HomeLatest News'ಲವ್ ಬ್ರೇಕಪ್‌'ಗೆ ಮನನೊಂದು ಖ್ಯಾತ ಯೂಟ್ಯೂಬರ್ ಆತ್ಮಹತ್ಯೆ , ಆ ವಿಡಿಯೋವೇ ಕೊನೆಯಾಯ್ತು!

‘ಲವ್ ಬ್ರೇಕಪ್‌’ಗೆ ಮನನೊಂದು ಖ್ಯಾತ ಯೂಟ್ಯೂಬರ್ ಆತ್ಮಹತ್ಯೆ , ಆ ವಿಡಿಯೋವೇ ಕೊನೆಯಾಯ್ತು!

ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ರಾಯದುರ್ಗಂ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಯುವ ಯೂಟ್ಯೂಬರ್ ಕೋಮಲಿ (21) ಆತ್ಮಹತ್ಯೆ ಮಾಡಿಕೊಂಡಿರುವುದು ತೀವ್ರ ಸಂಚಲನ ಮೂಡಿಸಿದೆ. ಮಣಿಕೊಂಡದ ಚಿತ್ರಪುರಿ ಕಾಲೋನಿಯಲ್ಲಿರುವ ಸಂಬಂಧಿಕರ ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಅವರು ಪ್ರಾಣ ಕಳೆದುಕೊಂಡಿದ್ದಾರೆ.

ಮಲ್ಲಾರೆಡ್ಡಿ ವಿಶ್ವವಿದ್ಯಾನಿಲಯದಲ್ಲಿ ಬಿಎಸ್‌ಸಿ ವ್ಯಾಸಂಗ ಮಾಡುತ್ತಿದ್ದ ಕೋಮಲಿ, ಸಾಫ್ಟ್‌ವೇರ್ ಉದ್ಯೋಗಿ ಹಾಗೂ ಮತ್ತೊಬ್ಬ ಯೂಟ್ಯೂಬರ್ ಅಖಿಲ್ ರೆಡ್ಡಿ ಎಂಬುವವರನ್ನು ಪ್ರೀತಿಸುತ್ತಿದ್ದರು. ಸುಮಾರು ಮೂರು ವರ್ಷಗಳ ಕಾಲ ಇವರ ಪ್ರೇಮ ಸಂಬಂಧ ಚೆನ್ನಾಗಿಯೇ ಇತ್ತು. ಆದರೆ ವರ್ಷದ ಹಿಂದೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿ ಸಂಬಂಧ ಕಡಿದುಹೋಗಿತ್ತು (Breakup). ಇದರಿಂದಾಗಿ ಕೋಮಲಿ ತೀವ್ರ ಮಾನಸಿಕ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ.ಬ್ರೇಕಪ್ ನಂತರ ಅವರು ಈ ಹಿಂದೆ ಒಮ್ಮೆ ಆತ್ಮಹತ್ಯೆಗೆ ಪ್ರಯತ್ನಿಸಿದ್ದರು, ಆದರೆ ಕುಟುಂಬಸ್ಥರು ಅವರನ್ನು ರಕ್ಷಿಸಿದ್ದರು. ಇತ್ತೀಚೆಗೆ ಮತ್ತೆ ಅಖಿಲ್ ಜೊತೆ ಸಂಭಾಷಣೆಯ ವೇಳೆ ಜಗಳ ನಡೆದಿದ್ದು, ಇದು ಈ ಕಠಿಣ ನಿರ್ಧಾರಕ್ಕೆ ಕಾರಣವಾಗಿರಬಹುದು ಎಂದು ಶಂಕಿಸಲಾಗಿದೆ.

ಕೊನೆಯ ಪೋಸ್ಟ್ ಆದ ತಿರುಮಲ ವಿಡಿಯೋ: ಕೋಮಲಿ ಅವರ ಲೈಫ್‌ಸ್ಟೈಲ್ ಮತ್ತು ಡೈಲಿ ವ್ಲಾಗ್‌ಗಳಿಗೆ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಅಭಿಮಾನಿಗಳಿದ್ದರು. ತಮ್ಮ ವೈಯಕ್ತಿಕ ಇಚ್ಛೆಯೊಂದು ಈಡೇರಲಿ ಎಂದು ತಿರುಮಲ ಬೆಟ್ಟವನ್ನು ಹತ್ತುತ್ತಾ ಪ್ರತಿ ಮೆಟ್ಟಿಲಿಗೂ ಕುಂಕುಮ ಇಡುತ್ತಿರುವ ವಿಡಿಯೋವನ್ನು ಅವರು ಇತ್ತೀಚೆಗೆ ಪೋಸ್ಟ್ ಮಾಡಿದ್ದರು. ಅದೇ ಅವರ ಕೊನೆಯ ವಿಡಿಯೋ ಆಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಪೊಲೀಸ್ ತನಿಖೆ: ರಾಯದುರ್ಗಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಕೋಮಲಿ ಅವರ ಕುಟುಂಬ ಸದಸ್ಯರು ಮತ್ತು ಸ್ನೇಹಿತರನ್ನು ವಿಚಾರಣೆ ನಡೆಸುತ್ತಿದ್ದಾರೆ. ಪ್ರೇಮ ವೈಫಲ್ಯದ ಜೊತೆಗೆ ಸೋಶಿಯಲ್ ಮೀಡಿಯಾ ಒತ್ತಡ ಅಥವಾ ಬೇರೆ ಯಾವುದಾದರೂ ಕಾರಣಗಳಿವೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular