HomeEntertainment'ಸಂಭವಾಮಿ ಯುಗೇ ಯುಗೇ' ಚಿತ್ರದ ಟ್ರೈಲರ್ ರಿಲೀಸ್

‘ಸಂಭವಾಮಿ ಯುಗೇ ಯುಗೇ’ ಚಿತ್ರದ ಟ್ರೈಲರ್ ರಿಲೀಸ್

ಚೇತನ್ ಚಂದ್ರಶೇಖರ್ ಶೆಟ್ಟಿ ನಿರ್ದೇಶನದ ಜೈ ಶೆಟ್ಟಿ ಅಭಿನಯದ ಬಹುನಿರೀಕ್ಷಿತ ಸಂಭವಾಮಿ ಯುಗೇ ಯುಗೇ ಚಿತ್ರದ ಟ್ರೈಲರನ್ನು ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆ ಮಾಡಲಾಗಿದೆ. ಈ ಟ್ರೈಲರ್ ರಿಲೀಸ್ ಆದ ಕೆಲವೇ ಗಂಟೆಗಳಲ್ಲಿ ಸಾಕಷ್ಟು ವೀಕ್ಷಣೆ ಪಡೆದುಕೊಳ್ಳುವ ಮೂಲಕ ನೋಡುಗರ ಗಮನ ಸೆಳೆದಿದೆ.

ಈ ಚಿತ್ರವನ್ನು ರಾಜಲಕ್ಷ್ಮಿ ಎಂಟರ್ಟೈನ್ಮೆಂಟ್ ಬ್ಯಾನರ್ ನಲ್ಲಿ ಶ್ರೀಮತಿ ಪ್ರತಿಭಾ ನಿರ್ಮಾಣ ಮಾಡಿದ್ದು, ಜೈ ಶೆಟ್ಟಿ ಸೇರಿದಂತೆ ಪ್ರಮೋದ್ ಶೆಟ್ಟಿ, ಸುಧಾ ರಾಣಿ, ಭವ್ಯ, ಅಶೋಕ್ ಕುಮಾರ್, ನಿಶಾ ರಜಪೂತ್, ಮಧುರಾ ಗೌಡ, ಅಭಯ್ ಪುನಿತ್ ಬಣ್ಣ ಹಚ್ಚಿದ್ದಾರೆ. ಪುರಾಣ್ ಶೆಟ್ಟಿಗಾರ್ ಸಂಗೀತ ಸಂಯೋಜನೆ ನೀಡಿದ್ದು, ರವೀಶ್ ಆತ್ಮರಾಮ್ ಸಂಕಲನ, ನರಸಿಂಹ ಸಿ ಸಾಹಸ ನಿರ್ದೇಶನ ರಾಜು ಹೆಮ್ಮಿಗೆಪುರ ಛಾಯಾಗ್ರಹಣವಿದೆ.

For Latest News Updates, Join Our Whatsapp Community🚩
RELATED ARTICLES

Most Popular