HomeIndiaಲೋಕಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಶಾಕ್: ಬಿಜೆಪಿ ಸೇರಿದ ಹಾಲಿ ಸಂಸದ ರವನೀತ್ ಸಿಂಗ್

ಲೋಕಸಭೆ ಚುನಾವಣೆ ಹೊತ್ತಲ್ಲೇ ಕಾಂಗ್ರೆಸ್ ಗೆ ಶಾಕ್: ಬಿಜೆಪಿ ಸೇರಿದ ಹಾಲಿ ಸಂಸದ ರವನೀತ್ ಸಿಂಗ್

ಪಂಜಾಬ್‌ನ ಲೂಧಿಯಾನದ ಕಾಂಗ್ರೆಸ್ ಸಂಸದ ರವನೀತ್ ಸಿಂಗ್ ಬಿಟ್ಟು ಲೋಕಸಭೆ ಚುನಾವಣೆಗೂ ಮುನ್ನ ಬಿಜೆಪಿ ಸೇರಿದ್ದಾರೆ.

ರವನೀತ್ ಸಿಂಗ್ ಬಿಟ್ಟು ಮಂಗಳವಾರ ಲೋಕಸಭೆ ಚುನಾವಣೆಗೆ ಮುನ್ನ ಭಾರತೀಯ ಜನತಾ ಪಕ್ಷ ಸೇರಿದ್ದಾರೆ. 2009 ರಿಂದ 2014 ರವರೆಗೆ ಪಂಜಾಬ್‌ನ ಆನಂದ್‌ಪುರ್ ಸಾಹಿಬ್ ಲೋಕಸಭಾ ಕ್ಷೇತ್ರವನ್ನು ರವನೀತ್ ಸಿಂಗ್ ಬಿಟ್ಟು ಪ್ರತಿನಿಧಿಸಿದ್ದರು. 2009 ರ ಲೋಕಸಭೆ ಚುನಾವಣೆಯಲ್ಲಿ, ಬಿಟ್ಟು ಶಿರೋಮಣಿ ಅಕಾಲಿದಳದ(ಎಸ್‌ಎಡಿ) ಡಾ ದಲ್ಜಿತ್ ಸಿಂಗ್ ಚೀಮಾ ಅವರನ್ನು 67,204 ಮತಗಳ ಅಂತರದಿಂದ ಸೋಲಿಸಿದರು.

ರವನೀತ್ ಸಿಂಗ್ ಬಿಟ್ಟು ಈ ಹಿಂದೆ 2021ರ ಮಾರ್ಚ್‌ನಿಂದ ಜುಲೈ ವರೆಗೆ ಲೋಕಸಭೆಯಲ್ಲಿ ಕಾಂಗ್ರೆಸ್ ನಾಯಕರಾಗಿ ಸೇವೆ ಸಲ್ಲಿಸಿದ್ದರು. ಬಿಟ್ಟು ಲೋಕಸಭೆಗೆ, 2014, 2019ರ ಅಸೆಂಬ್ಲಿ ಚುನಾವಣೆಗಳಲ್ಲಿ ಲೂಧಿಯಾನದಿಂದ ಮತ್ತು 2009ರಲ್ಲಿ ಆನಂದಪುರ ಸಾಹಿಬ್‌ನಿಂದ ಚುನಾಯಿತರಾಗಿದ್ದರು.

📱 ಬ್ರೇಕಿಂಗ್ ನ್ಯೂಸ್ ಬೇಗ ಬೇಕೆ?KannadaDunia App ಡೌನ್‌ಲೋಡ್ ಮಾಡಿ, ತಾಜಾ ಸುದ್ದಿ ಮೊದಲು ಪಡೆಯಿರಿ.
APP ತೆರೆಯಿರಿ

For Latest News Updates, Join Our Whatsapp Community🚩
niranjan
niranjan
Niranjan working in media filed from 24 years. He worked in Hubballi Udayavani and local newspapers in Shivamogga. ನಿರಂಜನ ಮೂರ್ತಿ ಎಚ್.ಸಿ. 24 ವರ್ಷಗಳಿಂದ ಮಾಧ್ಯಮ ಕ್ಷೇತ್ರದಲ್ಲಿದ್ದಾರೆ. ಎಂಎ ಕನ್ನಡ, ಪಿಜಿ ಡಿಪ್ಲೊಮಾ ಇನ್ ಜರ್ನಲಿಸಂ ವ್ಯಾಸಂಗ ಮಾಡಿದ್ದಾರೆ. ಶಿವಮೊಗ್ಗದ ಎಚ್ಚರಿಕೆ, ನಮ್ಮನಾಡು, ಜೈ ಕರುನಾಡು, ನುಡಿಗಿಡ, ಕ್ರಾಂತಿ ಭಗತ್ ಸ್ಥಳೀಯ ಪತ್ರಿಕೆಗಳಲ್ಲಿ ವರದಿಗಾರನಾಗಿ, ಹುಬ್ಬಳ್ಳಿಯ ಉದಯವಾಣಿಯಲ್ಲಿ ಉಪ ಸಂಪಾದಕರಾಗಿ ಕಾರ್ಯ ನಿರ್ವಹಣೆ ಮಾಡಿದ್ದಾರೆ.
RELATED ARTICLES

Most Popular