HomeEntertainmentಇಂದು 'ದೇಸಾಯಿ' ಚಿತ್ರದಿಂದ ಬರಲಿದೆ ಮತ್ತೊಂದು ಗೀತೆ

ಇಂದು ‘ದೇಸಾಯಿ’ ಚಿತ್ರದಿಂದ ಬರಲಿದೆ ಮತ್ತೊಂದು ಗೀತೆ

ನಾಗಿ ರೆಡ್ಡಿ ಬಡ ನಿರ್ದೇಶನದ ಪ್ರವೀಣ್ ಕುಮಾರ್ ಅಭಿನಯದ ಬಹು ನಿರೀಕ್ಷಿತ ದೇಸಾಯಿ ಚಿತ್ರದ ಮೆಲೋಡಿ ಹಾಡೊಂದು ಇತ್ತೀಚಿಗಷ್ಟೇ youtube ನಲ್ಲಿ ಭರ್ಜರಿ ಸೌಂಡ್ ಮಾಡಿದ್ದು, ಇದೀಗ ಮತ್ತೊಂದು ಹಾಡು ಇಂದು ಆನಂದ್ ಆಡಿಯೋ ಯೂಟ್ಯೂಬ್ ಚಾನೆಲ್ ನಲ್ಲಿ ರಿಲೀಸ್ ಆಗಲಿದೆ.

ಈಗಾಗಲೇ ತನ್ನ ಹಾಡುಗಳ ಮೂಲಕವೇ ಸಾಕಷ್ಟು ನಿರೀಕ್ಷೆ ಮೂಡಿಸಿರುವ ಈ ಚಿತ್ರವನ್ನು ವೀರಭದ್ರೇಶ್ವರ ಕ್ರಿಯೇಟಿವ್ ಫಿಲಂಸ್ ಬ್ಯಾನರ್ ನಲ್ಲಿ ಮಹಂತೇಶ್ ವಿ ಚೋಳಚಗುಡ್ಡ ನಿರ್ಮಿಸಿದ್ದು, ಪ್ರವೀಣ್ ಕುಮಾರ್ ಗೆ ಜೋಡಿಯಾಗಿ ರಾಧ್ಯ ಅಭಿನಯಿಸಿದ್ದಾರೆ. ಇನ್ನುಳಿದಂತೆ  ಮಂಜುನಾಥ್ ಹೆಗಡೆ, ಸೃಷ್ಟಿ, ಹರಿಣಿ, ಪ್ರಶಾಂತ್, ಒರಟ ಪ್ರಶಾಂತ್, ಚೆಲುವರಾಜು, ಮಧುಸೂದನ್ ರಾವ್, ಕಲ್ಯಾಣಿ,  ತೆರೆ ಹಂಚಿಕೊಂಡಿದ್ದಾರೆ. ಪಿ.ಕೆ.ಹೆಚ್ ದಾಸ್ ಅವರ ಛಾಯಾಗ್ರಾಹಣವಿದ್ದು, ಸಾಯ್ ಕಾರ್ತಿಕ್ ಮ್ಯೂಸಿಕ್ ಕಂಪೋಸ್ ಮಾಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular