HomeIndiaತನ್ನ ಕೆಲಸವನ್ನು ಮಾಡಲು ಆ ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿ ಕೊಟ್ಟಿದ್ದಾರೆ; ಪ್ರಧಾನಿ ಮೋದಿಯವರ ಮಾತಿನ...

ತನ್ನ ಕೆಲಸವನ್ನು ಮಾಡಲು ಆ ದೇವರೇ ನನ್ನನ್ನು ಇಲ್ಲಿಗೆ ಕಳುಹಿಸಿ ಕೊಟ್ಟಿದ್ದಾರೆ; ಪ್ರಧಾನಿ ಮೋದಿಯವರ ಮಾತಿನ ವಿಡಿಯೋ ವೈರಲ್

ನನ್ನ ಜನ್ಮ ಜೈವಿಕವಾಗಿದೆ ಎಂದು ಭಾವಿಸಿಲ್ಲ. ಬದಲಾಗಿ ಒಂದು ಉದ್ದೇಶವನ್ನು ಸಾಧಿಸಲು, ಧ್ಯೇಯವನ್ನು ಪೂರೈಸಲು ದೇವರೇ ನನ್ನನ್ನು ಕಳುಹಿಸಿಕೊಟ್ಟಿದ್ದಾರೆ ಎಂಬ ನಂಬಿಕೆ ನನಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಸಂದರ್ಶನವೊಂದರಲ್ಲಿ ಹೇಳಿರುವ ಪ್ರಧಾನಿಯ ಈ ಮಾತು ಇತ್ತೀಚಿಗೆ ಭಾರೀ ವೈರಲ್ ಆಗ್ತಿದೆ.

ನ್ಯೂಸ್ 18 ಇಂಡಿಯಾದ ರುಬಿಕಾ ಲಿಯಾಖತ್ ಅವರೊಂದಿಗಿನ ಸಂದರ್ಶನದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಈ ಹೇಳಿಕೆ ವ್ಯಾಪಕವಾಗಿ ಹರಡ್ತಿದೆ. “ನಾನು ಜೈವಿಕವಾಗಿ ಹುಟ್ಟಿಲ್ಲ ಎಂದು ನನಗೆ ಮನವರಿಕೆಯಾಗಿದೆ, ದೇವರು ತನ್ನ ಕೆಲಸವನ್ನು ಮಾಡಲು ನನ್ನನ್ನು ಕಳುಹಿಸಿದ್ದರಿಂದ ನಾನು ಈ ಶಕ್ತಿಯನ್ನು ಪಡೆಯುತ್ತಿದ್ದೇನೆ” ಎಂದು ಮೋದಿ ಹೇಳಿದ್ದಾರೆ.

ಸತತವಾಗಿ ಕೆಲಸ ಮಾಡುತ್ತಿದ್ದರೂ ನಿಮ್ಮಲ್ಲಿ ಬಳಲಿಕೆ ಕಾಣುವುದಿಲ್ಲ, ನೀನು ಸುಸ್ತಾಗದಿರುವುದರ ಹಿಂದಿನ ಕಾರಣವೇನು ಎಂದು ಕೇಳಿದ ಪ್ರಶ್ನೆಗೆ ಪ್ರಧಾನಿ ಈ ರೀತಿ ಉತ್ತರಿಸಿದ್ದಾರೆ. ನರೇಂದ್ರ ಮೋದಿಯವರ ಸಂದರ್ಶನದ ವಿಡಿಯೋ ವೈರಲ್ ಆಗಿದ್ದು, ಸಾಮಾಜಿಕ ಮಾಧ್ಯಮ ವೇದಿಕೆಗಳಲ್ಲಿ ಚರ್ಚೆಯ ಕೋಲಾಹಲಕ್ಕೆ ಕಾರಣವಾಗಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular