HomeKarnatakaಜಯನಗರದಲ್ಲಿ ಫಾರಂ-7 ದುರ್ಬಳಕೆ ಆರೋಪ: ಐವರ ವಿರುದ್ಧ FIR ದಾಖಲು

ಜಯನಗರದಲ್ಲಿ ಫಾರಂ-7 ದುರ್ಬಳಕೆ ಆರೋಪ: ಐವರ ವಿರುದ್ಧ FIR ದಾಖಲು

ಬೆಂಗಳೂರು: ಬೆಂಗಳೂರಿನ ಜಯನಗರ ವಿಧಾನಸಭಾ ಕ್ಷೇತ್ರದಲ್ಲಿ ಫಾರಂ-7 ದುರ್ಬಳಕೆ ಮಾಡಿ ಮತದಾರರ ಹೆಸರುಗಳನ್ನು ಡಿಲಿಟ್ ಮಾಡಲು ಯತ್ನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಈ ಸಂಬಂಧ ಕೆಪಿಸಿಸಿ ಮಹಿಳಾ ಘಟಕದ ಅಧ್ಯಕ್ಷೆ ಹಾಗೂ ಮಾಜಿ ಶಾಸಕಿ ಸೌಮ್ಯಾ ರೆಡ್ಡಿ ನೀಡಿದ ದೂರಿನ ಆಧಾರದ ಮೇಲೆ ಜಯನಗರ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ.

ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲು ಅಥವಾ ಹೆಸರನ್ನು ಸೇರಿಸುವುದನ್ನು ಆಕ್ಷೇಪಿಸಲು ಇರುವ ಅರ್ಜಿಯಾಗಿರುವ ಫಾರ್ಮ್‌ 7 ನ್ನು ಕ್ಷೇತ್ರದಲ್ಲಿ ವ್ಯಾಪಕವಾಗಿ ಬಳಕೆ ಮಾಡಲಾಗುತ್ತಿದೆ. ಜಯನಗರದಲ್ಲಿ ಒಟ್ಟು 5,698 ಮತದಾರರ ಹೆಸರುಗಳನ್ನ ಪಟ್ಟಿಯಿಂದ ಡಿಲೀಟ್ ಮಾಡಲು ಫಾರಂ-7 ಅರ್ಜಿಗಳನ್ನ ಸಲ್ಲಿಸಿರುವ ಬಗ್ಗೆ ಸೌಮ್ಯಾ ರೆಡ್ಡಿ ಅನುಮಾನ ವ್ಯಕ್ತಪಡಿಸಿದ್ದಾರೆ. ಈ ಅರ್ಜಿಗಳ ಹಿಂದೆ ಉದ್ದೇಶಪೂರ್ವಕವಾಗಿ ಮತದಾರರ ಹೆಸರುಗಳನ್ನ ಅಳಿಸುವ ಪ್ರಯತ್ನ ನಡೆದಿದೆ ಎಂದು ದೂರಿನಲ್ಲಿ ಆರೋಪಿಸಿದ್ದಾರೆ.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

ಅರ್ಜಿಗಳಲ್ಲಿ ಸಿ. ರಮೇಶ್ ಮತ್ತು ರೂಪಾ ಎಂಬುವವರ ಹೆಸರನ್ನ ಬಳಸಲಾಗಿದೆ. ಆದರೆ, ತಮ್ಮ ಯಾವುದೇ ಮಾಹಿತಿ ಅಥವಾ ಒಪ್ಪಿಗೆಯಿಲ್ಲದೆ ತಮ್ಮ ವೈಯಕ್ತಿಕ ಮಾಹಿತಿಯನ್ನ ನಕಲು ಮಾಡಿ ಫಾರಂ-7 ಅರ್ಜಿಗಳನ್ನು ಸಲ್ಲಿಸಲಾಗಿದೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಅಲ್ಲದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋ ದಾಖಲೆಗಳೂ ಇವೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಯಾವ ವಾರ್ಡ್‌ನಲ್ಲಿ ಎಷ್ಟು ಹೆಸರು ಡಿಲೀಟ್‌?

