HomeKarnatakaBIG NEWS : ಬೆಂಗಳೂರಿನಲ್ಲಿ ಮಾಲೀಕರ ಮನೆ ದೋಚಿದ 'ಸೆಕ್ಯೂರಿಟಿ ಗಾರ್ಡ್' ; 15 ಕೋಟಿ...

BIG NEWS : ಬೆಂಗಳೂರಿನಲ್ಲಿ ಮಾಲೀಕರ ಮನೆ ದೋಚಿದ ‘ಸೆಕ್ಯೂರಿಟಿ ಗಾರ್ಡ್’ ; 15 ಕೋಟಿ ಚಿನ್ನ, 41 ಲಕ್ಷ ಹಣದೊಂದಿಗೆ ಪರಾರಿ.!

ಬೆಂಗಳೂರು : ಮಾಲೀಕರ ಮನೆ ದೋಚಿದ ಸೆಕ್ಯೂರಿಟಿ ಗಾರ್ಡ್ 15 ಕೋಟಿ ಚಿನ್ನ, 41 ಲಕ್ಷ ಹಣದೊಂದಿಗೆ ಪರಾರಿಯಾದ ಘಟನೆ ವಿಜಯನಗರದ ಹೊಸಹಳ್ಳಿ ಎಕ್ಸ್ ಟೆನ್ಶನ್ ನಲ್ಲಿ ನಡೆದಿದೆ.

ಜ್ಯುವೆಲ್ಲರಿ ಶಾಪ್ ನ ಮಾಲೀಕ ಸುರೇಂದ್ರ ಕುಮಾರ್ ಜೈನ್ ಅವರ ಮನೆಯಲ್ಲಿ ಈ ಘಟನೆ ನಡೆದಿದೆ. ಬೇಲಿಯೇ ಎದ್ದು ಹೊಲ ಮೇಯ್ದಂತೆ ಮನೆಯಲ್ಲಿ ಕಾವಲಿದ್ದ ನೇಪಾಳ ಮೂಲದ ಸೆಕ್ಯೂರಿಟಿ ಗಾರ್ಡ್ ನಮ್ರಾಜ್ ಖಾನ್ ಚಿನ್ನ ಹಣದೊಂದಿಗೆ ಎಸ್ಕೇಪ್ ಆಗಿದ್ದಾನೆ.

ಸುರೇಂದ್ರ ಕುಮಾರ್ ಅವರು ತಮ್ಮ ಕುಟುಂಬದವರ ಜೊತೆ ಜಾತ್ರೆ ಹಿನ್ನೆಲೆ ಗುಜರಾತ್ ನ ಗಿರ್ನಾರ್ ಗೆ ತೆರಳಿದ್ದರು. ಜಾತ್ರೆ ಮುಗಿಸಿಕೊಂಡು ನ.7 ರಂದು ಮನೆಗೆ ಬಂದಾಗ ಮನೆಯಲ್ಲಿದ್ದ ಹಣ ಹಾಗೂ ಚಿನ್ನಾಭರಣ ಕಳುವಾಗಿರುವುದು ಪತ್ತೆಯಾಗಿದೆ. ಮನೆಯಲ್ಲಿ ಕೆಲಸ ಮಾಡಿಕೊಂಡಿದ್ದ ಸೆಕ್ಯೂರಿಟಿ ಗಾರ್ಡ್ ಹಣ, ಚಿನ್ನದ ಜೊತೆ ಪರಾರಿಯಾಗಿದ್ದು, ಆತನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular