HomeRecipiesಬ್ರೇಕ್​ ಫಾಸ್ಟ್​​ಗೆ ರುಚಿಯಾದ ರೆಸಿಪಿ ಅವಲಕ್ಕಿ ಚಿತ್ರಾನ್ನ

ಬ್ರೇಕ್​ ಫಾಸ್ಟ್​​ಗೆ ರುಚಿಯಾದ ರೆಸಿಪಿ ಅವಲಕ್ಕಿ ಚಿತ್ರಾನ್ನ

ಬೇಕಾಗುವ ಸಾಮಗ್ರಿ : ತೆಳು ಅವಲಕ್ಕಿ 2 ಕಪ್​, ಈರುಳ್ಳಿ – 1, ಶೇಂಗಾ – 3 ಚಮಚ,  ಕಡ್ಲೆಬೇಳೆ – 1ಚಮಚ, ಹಸಿ ಮೆಣಸು 4, ಕರಿಬೇವಿನ ಸೊಪ್ಪು, ಅರಿಶಿಣ 1/2 ಸ್ಪೂನ್​, ನಿಂಬು 1/2,‌ ಸಾಸಿವೆ 1/4 ಚಮಚ, ಜೀರಿಗೆ 1/4 ಚಮಚ, ಉಪ್ಪು ರುಚಿಗೆ ತಕ್ಕಷ್ಟು, ಅಡುಗೆ ಎಣ್ಣೆ, ಕೊತ್ತಂಬರಿ ಸೊಪ್ಪು

ಮಾಡುವ ವಿಧಾನ: ತೆಳು ಅವಲಕ್ಕಿಯಲ್ಲಿ 30 ಸೆಕೆಂಡ್​​ಗಳ ಕಾಲ ತೊಳೆದುಕೊಳ್ಳಿ. ಪಾತ್ರೆಯಲ್ಲಿ ಮೂರು ಚಮಚ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದ ಮೇಲೆ ಶೇಂಗಾ ಹುರಿದುಕೊಳ್ಳಿ.  ಸಾಸಿವೆ, ಜೀರಿಗೆ, ಕಡ್ಲೇಬೇಳೆ ಹಾಕಿ ಹುರಿಯಿರಿ. ಇದಾದ ಮೇಲೆ ಈರುಳ್ಳಿ, ಬೇವಿನಸೊಪ್ಪು ಹಾಗೂ ಹಸಿ ಮೆಣಸನ್ನ ಹಾಕಿ ಹುರಿಯಿರಿ, ಇದಕ್ಕೆ ಅರಿಶಿಣ ಹಾಕಿ. ಇದೀಗ ತೊಳೆದ ಅವಲಕ್ಕಿಯನ್ನ ಸೇರಿಸಿ. ಇದಕ್ಕೆ ಸ್ವಲ್ಪ ಉಪ್ಪನ್ನ ಹಾಕಿ. ಇದಕ್ಕೆ ನಿಮಗೆ ಬೇಕು ಎನಿಸಿದ್ರೆ ಕಾಯಿ ಸುಳಿಯನ್ನ ಹಾಕಬಹುದು. ಕೊನೆಯಲ್ಲಿ  ನಿಂಬು ಹಾಗೂ ಕೊತ್ತಂಬರಿ ಸೊಪ್ಪನ್ನ ಹಾಕಿ. ಈ ಬ್ರೇಕ್​ ಫಾಸ್ಟ್ ಕೇವಲ 10 ನಿಮಿಷದಲ್ಲಿ ರೆಡಿಯಾಗುತ್ತೆ. ಚಟ್ನಿ ಇಲ್ಲವೇ ಮೊಸರಿನ ಜೊತೆ ಅವಲಕ್ಕಿ ಚಿತ್ರಾನ್ನ ಸಖತ್​ ಆಗಿರುತ್ತೆ.

For Latest News Updates, Join Our Whatsapp Community🚩
RELATED ARTICLES

Most Popular