HomeEntertainmentಅಭಿಮನ್ಯು ಕಾಶಿನಾಥ್ ಹುಟ್ಟುಹಬ್ಬಕ್ಕೆ ಶುಭ ಕೋರಿದ 'ಎಲ್ಲಿಗೆ ಪಯಣ ಯಾವುದೋ ದಾರಿ' ಚಿತ್ರತಂಡ

ಅಭಿಮನ್ಯು ಕಾಶಿನಾಥ್ ಹುಟ್ಟುಹಬ್ಬಕ್ಕೆ ಶುಭ ಕೋರಿದ ‘ಎಲ್ಲಿಗೆ ಪಯಣ ಯಾವುದೋ ದಾರಿ’ ಚಿತ್ರತಂಡ

ಇಂದು ಖ್ಯಾತ ಹಿರಿಯ ನಟ ಕಾಶಿನಾಥ್  ಪುತ್ರ ಅಭಿಮನ್ಯು  ಅವರ ಹುಟ್ಟುಹಬ್ಬವಾಗಿದ್ದು,ಸಾಮಾಜಿಕ ಜಾಲತಾಣದಲ್ಲಿ ಅವರ ಅಭಿಮಾನಿಗಳಿಂದ, ಸಿನಿ ತಾರೆಯರಿಂದ ಶುಭಾಶಯಗಳ ಮಹಾಪೂರವೇ ಹರಿದು ಬಂದಿದೆ. ”ಎಲ್ಲಿಗೆ ಪಯಣ ಯಾವುದೋ ದಾರಿ”  ಚಿತ್ರತಂಡ ಅಭಿಮನ್ಯು  ಅವರ ಪೋಸ್ಟರ್  ಹಂಚಿಕೊಳ್ಳುವ ಮೂಲಕ  ಹುಟ್ಟು ಹಬ್ಬದ ಶುಭಾಶಯ ತಿಳಿಸಿದೆ.

ಕಿರಣ್ ಸೂರ್ಯ ರಚಿಸಿ ನಿರ್ದೇಶಿಸಿರುವ ಈ ಚಿತ್ರದಲ್ಲಿ ಅಭಿಮನ್ಯು ಕಾಶಿನಾಥ್ ಗೆ ಜೋಡಿಯಾಗಿ ಸ್ಪೂರ್ತಿ ಉದಿಮನೆ ಮತ್ತು ವಿಜಯ ಶ್ರೀ ಕಲ್ಬುರ್ಗಿ ಅಭಿನಯಿಸಿದ್ದು, ರಾಜ ಬಾಲ್ವಾಡಿ, ಶೋಬಣ್ಣ, ಪ್ರದೀಪ್, ರಮೇಶ್ ನಾಯಕ್ ಮತ್ತು ರಿನಿ ಉಳಿದ ಪಾತ್ರ ವರ್ಗದಲ್ಲಿದ್ದಾರೆ.

ಸುದರ್ಶನ ಆರ್ಟ್ಸ್ ಮತ್ತು ವೆಂಚರ್ಸ್ ಬ್ಯಾನರ್ ನಲ್ಲಿ ಜತಿನ್ ಪಾಟೀಲ್ ನಿರ್ಮಾಣ ಮಾಡಿದ್ದಾರೆ. ಅನಂತ್ ಕಾಮತ್  ಮ್ಯೂಸಿಕ್ ಕಂಪೋಸ್ ಮಾಡಿದ್ದು, ಗಣೇಶ್ ನಿರ್ಚಲ್ ಸಂಕಲನ, ಸತ್ಯ ರಾಮ್ ಛಾಯಾಗ್ರಹಣ, ರಮೇಶ್ ನಾಯಕ್ ಸಂಭಾಷಣೆ ಬರೆದಿದ್ದಾರೆ. ಚಂದ್ರು ಅವರ ಸಾಹಸ ನಿರ್ದೇಶನವಿದೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

 

For Latest News Updates, Join Our Whatsapp Community🚩
RELATED ARTICLES

Most Popular