ವಾರ್ಡ್ 168 – ಹಲಸೂರು: 54 ಮತದಾರರು

ವಾರ್ಡ್ 169 – ಬೈರಸಂದ್ರ: 525 ಮತದಾರರು

ವಾರ್ಡ್ 170 – ಬೈರಸಂದ್ರ: 719 ಮತದಾರರು

ವಾರ್ಡ್ 171 – ಗುರುಪ್ಪನಪಾಳ್ಯ: 4,327 ಮತದಾರರು

ವಾರ್ಡ್ 177, 178, 179 – ಜಯನಗರ: ಒಟ್ಟು 82 ಮತದಾರರು

ಪ್ರಕರಣದಲ್ಲಿ ಬಿಜೆಪಿ ಮುಖಂಡರಾದ ರಾಮಕೃಷ್ಣ, ಯೋಗೇಶ್ ಸೇರಿದಂತೆ ಒಟ್ಟು ಐವರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ದೂರಿನಲ್ಲಿ ಜಯನಗರ ಶಾಸಕ ಸಿ.ಕೆ ರಾಮಮೂರ್ತಿ ಅವರ ಹೆಸರನ್ನೂ ಉಲ್ಲೇಖಿಸಲಾಗಿದೆ. ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.

ಗಡಿಪಾರಾಗಿದ್ದರೂ ಬೆಂಗಳೂರಲ್ಲೇ ನೆಲೆಸಿದ್ದ 6 ರೌಡಿಶೀಟರ್​ಗಳು ಅರೆಸ್ಟ್​

ಬೆಂಗಳೂರು: ಗಡಿಪಾರಾಗಿದ್ದರೂ ಬೆಂಗಳೂರಲ್ಲೇ ನೆಲೆಸಿದ್ದ 6 ರೌಡಿಶೀಟರ್​ಗಳನ್ನು ಬೆಂಗಳುರು ಪೊಲೀಸರು ಬಂಧಿಸಿ, ಜೈಲಿಗಟ್ಟಿರುವ ಘಟನೆ ನಡೆದಿದೆ.

ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಬಸವೇಶ್ವರ ನಗರ ಠಾಣಾ ವ್ಯಾಪ್ತಿಯ ರೌಡಿಶೀಟರ್ ಉಮೇಶ್ ಅಲಿಯಾಸ್​​ ಲೂಸು, ಗಂಗಮ್ಮನಗುಡಿ ಠಾಣಾ ವ್ಯಾಪ್ತಿಯ ರೌಡಿಶೀಟರ್ ಮಧುಸೂದನ್ ಅಲಿಯಾಸ್​​ ಮಧು, ವಿಲ್ಸನ್ ಗಾರ್ಡನ್ ಠಾಣಾ ವ್ಯಾಪ್ತಿಯ ಮೊಹಮ್ಮದ್ ಆಜಂ ಅಲಿಯಾಸ್​​ ಆಜಂ, ಡಿಜೆ ಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯ ರೌಡಿಶೀಟರ್​ ಮೋಹಿನ್ , ಸುದ್ದಗುಂಟೆಪಾಳ್ಯ ವ್ಯಾಪ್ತಿಯ ರೌಡಿಶೀಟರ್ ಶಿವಕುಮಾರ್ ಅಲಿಯಾಸ್​​ ಚುವ್ವಿ ಮತ್ತು ಮಡಿವಾಳ ಠಾಣಾ ವ್ಯಾಪ್ತಿಯ ರೌಡಿಶೀಟರ್ ಅಕ್ಷಯ್​​ನನ್ನು ಬಂಧಿಸಲಾಗಿದೆ.

ಈ ಆರೂ ರೌಡಿಶೀಟರ್ ಗಳನ್ನು ಬೆಂಗಳುರಿನಂದ ಗಡಿಪಾರು ಮಾಡಿ ಆದೇಶ ಹೊರಡಿಸಲಾಗಿತ್ತು. ಆದಾಗ್ಯೂ ಬೆಂಗಳೂರು ಬಿಟ್ಟು ಹೋಗಿರಲಿಲ್ಲ. ಈ ಹಿನ್ನೆಲೆಯಲ್ಲಿ ಆರು ರೌಡಿಗಳನ್ನು ಬಂಧಿಸಲಾಗಿದ್ದು, ಬಂಧಿತರನ್ನು ಪೊಲೀಸರು ಪರಪ್ಪನ ಅಗ್ರಹಾರ ಜೈಲಿಗಟ್ಟಿದ್ದಾರೆ.

For Latest News Updates, Join Our Whatsapp Community🚩
RELATED ARTICLES

LEAVE A REPLY

Please enter your comment!
Please enter your name here

Most Popular