HomeLatest NewsSHOCKING : ಮೊಬೈಲ್ ನೋಡಬೇಡ ಎಂದು ಪೋಷಕರು ಬೈದಿದಕ್ಕೆ ಶಿರಸಿಯಲ್ಲಿ 9ನೇ ತರಗತಿ  ವಿದ್ಯಾರ್ಥಿ ಆತ್ಮಹತ್ಯೆ.!

SHOCKING : ಮೊಬೈಲ್ ನೋಡಬೇಡ ಎಂದು ಪೋಷಕರು ಬೈದಿದಕ್ಕೆ ಶಿರಸಿಯಲ್ಲಿ 9ನೇ ತರಗತಿ  ವಿದ್ಯಾರ್ಥಿ ಆತ್ಮಹತ್ಯೆ.!

ಶಿರಸಿ: ಮೊಬೈಲ್ ನೋಡಬೇಡ, ಪರೀಕ್ಷೆಯ ಸಮಯದಲ್ಲಿ ಓದಿನತ್ತ ಗಮನ ಹರಿಸುವಂತೆ ಪೋಷಕರು ನೀಡಿದ ಸಲಹೆಯಿಂದ ಮನನೊಂದು 9ನೇ ತರಗತಿಯ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಗಣೇಶನಗರದಲ್ಲಿ ಇಂದು (ಮಾ.13) ನಡೆದಿದೆ.

ಘಟನೆಯ ವಿವರ : ಮೃತ ವಿದ್ಯಾರ್ಥಿಯನ್ನು ನಗರದ ಪ್ರತಿಷ್ಠಿತ ಮಾರಿಕಾಂಬ ಪ್ರೌಢಶಾಲೆಯ ವಿದ್ಯಾರ್ಥಿ ಶುಭಂ ನಾಗೇಶ ನಾಯ್ಕ (15) ಎಂದು ಗುರುತಿಸಲಾಗಿದೆ. ಮುಂಬರುವ ಪರೀಕ್ಷೆಗಳ ಹಿನ್ನೆಲೆಯಲ್ಲಿ “ಮೊಬೈಲ್ ನೋಡಬೇಡ, ಟಿವಿ ನೋಡುವುದನ್ನು ಕಡಿಮೆ ಮಾಡಿ, ಓದಿನ ಮೇಲೆ ಗಮನ ಕೇಂದ್ರೀಕರಿಸು” ಎಂದು ಪೋಷಕರು ಬುದ್ಧಿಮಾತು ಹೇಳಿದ್ದರು. ಪೋಷಕರ ಈ ಮಾತಿನಿಂದ ತೀವ್ರವಾಗಿ ಬೇಸರಗೊಂಡ ಬಾಲಕ, ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಆಸ್ಪತ್ರೆಗೆ ದಾಖಲಿಸಿದರೂ ಫಲಿಸದ ಚಿಕಿತ್ಸೆ: ವಿಷಯ ತಿಳಿಯುತ್ತಿದ್ದಂತೆ ತಕ್ಷಣವೇ ಬಾಲಕನನ್ನು ಶಿರಸಿಯ ಟಿಎಸ್ ಎಸ್ (TSS) ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಆಸ್ಪತ್ರೆಗೆ ತಲುಪಿಸುವಷ್ಟರಲ್ಲೇ ಬಾಲಕನ ಸ್ಥಿತಿ ಗಂಭೀರವಾಗಿತ್ತು. ವೈದ್ಯರು ಸತತ ಪ್ರಯತ್ನ ನಡೆಸಿದರೂ ಚಿಕಿತ್ಸೆಗೆ ಸ್ಪಂದಿಸದೆ ಶುಭಂ ಮೃತಪಟ್ಟಿದ್ದಾನೆ ಎಂದು ಘೋಷಿಸಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಕುಟುಂಬಸ್ಥರ ಆಕ್ರಂದನ: ಓದಿನಲ್ಲಿ ಮುಂದಿದ್ದ ಮಗ ಕೇವಲ ಟಿವಿ ನೋಡಬೇಡ ಎಂದಿದ್ದಕ್ಕೆ ಇಂತಹ ನಿರ್ಧಾರ ಕೈಗೊಂಡಿರುವುದು ಪೋಷಕರನ್ನು ಆಘಾತಕ್ಕೀಡು ಮಾಡಿದೆ. ಆಸ್ಪತ್ರೆಯ ಆವರಣದಲ್ಲಿ ಪೋಷಕರು ಮತ್ತು ಸಂಬಂಧಿಕರ ರೋದನ ಮುಗಿಲು ಮುಟ್ಟಿದ್ದು,

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

LEAVE A REPLY

Please enter your comment!
Please enter your name here

Most Popular