HomeEntertainmentಚುಂಬನ ದೃಶ್ಯದಿಂದಾಗಿ ಚಿತ್ರಕ್ಕೇ ಹಿಡಿದಿತ್ತು ಗ್ರಹಣ, 10 ವರ್ಷಗಳ ಬಳಿಕ ಶಾರುಖ್‌ ಅಭಿನಯದ ಸಿನೆಮಾ ರಿಲೀಸ್‌....!

ಚುಂಬನ ದೃಶ್ಯದಿಂದಾಗಿ ಚಿತ್ರಕ್ಕೇ ಹಿಡಿದಿತ್ತು ಗ್ರಹಣ, 10 ವರ್ಷಗಳ ಬಳಿಕ ಶಾರುಖ್‌ ಅಭಿನಯದ ಸಿನೆಮಾ ರಿಲೀಸ್‌….!

ಶಾರುಖ್ ಖಾನ್ ಬಾಲಿವುಡ್‌ನ ಬಾದ್‌ಶಾ ಎಂದೇ ಫೇಮಸ್‌. ಚಿತ್ರರಂಗಕ್ಕೆ ಬಂದು 30 ವರ್ಷಗಳಾಗಿವೆ. ಈ 3 ದಶಕಗಳಲ್ಲಿ ಅನೇಕ ಸೂಪರ್‌ ಹಿಟ್‌ ಚಿತ್ರಗಳನ್ನು ಕೊಟ್ಟಿದ್ದಾರೆ ಕಿಂಗ್‌ ಖಾನ್‌. ಅವರಿಗೆ ಜಗತ್ತಿನಾದ್ಯಂತ ಕೋಟ್ಯಾಂತರ ಅಭಿಮಾನಿಗಳಿದ್ದಾರೆ.

ಆದರೆ ಶಾರುಖ್‌ರ ಅತ್ಯಂತ ಕೆಟ್ಟ ಚಿತ್ರದ ಬಗ್ಗೆ ಅನೇಕರಿಗೆ ತಿಳಿದಿಲ್ಲ ಈ ಸಿನೆಮಾ 10 ವರ್ಷಗಳ ಕಾಲ ಬಿಡುಗಡೆಗೆ ಕಾಯುತ್ತಿತ್ತು. 1994ರಲ್ಲಿ ಈ ಚಿತ್ರ ಸಿದ್ಧವಾಗಿತ್ತು. ದಶಕದ ನಂತರ 2004 ರಲ್ಲಿ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಯಿತು.

ಈ ಸಿನೆಮಾದ ಹೆಸರು ‘ಯೇ ಲಮ್ಹೆ ಜುದಾಯಿ ಕೆ’. 10 ರಲ್ಲಿ ಕೇವಲ 3.1 ರೇಟಿಂಗ್ ಪಡೆದ ಚಿತ್ರವಿದು. ಬೀರೇಂದ್ರ ನಾಥ್ ತಿವಾರಿ ಈ ಚಿತ್ರವನ್ನು ನಿರ್ದೇಶಿಸಿದ್ದರು. ಶಾರುಖ್ ಖಾನ್, ರವೀನಾ ಟಂಡನ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಚಿತ್ರದಲ್ಲಿ ಶಾರುಖ್ ಖಾನ್ ಮತ್ತು ರವೀನಾ ಟಂಡನ್ ನಡುವೆ ಚುಂಬನದ ದೃಶ್ಯ ಇರಬೇಕೆಂದು ನಿರ್ದೇಶಕರು ಬಯಸಿದ್ದರು. ಆದರೆ ಶಾರುಖ್‌ ಹಾಗೂ ರವೀನಾಗೆ ಕಿಸ್ಸಿಂಗ್‌ ದೃಶ್ಯದಲ್ಲಿ ನಟಿಸಲು ಇಷ್ಟವಿರಲಿಲ್ಲ. ಈ ಚುಂಬನದ ದೃಶ್ಯಕ್ಕೆ ಸಂಬಂಧಿಸಿದಂತೆ ಭಿನ್ನಾಭಿಪ್ರಾಯ ಮುಂದುವರಿದಿತ್ತು. ಸಾಕಷ್ಟು ಪ್ರಯತ್ನ ಮಾಡಿದರೂ ಶಾರುಖ್ ಖಾನ್ ಒಪ್ಪದಿದ್ದಾಗ ನಿರ್ದೇಶಕರು 2003ರಲ್ಲಿ ಮತ್ತೆ ಸಿನಿಮಾ ಆರಂಭಿಸಿದರು. ಶಾರುಖ್ ಈ ಚಿತ್ರದ ಪ್ರಮೋಶನ್‌ಗೂ ಬರಲಿಲ್ಲ. ಸಾಕಷ್ಟು ಕಸರತ್ತಿನ ಬಳಿಕ 2004ರಲ್ಲಿ ಸಿನೆಮಾ ರಿಲೀಸ್‌ ಆಗಿತ್ತು.

For Latest News Updates, Join Our Whatsapp Community🚩
RELATED ARTICLES

Most Popular