HomeKarnatakaಇವರ ಮಗ ವಿದೇಶಕ್ಕೆ ಹೋದಾಗ ದುರ್ಘಟನೆ ನಡೀತಲ್ಲಾ? ಇವರಿಗೆ ಗೊತ್ತಿದ್ದೇ ಆತ ಹೋಗಿದ್ನಾ? ಪ್ರಕರಣದ ತನಿಖೆ...

ಇವರ ಮಗ ವಿದೇಶಕ್ಕೆ ಹೋದಾಗ ದುರ್ಘಟನೆ ನಡೀತಲ್ಲಾ? ಇವರಿಗೆ ಗೊತ್ತಿದ್ದೇ ಆತ ಹೋಗಿದ್ನಾ? ಪ್ರಕರಣದ ತನಿಖೆ ಯಾಕೆ ಮಾಡಲಿಲ್ಲ? ಸಿಎಂ ಸಿದ್ದರಾಮಯ್ಯಗೆ HDK ತಿರುಗೇಟು

ಬೆಂಗಳೂರು: ಮನೆಯವರಿಗೆ ಹೇಳದೇನೆ ಪ್ರಜ್ವಲ್ ರೇವಣ್ಣ ವಿದೇಶಕ್ಕೆ ಹೋದ್ನಾ? ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆಗೆ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಇವರ ಮಗ ವಿದೇಶಕ್ಕೆ ಹೋದಾಗ ದುರ್ಘಟನೆ ನಡೀತಲ್ಲಾ? ಆಗ ಇವರ ಮಗ ಇವರಿಗೆ ಹೇಳಿಯೇ ಹೋಗಿದ್ನಾ? ಎಂದು ಪ್ರಶ್ನಿಸಿದ್ದಾರೆ.

ಪ್ರಜ್ವಲ್ ರೇವಣ್ಣ ಮನೆಯವರಿಗೆ ಹೇಳದೇ ವಿದೇಶಕ್ಕೆ ಹೋದ್ನಾ? ಎಲ್ಲವೂ ಪ್ರಜ್ವಲ್ ಕುಟುಂಬದವರಿಗೆ ಗೊತ್ತು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದರು. ಇದೀಗ ಈ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಕುಮಾರಸ್ವಾಮಿ, ರಾಕೇಶ್ ಸಿದ್ದರಾಮಯ್ಯ ವಿಚಾರವನ್ನು ಪರೋಕ್ಷವಾಗಿ ಪ್ರಸ್ತಾಪಿಸಿ ತಿರುಗೇಟು ನೀಡಿದ್ದಾರೆ.

ಇವರ ಮಗ ವಿದೇಶಕ್ಕೆ ಹೋದಾಗ ದುರ್ಘಟನೆ ನಡೀತಲ್ಲಾ? ಸಿಎಂ ಪುತ್ರ ಯಾವ ಕಾರ್ಯಕ್ರಮಕ್ಕೆ ಹೋಗಿದ್ರು? ಮಗನಿಗೆ ಪರ್ಮಿಷನ್ ಕೊಟ್ಟು ಇವರೇ ಕಳುಹಿಸಿದ್ರಾ? ಇವರಿಗೆ ಗೊತ್ತಿದ್ದೇ ಆತ ಹೋಗಿದ್ನಾ? ಇವರ ಮಗನ ಜೊತೆ ಯಾರು ಯಾರು ಹೋಗಿದ್ರು? ಅಲ್ಲಿ ನಡೆದ ಘಟನೆ ಬಗ್ಗೆ ಯಾಕೆ ತನಿಖೆ ಮಾಡಲಿಲ್ಲ? ತನಿಖೆ ಮಾಡದೇ ವಿಷಯ ಯಾಕೆ ಮುಚ್ಚಿಟ್ಟರು? ಎಂದು ಕೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಬೆಳೆದ ಮಕ್ಕಳು ಪ್ರತಿಯೊಂದನ್ನು ತಂದೆ-ತಾಯಿ ಕೇಳಿ ಮಾಡ್ತಾರಾ? ಮನೆಯಲ್ಲಿ ಹೇಳಿ ಹೋಗ್ತಾರಾ? ಅನಗತ್ಯವಾಗಿ ಸಿಎಂ ಸಿದ್ದರಾಮಯ್ಯ ಆರೋಪಗಳನ್ನು ಮಾಡುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ನಮ್ಮ ಸಂಪರ್ಕದಲ್ಲಿಯೂ ಇಲ್ಲ ಎಂದು ಹೇಳಿದರು.

For Latest News Updates, Join Our Whatsapp Community🚩
RELATED ARTICLES

Most Popular