HomeKarnataka'BREAKING : 'ರೇಣುಕಾಸ್ವಾಮಿ ಕೊಲೆ' ಕೇಸ್ ಮುಚ್ಚಿ ಹಾಕಲು 30 ಲಕ್ಷ ಕೊಟ್ಟಿದ್ದೆ : ಪೊಲೀಸ್...

‘BREAKING : ‘ರೇಣುಕಾಸ್ವಾಮಿ ಕೊಲೆ’ ಕೇಸ್ ಮುಚ್ಚಿ ಹಾಕಲು 30 ಲಕ್ಷ ಕೊಟ್ಟಿದ್ದೆ : ಪೊಲೀಸ್ ವಿಚಾರಣೆಯಲ್ಲಿ ನಟ ದರ್ಶನ್ ಸ್ವಇಚ್ಚಾ ಹೇಳಿಕೆ..?

ಬೆಂಗಳೂರು : ರೇಣುಕಾಸ್ವಾಮಿ ಕೊಲೆ ಕೇಸ್ ಮುಚ್ಚಿ ಹಾಕೋಕೆ 30 ಲಕ್ಷ ಕೊಟ್ಟಿದ್ದೆ , ಕೊಲೆ ಪ್ರಕರಣದಲ್ಲಿ ನಾನು ಭಾಗಿಯಾಗಿದ್ದೇನೆ ಎಂದು ನಟ ದರ್ಶನ್ ಸ್ವಇಚ್ಚೆಯಿಂದ ಹೇಳಿಕೆ ನೀಡಿದ್ದಾರೆ ಎಂದು ಹೇಳಲಾಗಿದೆ.

ಪೊಲೀಸ್ ವಿಚಾರಣೆಯಲ್ಲಿ ಆರೋಪಿ, ನಟ ದರ್ಶನ್ ಹೇಳಿಕೆ ನೀಡಿದ್ದು, ಇದನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ತನ್ನ ಹೆಸರು ಎಲ್ಲಿಯೂ ಬಾರದಂತೆ ನೋಡಿಕೊಳ್ಳಲು 30 ಲಕ್ಷ ಕೊಟ್ಟಿದ್ದೆ  ಎಂದು ದರ್ಶನ್ ಹೇಳಿದ್ದಾರೆ ಎನ್ನಲಾಗಿದೆ.

ಶವ ಸಾಗಿಸುವವರಿಗೆ, ಪೊಲೀಸರು ಮತ್ತು ಲಾಯರ್ ಗಳಿಗೆ ತಗುಲುವ ವೆಚ್ಚವನ್ನು ಭರಿಸಲು ಪ್ರದೂಶ್ ಗೆ 30 ಲಕ್ಷ ನೀಡಿರುವುದಾಗಿ ದರ್ಶನ್ ಸ್ವಇಚ್ಚೆಯಿಂದ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಿನ್ನೆ ಮೈಸೂರಿಗೆ ನಟ ದರ್ಶನ್ ಅವರನ್ನು ಕರೆದೊಯ್ದು ಸ್ಥಳ ಮಹಜರು ನಡೆಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದಿನದಿಂದ ದಿನಕ್ಕೆ ಸ್ಪೋಟಕ ಮಾಹಿತಿಗಳು ಲಭ್ಯವಾಗುತ್ತಿದೆ.

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular