
ಶುಕ್ರವಾರ ತಡರಾತ್ರಿ ಪ್ರಯಾಣಿಕರ ಬಸ್ ಗೆ ಬೆಂಕಿ ಕಾಣಿಸಿಕೊಂಡಿದೆ. ಘಟನೆಯಲ್ಲಿ ಓರ್ವ ಸಾವನ್ನಪ್ಪಿದ್ದು, ಸುಮಾರು 30 ಮಂದಿ ಗಾಯಗೊಂಡಿದ್ದಾರೆ. ವರದಿಗಳ ಪ್ರಕಾರ, ಬಸ್ ಒಡಿಶಾದ ಪಾರಾದೀಪ್ ಗೆ ಪ್ರಯಾಣಿಸುತ್ತಿತ್ತು.
ಮಾಹಿತಿಯ ಪ್ರಕಾರ, ಬಸ್ ಸಂಜೆ 5 ಗಂಟೆ ಸುಮಾರಿಗೆ ಕೋಲ್ಕತ್ತಾದ ಬಾಘುಪತ್ನಿಂದ ಹೊರಟಿತು. ರಾತ್ರಿ 10 ಗಂಟೆ ಸುಮಾರಿಗೆ ಬಸ್ ಪಶ್ಚಿಮ ಬಂಗಾಳದ ಮಾಧಬ್ಪುರ ಪ್ರದೇಶವನ್ನು ತಲುಪಿದೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
#WATCH | West Bengal: Fire broke out in a passenger bus at NH 16, Madpur in West Midnapore. Fire tenders are present at the spot. Further details awaited. pic.twitter.com/nF2jVa2uzc
— ANI (@ANI) November 10, 2023

