HomeKarnatakaBIG NEWS : 'ಬೆಂಗಳೂರು ರೇವ್ ಪಾರ್ಟಿ’ ಕುರಿತು ನಟಿ ಆಶಿರಾಯ್ ಸ್ಪೋಟಕ ಹೇಳಿಕೆ

BIG NEWS : ‘ಬೆಂಗಳೂರು ರೇವ್ ಪಾರ್ಟಿ’ ಕುರಿತು ನಟಿ ಆಶಿರಾಯ್ ಸ್ಪೋಟಕ ಹೇಳಿಕೆ

ಬೆಂಗಳೂರು : ಬೆಂಗಳೂರಿನಲ್ಲಿ ‘ರೇವ್ ಪಾರ್ಟಿ’ ಮೇಲೆ ನಡೆದ ದಾಳಿ ಬಗ್ಗೆ ಸಿಸಿಸಿ ಪೊಲೀಸರು ತನಿಖೆ ನಡೆಸುತ್ತಿದ್ದು, ಪಾರ್ಟಿಯಲ್ಲಿ ನಟಿ ಹೇಮಾ ಮತ್ತು ಶ್ರೀಕಾಂತ್ ಹೆಸರು ಪ್ರಮುಖವಾಗಿ ಕೇಳಿಬಂದಿತ್ತು.

ಇದೀಗ ಆ ಪಾರ್ಟಿಯಲ್ಲಿ ಆಶಿರಾಯ್ ಕೂಡ ಇದ್ದರು ಎಂಬುದು ಬೆಳಕಿಗೆ ಬಂದಿದೆ. ಈ ಬಗ್ಗೆ ವಿಡಿಯೋ ಮೂಲಕ ಪ್ರತಿಕ್ರಿಯೆ ನೀಡಿದ ಆಶಿರಾಯ್ ‘ ಅದೊಂದು ಬರ್ತ್ ಡೇ ಪಾಟಿಯಾಗಿತ್ತು, ಬರ್ತ್ ಡೇ ಪಾರ್ಟಿ ಅಂತ ನಾನು ಒಳಗೆ ಹೋದೆ, ಅಲ್ಲಿ ಏನು ನಡೆದಿದೆ ಎಂಬುದು ನನಗೆ ಗೊತ್ತಿಲ್ಲ, ನಾನು ಇಂಡಸ್ಟ್ರಿಯಲ್ಲಿ ಬಹಳ ಕಷ್ಟಪಟ್ಟು ಬೆಳೆಯುತ್ತಿರುವು ಹುಡುಗಿ, ನಾನು ಯಾವುದೇ ತಪ್ಪು ಮಾಡಿಲ್ಲ. ದಯವಿಟ್ಟು ನನಗೆ ಸಹಾಯ ಮಾಡಿ ಎಂದು ವಿಡಿಯೋ ಮೂಲಕ ಹೇಳಿಕೊಂಡಿದ್ದಾರೆ.

. ಅಲ್ಲಿ ನಡೆದಿದ್ದು ಬರ್ತ್ ಡೇ ಪಾರ್ಟಿ ಅಲ್ಲ ಡ್ರಗ್ಸ್, ಸೆಕ್ಸ್ ಪಾರ್ಟಿ ಎಂದು ಹೇಳಲಾಗಿದೆ.ಬರ್ತಡೆ ಸೆಲೆಬ್ರೇಷನ್ ಹೆಸರಲ್ಲಿ ಪಾರ್ಟಿ ನಡೆಸಲಾಗುತ್ತಿತ್ತು. ಇಲ್ಲಿ ಡ್ರಗ್ಸ್ ಮಾತ್ರ ಅಲ್ಲ ಸೆಕ್ಸ್ ಸಹ ಇತ್ತು ಎಂಬ ಅಚ್ಚರಿ ಮಾಹಿತಿ ತಿಳಿದುಬಂದಿದೆ. ಡ್ರಗ್ಸ್ ಜಾಲದ ಜೊತೆಗೆ ಸೆಕ್ಸ್ ಜಾಲದ ಬಗ್ಗೆ ಸಿಸಿಬಿಗೆ ಕೆಲ ಮಾಹಿತಿಗಳು ಲಭ್ಯವಾಗಿವೆ. ಈ ಹಿನ್ನೆಲೆ ಹಲವರನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ಹಲವರು ಎಸ್ಕೇಪ್ ಆಗಿದ್ದು, ಪೊಲೀಸರು ಬಲೆ ಬೀಸಿದ್ದಾರೆ. ಪಾರ್ಟಿಯಲ್ಲಿ ಒಟ್ಟು 250ಕ್ಕೂ ಹೆಚ್ಚು ಜನರು ಭಾಗಿಯಾಗಿದ್ದರು ಎಂಬ ಶಂಕೆ ವ್ಯಕ್ತವಾಗಿದ್ದು ಹಲವಾರು ಜನರು ಶನಿವಾರ ಪಾರ್ಟಿಗೆ ಬಂದು ವಾಪಸ್ಸು ಹೋಗಿದ್ದಾರೆ.ಪ್ರಕರಣದ ಬಗ್ಗೆ ಸಿಸಿಬಿ ಪೊಲೀಸರಿಗೆ ಕಮಿಷನರ್ ಬಿ ದಯಾನಂದ ಖಡಕ್ ಸೂಚನೆ ನೀಡಿದ್ದು, ಪ್ರಕರಣ ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸಿ ಎಂದು ಸೂಚನೆ ನೀಡಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

 

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular