HomeIndiaಮೂವರು ಮಕ್ಕಳು ಸೇರಿ ಕುಟುಂಬದ ಐವರ ಸಜೀವ ದಹನ

ಮೂವರು ಮಕ್ಕಳು ಸೇರಿ ಕುಟುಂಬದ ಐವರ ಸಜೀವ ದಹನ

ಕಾನ್ಪುರ: ಕಾನ್ಪುರ್ ದೇಹತ್‌ನಲ್ಲಿ ಗುಡಿಸಲಿಗೆ ಬೆಂಕಿ ತಗುಲಿ ದಂಪತಿ ಮತ್ತು ಮೂವರು ಮಕ್ಕಳು ಸಜೀವ ದಹನಗೊಂಡಿದ್ದಾರೆ.

ರೂರಾ ಪೊಲೀಸ್ ಠಾಣೆ ವ್ಯಾಪ್ತಿಯ ಹರಾಮೌ ಗ್ರಾಮದ ಬಂಜಾರರ ದೊಡ್ಡ ಗುಡಿಸಲಿನಲ್ಲಿ ಈ ಘಟನೆ ನಡೆದಿದೆ. ಬೆಂಕಿ ಹೊತ್ತಿಕೊಂಡಾಗ ಕುಟುಂಬಸ್ಥರು ಗುಡಿಸಲಿನಲ್ಲಿ ಮಲಗಿದ್ದರು. ಅವರು ಸಕಾಲಕ್ಕೆ ಹೊರಬರಲು ಸಾಧ್ಯವಾಗಲಿಲ್ಲ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಮಾಹಿತಿ ತಿಳಿದು ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳ ಬೆಂಕಿಯನ್ನು ನಿಯಂತ್ರಿಸಿದರಾದರೂ ಅಷ್ಟೊತ್ತಿಗಾಗಲೇ ಕುಟುಂಬದ ಐವರು, ಮನೆ ಸುಟ್ಟು ಹೋಗಿವೆ. ಠಾಣಾ ಪ್ರಭಾರಿ, ಸಿಒ ಮತ್ತು ಎಸ್ಪಿ ತಡರಾತ್ರಿ ಘಟನಾ ಸ್ಥಳಕ್ಕೆ ಧಾವಿಸಿ, ತನಿಖೆ ನಂತರ ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.

ಎಸ್ಪಿ ಕಾನ್ಪುರ ದೇಹತ್ ಬಿಬಿಜಿಟಿಎಸ್ ಮೂರ್ತಿ ಸುದ್ದಿಗಾರರೊಂದಿಗೆ ಮಾತನಾಡಿ, ರೂರಾ ಪೊಲೀಸ್ ಠಾಣೆ ವ್ಯಾಪ್ತಿಯ ಹರಾಮೌ ಗ್ರಾಮದಲ್ಲಿ ಬಂಜಾರರ ದೊಡ್ಡ ಕಾಲೋನಿ ಇದೆ. ಶನಿವಾರ ತಡರಾತ್ರಿ ಗುಡಿಸಲಿನಲ್ಲಿ ವಾಸಿಸುತ್ತಿದ್ದ ದಂಪತಿ ಸತೀಶ್(30) ಮತ್ತು ಕಾಜಲ್ (26) ಮೂವರು ಮಕ್ಕಳಾದ ಸನ್ನಿ(6), ಸಂದೀಪ್(5), ಗುಡಿಯಾ(3) ಗುಡಿಸಲಿನಲ್ಲಿಯೇ ಸುಟ್ಟು ಕರಕಲಾಗಿದ್ದಾರೆ ಎಂದು ತಿಳಿಸಿದ್ದಾರೆ.

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular