ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆಯ ಜಯನಗರದಲ್ಲಿ ಇಂದು ಅತ್ಯಂತ ದಾರುಣ ಘಟನೆಯೊಂದು ನಡೆದಿದೆ. ದಂಪತಿಗಳು ತಮ್ಮ ಎರಡು ವರ್ಷದ ಮಗುವಿನ ಕತ್ತು ಹಿಸುಕಿ, ತಾವೂ ನೇಣಿಗೆ ಶರಣಾಗಿದ್ದಾರೆ.
ದರ್ಶನ್ ಮತ್ತು ದಿವ್ಯಶ್ರೀ ಎಂಬುವವರು ತಮ್ಮ ಎರಡು ವರ್ಷದ ಮಗುವಿನ ಕತ್ತು ಹಿಸುಕಿ, ತಾವೂ ನೇಣಿಗೆ ಶರಣಾಗಿದ್ದಾರೆ.ಕೆ.ಆರ್. ಪೇಟೆ ಟೌನ್‌ನ ಜಯನಗರದ ಸ್ವಗೃಹದಲ್ಲಿ ಈ ಘಟನೆ ಸಂಭವಿಸಿದೆ.
ಪೋಷಕರು ಮಗುವನ್ನು ಕೊಲ್ಲಲು ಯತ್ನಿಸಿ ತಾವು ಆತ್ಮಹತ್ಯೆ ಮಾಡಿಕೊಂಡಿದ್ದರೂ, ಅದೃಷ್ಟವಶಾತ್ ಮಗು ಬದುಕುಳಿದಿದೆ.ಮೃತ ದರ್ಶನ್ ಮತ್ತು ದಿವ್ಯಶ್ರೀ ಕಳೆದ ಮೂರು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದರು.
ವಿಷಯ ತಿಳಿದ ಕೆ.ಆರ್. ಪೇಟೆ ಟೌನ್ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ದಂಪತಿಗಳ ಈ ತೀವ್ರ ನಿರ್ಧಾರಕ್ಕೆ ನಿಖರವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

