HomeBeautyಕೂದಲು ನಯವಾಗಲು ಫಾಲೊ ಮಾಡಿ ಈ ಟಿಪ್ಸ್

ಕೂದಲು ನಯವಾಗಲು ಫಾಲೊ ಮಾಡಿ ಈ ಟಿಪ್ಸ್

ತಲೆಗೂದಲು ತುಂಬಾ ನಯವಾಗಿರಬೇಕು, ಹೀರೋಯಿನ್ ಗಳ ಹಾಗೆ ಸಾಫ್ಟ್ ಮತ್ತು ಸಿಲ್ಕ್ ಆಗಿರಬೇಕು ಎಂಬುದು ಬಹುತೇಕರ ಬಯಕೆಯಾಗಿರುತ್ತದೆ. ಅದಕ್ಕೆ ಹೆಚ್ಚು ಹಣ ಖರ್ಚು ಮಾಡಬೇಕಿಲ್ಲ. ಮನೆಯಲ್ಲೇ ಸುಲಭವಾಗಿ ಸಿಗುವ ಕೆಲವು ಸಾಮಗ್ರಿಗಳಿಂದ ನಿಮ್ಮ ಕೂದಲನ್ನು ಸಾಫ್ಟ್ ಮಾಡಬಹುದು.

ಕೊಬ್ಬರಿ ಎಣ್ಣೆಯನ್ನ ಸ್ವಲ್ಪ ಬಿಸಿ ಮಾಡಿ, ಅದಕ್ಕೆ ಗುಲಾಬಿ ದಳಗಳನ್ನ ಹಾಕಿ. ಎಣ್ಣೆ ತಣ್ಣಗಾದ ಬಳಿಕ ಗುಲಾಬಿ ದಳಗಳನ್ನ ಕಿವುಚಿ ತೆಗೆಯಿರಿ. ನಂತರ ತಲೆಗೆ ಎಣ್ಣೆ ಹಚ್ಚಿ ಮಸಾಜ್ ಮಾಡಿ, 3 ಗಂಟೆಗಳ ನಂತರ ಸ್ನಾನ ಮಾಡಿ. ರಾತ್ರಿ ಎಣ್ಣೆ ಹಚ್ಚಿಕೊಂಡು ಬೆಳಿಗ್ಗೆ ತಲೆಗೆ ಸ್ನಾನ ಮಾಡುವುದು ಉತ್ತಮ.

ಕುದಿಯುವ ನೀರಿಗೆ ಟೀ ಪುಡಿ ಮತ್ತು 5-6 ಲವಂಗ ಹಾಕಿ ಡಿಕಾಕ್ಷನ್ ತಯಾರಿಸಿ. ತಣ್ಣಗಾದ ನಂತರ ಮೆಹಂದಿ ಪುಡಿ, ಸ್ವಲ್ಪ ಮೊಸರು/ ನಿಂಬೆಹಣ್ಣು ಹಾಕಿ ಮಿಕ್ಸ್ ಮಾಡಿ 3 ಗಂಟೆ ನೆನೆಯಲು ಬಿಡಿ. ಕೂದಲಿಗೆ ಸಂಪೂರ್ಣವಾಗಿ ಮೆಹಂದಿ ಹಚ್ಚಿ 1/2 ಗಂಟೆ ಒಣಗಲು ಬಿಡಿ. ಬಳಿಕ ಸ್ನಾನ ಮಾಡಿ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular