ALERT : ಮದುವೆಗೂ ಮುನ್ನ ‘ಸ್ಮೈಲ್ ಸರ್ಜರಿ’ ಮಾಡಿಸಲು ಹೋಗಿ ದುರಂತ ; 28 ವರ್ಷದ ಯುವಕ ಸಾವು

ನವದೆಹಲಿ : 28 ವರ್ಷದ ಯುವಕನೊಬ್ಬ ತನ್ನ ಮದುವೆಗೆ ಸ್ಮೈಲ್ ಸರ್ಜರಿ’ ಮಾಡಿಸಿಕೊಳ್ಳಲು ಹೋಗಿ ಮೃತಪಟ್ಟ ಘಟನೆ ಹೈದರಾಬಾದ್ ನಲ್ಲಿ ನಡೆದಿದೆ.

ಮದುವೆ ಫಿಕ್ಸ್ ಆಗಿದೆ ಎಂದು ತನ್ನ ನಗುವನ್ನು ಇನ್ನಷ್ಟು ಹೆಚ್ಚಿಸಲು ದಂತ ಶಸ್ತ್ರಚಿಕಿತ್ಸೆಗೆ ಒಳಗಾಗುವಾಗ ಸಾವನ್ನಪ್ಪಿದ್ದಾನೆ. 28 ವರ್ಷದ ವ್ಯಕ್ತಿಯನ್ನು ಲಕ್ಷ್ಮಿ ನಾರಾಯಣ ವಿಂಜಮ್ ಎಂದು ಗುರುತಿಸಲಾಗಿದ್ದು, ಫೆಬ್ರವರಿ 16 ರಂದು ಹೈದರಾಬಾದ್ ಎಫ್ಎಂಎಸ್ ಇಂಟರ್ನ್ಯಾಷನಲ್ ಡೆಂಟಲ್ ಕ್ಲಿನಿಕ್ನಲ್ಲಿ ‘ಸ್ಮೈಲ್ ಡಿಸೈನಿಂಗ್’ ಗೆ ಒಳಗಾಗಿದ್ದರು ಎಂದು ವರದಿಗಳು ತಿಳಿಸಿವೆ.

ವರದಿಗಳ ಪ್ರಕಾರ ಮಿತಿಮೀರಿದ ಅರಿವಳಿಕೆಯ ಸೇವನೆಯಿಂದ ವಿಂಜಮ್ ಸಾವನ್ನಪ್ಪಿದ್ದಾರೆ ಎಂದು ಸಂತ್ರಸ್ತೆಯ ತಂದೆ ಆರೋಪಿಸಿದ್ದಾರೆ. ಅರಿವಳಿಕೆ ನೀಡಿದ ವೇಳೆ ಆತ ಪ್ರಜ್ಞೆ ತಪ್ಪಿ ಬಿದ್ದನು , ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ವೈದ್ಯರು ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಿದರು. ಹೆಚ್ಚುವರಿ ಪ್ರಮಾಣದ ಅರಿವಳಿಕೆ ಡೋಸ್ ನೀಡಿದ ದಂತವೈದ್ಯರ ನಿರ್ಲಕ್ಷ್ಯವೇ ವಿಂಜಮ್ ಸಾವಿಗೆ ಕಾರಣವಾಯಿತು ಎಂದು ಕುಟುಂಬ ಆರೋಪಿಸಿದೆ.

Share This Article

Latest News

ಇದೇ ಅವಧಿಯಲ್ಲಿ ಮುಖ್ಯಮಂತ್ರಿಯಾಗಲಿದ್ದಾರಾ ಡಿ.ಕೆ. ಶಿವಕುಮಾರ್‌ ?

View Results

Loading ... Loading ...

Most Read