HomeInternationalUpdate : ಅಮೆರಿಕದಲ್ಲಿ ಹಡಗು ಡಿಕ್ಕಿಯಾಗಿ ಸೇತುವೆ ಕುಸಿದ ಪ್ರಕರಣ, ಇದುವರೆಗೆ 6 ಮಂದಿ ಸಾವು...

Update : ಅಮೆರಿಕದಲ್ಲಿ ಹಡಗು ಡಿಕ್ಕಿಯಾಗಿ ಸೇತುವೆ ಕುಸಿದ ಪ್ರಕರಣ, ಇದುವರೆಗೆ 6 ಮಂದಿ ಸಾವು ..!

ಹೈದರಾಬಾದ್ : ಅಮೆರಿಕದಲ್ಲಿ ಹಡಗು ಡಿಕ್ಕಿ ಹೊಡೆದ ಪರಿಣಾಮ ಬಾಲ್ಟಿಮೋರ್ ನಗರದಲ್ಲಿ ಸೇತುವೆ ಕುಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿದೆ.

ಹಡಗು ಫ್ರಾನ್ಸಿಸ್ ಸ್ಕಾಟ್ ಕೀ ಸೇತುವೆ ಡಿಕ್ಕಿ ಹೊಡೆದಿದ್ದು, 6 ಮಂದಿ ಮೃತಪಟ್ಟಿದ್ದು, ಶವಗಳನ್ನು ಹೊರಕ್ಕೆ ತೆಗೆಯಲಾಗಿದೆ.

ಅಪಘಾತದ ಪರಿಣಾಮ ಸೇತುವೆಯ ಮೇಲಿಂದ ಹಲವಾರು ವಾಹನಗಳು ನದಿಗೆ ಬಿದ್ದಿವೆ. ಕನಿಷ್ಠ 20 ಜನರು ಕಾಣೆಯಾಗಿದ್ದಾರೆ ಎಂದು ವರದಿಯಾಗಿತ್ತು. ಈ ಪೈಕಿ 6 ಮಂದಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ಕಳೆದ ಸೋಮವಾರ ಮಧ್ಯರಾತ್ರಿಯ ನಂತರ ದೊಡ್ಡ ಪ್ರಮಾಣದ ಕಂಟೈನರ್ ಹಡಗು ಸೇತುವೆಗೆ ಡಿಕ್ಕಿ ಹೊಡೆದಿದೆ. ಸೇತುವೆ ಮಕ್ಕಳ ಆಟಿಕೆಯಂತೆ ಕುಸಿಯುವ ದೃಶ್ಯಗಳು ವೈರಲ್ ಆಗಿವೆ. ಕಳೆದ ತಿಂಗಳು ಚೀನಾದಲ್ಲಿ ಇದೇ ರೀತಿಯ ಘಟನೆ ನಡೆದಿತ್ತು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

https://twitter.com/i/status/1772508796729852383

For Latest News Updates, Join Our Whatsapp Community🚩
ranjith
ranjith
Ranjith S S has a decade of experience in digital media. covering stories that spark conversations across the internet, Breaking news, viral moments and celebrity updates to everyday news that gets people talking.
RELATED ARTICLES

Most Popular