HomeKarnatakaBIG NEWS: ಲೋಕಸಭೆ ಚುನಾವಣೆ ಬಳಿಕ ಶಿಂಧೆ ಸರ್ಕಾರವೇ ಪತನವಾಗಲಿದೆ; ಮಹಾ ಸಿಎಂ ಗೆ ಡಿಸಿಎಂ...

BIG NEWS: ಲೋಕಸಭೆ ಚುನಾವಣೆ ಬಳಿಕ ಶಿಂಧೆ ಸರ್ಕಾರವೇ ಪತನವಾಗಲಿದೆ; ಮಹಾ ಸಿಎಂ ಗೆ ಡಿಸಿಎಂ ತಿರುಗೇಟು

ಬೆಂಗಳೂರು: ‘ಲೋಕಸಭಾ ಚುನಾವಣೆ ಬಳಿಕ ಕರ್ನಾಟಕ ಸರ್ಕಾರ ಪತನವಾಗಲಿದೆ. ನಾಥ್ ಮಾದರಿ ಆಪರೇಷನ್ ನಡೆಯಲಿದೆ’ ಎಂಬ ಮಹಾರಾಷ್ಟ್ರ ಸಿಎಂ ಏಕನಾಥ್ ಶಿಂಧೆ ಹೇಳಿಕೆಗೆ ಡಿಸಿಎಂ ಡಿ.ಕೆ.ಶಿವಕುಮಾರ್ ಖಡಕ್ ತಿರುಗೇಟು ನೀಡಿದ್ದಾರೆ.

ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಡಿಸಿಎಂ ಡಿ.ಕೆ.ಶಿವಕುಮಾರ್, ಲೋಕಸಭಾ ಚುನಾವಣೆ ಬಳಿಕ ಶಿಂಧೆ ಸರ್ಕಾರವೇ ಬೀಳಲಿದೆ. ಅವರ ಸರ್ಕಾರ ಇರುವುದೇ ಅನುಮಾನವಾಗಿದೆ ಎಂದು ಟಾಂಗ್ ನೀಡಿದರು.

ಉದ್ಧವ್ ಠಾಕ್ರೆ ಬಗ್ಗೆ ಪ್ರಧಾನಿ ಮೋದಿಯವರು ಯಾಕೆ ಮಾತನಾಡಿದರು? ಎಲ್ಲರೂ ಕೂಡ ಅವರ ಪಕ್ಷಕ್ಕೆ ಹೋಗುತ್ತಾರೆ. ಮಹಾ ಸರ್ಕಾರದ ಒರಿಜಿನಲ್ ಶಿವಸೇನಾ ನಾಯಕರು ಮರಳಿ ಬರುತ್ತಾರೆ ಎಂದು ಹೇಳಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
RELATED ARTICLES

Most Popular