳಿ ನಿವಾಸಿ ಲಕ್ಷ್ಮಿ ಎಂಬುವರು ಬಸ್ ನಿಲ್ಲಿಸಿಲ್ಲವೆಂದು ಬಸ್ ಗೆ ಕಲ್ಲು ಎಸೆದಿದ್ದಾರೆ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಪ್ರಯಾಣ ನೀಡಲಾಗುತ್ತಿದ್ದು, ಸಾರಿಗೆ ಬಸ್ ಗಳು ಮಹಿಳಾ ಪ್ರಯಾಣಿಕರಿಂದ ತುಂಬಿ ತುಳುಕುತ್ತಿದೆ. ಆದರೆ ಬಸ್ ನಿಲ್ಲಿಸಿಲ್ಲ ಎಂದು ಬಸ್ ಗೆ ಕಲ್ಲು ಹೊಡೆಯುವುದು ಎಷ್ಟರ ಮಟ್ಟಿಗೆ ಸರಿ.?

ಚುನಾವಣೆ ಸಂದರ್ಭದಲ್ಲಿ ನೀಡಿದ್ದ 5 ಗ್ಯಾರಂಟಿಗಳ ಪೈಕಿ ‘ಶಕ್ತಿ’ ಯೋಜನೆಯನ್ನು ಕಾಂಗ್ರೆಸ್, ತಾನು ಅಧಿಕಾರಕ್ಕೆ ಬರುತ್ತಿದ್ದಂತೆ ಜಾರಿಗೆ ತಂದಿದೆ. ಈ ಯೋಜನೆಯಡಿ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಸಿಗುತ್ತಿದ್ದು, ಈಗಾಗಲೇ ಕೋಟ್ಯಾಂತರ ಮಂದಿ ಇದರ ಲಾಭ ಪಡೆದಿದ್ದಾರೆ.ಜೂನ್ 11ರ ಮಧ್ಯಾಹ್ನ 1 ಗಂಟೆಯಿಂದ ಇದು ಜಾರಿಗೆ ಬಂದಿದ್ದು, 14 ದಿನಗಳಲ್ಲಿ ಅಂದರೆ ಜೂನ್ 24ರ ಶನಿವಾರ ರಾತ್ರಿ ಹನ್ನೆರಡು ಗಂಟೆಯವರೆಗೆ ಶಕ್ತಿ ಯೋಜನೆಯ ಅಡಿ 7.15 ಕೋಟಿ ಮಹಿಳೆಯರು ಪ್ರಯಾಣ ಬೆಳೆಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular