HomeEntertainment'ಕೃಷ್ಣಂ ಪ್ರಣಯ ಸಖಿ' ಚಿತ್ರದ ಲಿರಿಕಲ್ ಹಾಡು ರಿಲೀಸ್

‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಲಿರಿಕಲ್ ಹಾಡು ರಿಲೀಸ್

ಶ್ರೀನಿವಾಸ್ ರಾಜು ನಿರ್ದೇಶನದ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ‘ಕೃಷ್ಣಂ ಪ್ರಣಯ ಸಖಿ’ ಚಿತ್ರದ ಲಿರಿಕಲ್ ಹಾಡು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದೆ. ‘ಚಿನ್ನಮ್ಮ ಚಿನ್ನಮ್ಮ’ ಎಂಬ ಹಾಡಿಗೆ ಕೈಲಾಶ್ ಕೇರ್ ಹಾಗೂ ಇಂದೂ ನಾಗರಾಜ್ ಧ್ವನಿಯಾಗಿದ್ದು, ಕವಿರಾಜ್ ಅವರ ಸಾಹಿತ್ಯವಿದೆ. ಅರ್ಜುನ್ ಜನ್ಯ ಸಂಗೀತ ಸಂಯೋಜನೆ ನೀಡಿದ್ದಾರೆ.

ಈ ಸಿನಿಮಾದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ಮತ್ತು ಮಾಳವಿಕಾ ನಾಯರ್ ಮುಖ್ಯ ಭೂಮಿಕೆಯಲ್ಲಿದ್ದು, ತ್ರಿಶೂಲ್ ಎಂಟರ್ಟೈನ್ಮೆಂಟ್ಸ್ ಬ್ಯಾನರ್ ನಡಿ ಪ್ರಶಾಂತ್ ಜಿ ರುದ್ರಪ್ಪ ಬಂಡವಾಳ ಹೂಡಿದ್ದಾರೆ. ಶಿವ ಸಾಯಿ ಹಾಗೂ ವಿಜಯ್ ಈಶ್ವರ್ ಸಂಭಾಷಣೆ,  ವೆಂಕಟ್ ರಾಮಪ್ರಸಾದ್ ಛಾಯಾಗ್ರಹಣ, ಕೆ ಎಂ ಪ್ರಕಾಶ್ ಸಂಕಲನವಿದೆ.

For Latest News Updates, Join Our Whatsapp Community🚩
RELATED ARTICLES

Most Popular