ಉಡುಪಿ : ರಾಜ್ಯದಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಆಫೀಸ್ ಗೆ ರಜೆ ಸಿಗದಿದ್ದಕ್ಕೆ ವೀಡಿಯೋ ಕಾಲ್ ನಲ್ಲೇ ನಲ್ಲೇ ಜೋಡಿಗಳು ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ.
ಹೌದು, ಉಡುಪಿಯಲ್ಲಿ ಬಹಳ ಅಪರೂಪದ ಘಟನೆ ನಡೆದಿದೆ. ಎಂಗೇಜ್ ಮೆಂಟ್ ಮಾಡಿಕೊಳ್ಳಲು ರಜೆ ಸಿಗದೇ ಇದ್ದಕ್ಕೆ ಕುಟುಂಬದವರು ಆನ್ ಲೈನ್ ನಲ್ಲೇ ಎಂಗೇಜ್ ಮೆಂಟ್ ಮಾಡಿಸಿದ್ದಾರೆ. ಆನ್ ಲೈನ್ ನಲ್ಲೇ ಪರಸ್ಪರ ಉಂಗುರ ತೋರಿಸಿ ಯುವಕ ಯುವತಿ ಉಂಗುರ ಧರಿಸಿದ್ದಾರೆ.
ಬೆಂಗಳೂರು ದಕ್ಷಿಣ ಜಿಲ್ಲೆ ಮಾಗಡಿ ತಾಲೂಕಿನ ಚಕ್ರಬಾವಿ ಗ್ರಾಮದ ಯುವಕ ಸುಹಾಸ್ ಎಸ್ ಮತ್ತು ಉಡುಪಿ ನಿವಾಸಿ ಕಾತ್ಯಾಯಿನಿ ಅವರ ನಿಶ್ಚಿತಾರ್ಥ ನಿಗದಿಯಾಗಿತ್ತು. ಆದರೆ ಕೆನಡಾದಲ್ಲಿ ಉದ್ಯೋಗದಲ್ಲಿರುವ ಸುಹಾಸ್ ಗೆ ಬರಲು ಆಗಲಿಲ್ಲ. ರಜೆ ಸಿಕ್ಕಿಲ್ಲ ಎಂದು ಅವರಿಗೆ ಬರಲು ಸಮಸ್ಯೆ ಆಗಿದೆ. ಆದ್ದರಿಂದ ಆನ್ ಲೈನ್ ನಲ್ಲೇ ಕ್ಯಾಮೆರಾಗೆ ಪರಸ್ಪರ ಉಂಗುರ ತೋರಿಸಿ ಯುವಕ ಯುವತಿ ಉಂಗುರ ಧರಿಸಿದ್ದಾರೆ. ಉಡುಪಿಯಲ್ಲಿ ಬೆಳಗ್ಗೆ ಸಮಯದಲ್ಲಿ ನಿಶ್ಚಿತಾರ್ಥ ನಡೆದಿದ್ರೆ, ಕೆನಡಾದಲ್ಲಿ ಮಧ್ಯರಾತ್ರಿ ಆಗಿತ್ತು.

